ಮಂಗಳವಾರ, ಮೇ 18, 2021
24 °C

ಮಂಗಳ ಗ್ರಹಕ್ಕೆ ಕಳುಹಿಸಲು ಹೆಸರು ಆಹ್ವಾನಿಸಿದ ನಾಸಾ

ಪಿಟಿಐ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ, ಮಂಗಳ ಗ್ರಹಕ್ಕೆ ಕಳುಹಿಸಲು ಸಾರ್ವಜನಿಕರಿಂದ ಹೆಸರು ಆಹ್ವಾನಿಸಿದೆ.

ಮಂಗಳ ಗ್ರಹಕ್ಕೆ ಮೊದಲ ಬಾರಿಗೆ ಮಾನವಸಹಿತ ಗಗನ ನೌಕೆಯನ್ನು ಕಳುಹಿಸಲು ಸಿದ್ಧತೆ ನಡೆಸುತ್ತಿರುವ ನಾಸಾ, ಅದಕ್ಕಿಂತಲೂ ಒಂದು ವರ್ಷ ಮೊದಲು ಜನರ ಹೆಸರುಗಳನ್ನು ಚಿಪ್‌ಗಳಲ್ಲಿ ಕೊರೆದು, ರೋವರ್‌ ಬಾಹ್ಯಾಕಾಶ ನೌಕೆಯ ಮೂಲಕ ಮಂಗಳ ಗ್ರಹಕ್ಕೆ ಕಳುಹಿಸಲಿದೆ.  

2020 ಜುಲೈಯಲ್ಲಿ ರೋವರ್‌ ಗಗನ ನೌಕೆಯನ್ನು ಮಂಗಳಗ್ರಹಕ್ಕೆ ಕಳುಹಿಸಲು ನಾಸಾ ಸಿದ್ಧತೆ ನಡೆಸಿದೆ. ಈ ನೌಕೆಯು 2021ರ ಫೆಬ್ರುವರಿಯಲ್ಲಿ ಮಂಗಳನ ಅಂಗಳದಲ್ಲಿ ಇಳಿಯಲಿದೆ ಎಂದು ನೀರೀಕ್ಷಿಸಲಾಗಿದೆ.

ಸಾವಿರ ಕಿ.ಗ್ರಾಂ. ಭಾರದ ಮಾನವರಹಿತ ಗಗನ ನೌಕೆ ರೋವರ್‌, ಮಂಗಳ ಗ್ರಹದಲ್ಲಿ ಸೂಕ್ಷ್ಮ ಜೀವಿಗಳ ಇರುವಿಕೆ, ಅಲ್ಲಿನ ವಾತಾವರಣ ಮೊದಲಾದವುಗಳ ಕುರಿತು ಅಧ್ಯಯನ ನಡೆಸಲಿದೆ. 

20ಲಕ್ಷಕ್ಕೂ ಹೆಚ್ಚು ಹೆಸರುಗಳನ್ನು ನಾಸಾ ಈ ನೌಕೆಯ ಮೂಲಕ ಮಂಗಳ ಗ್ರಹಕ್ಕೆ ಕಳುಹಿಸಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು