ವಾಗ್ದೇವಿಯಲ್ಲಿ ರಾಷ್ಟ್ರೀಯ ಕಾರ್ಯಾಗಾರ

7

ವಾಗ್ದೇವಿಯಲ್ಲಿ ರಾಷ್ಟ್ರೀಯ ಕಾರ್ಯಾಗಾರ

Published:
Updated:
Prajavani

ಗಿರಿನಗರದ ಎಸ್‌ಜಿಎಸ್‌ ವಾಗ್ದೇವಿ ಕೇಂದ್ರದ 23ನೇ ವಾರ್ಷಿಕೋತ್ಸವದ ಪ್ರಯುಕ್ತ ಇತ್ತೀಚೆಗೆ ರಾಷ್ಟ್ರಮಟ್ಟದ ಕಾರ್ಯಾಗಾರ ಆಯೋಜಿಸಲಾಗಿತ್ತು. ಮಾತು ಬಾರದ ಮಕ್ಕಳ ಪೋಷಕರು, ವಿಶೇಷ ಶಿಕ್ಷಕರು, ಸಾಮಾನ್ಯ ಶಾಲೆಯ ಶಿಕ್ಷಕರು ಮತ್ತು ಶ್ರವಣದೋಷವಿರುವ ಮಕ್ಕಳಿಗಾಗಿ ದುಡಿಯುತ್ತಿರುವ ಸ್ವಯಂಸೇವಾ ಸಂಸ್ಥೆಯ ಸದಸ್ಯರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಕಾರ್ಯಾಗಾರದಲ್ಲಿ ಮುಖ್ಯವಾಗಿ ‘ಕಾಕ್ಲಿಯರ್‌ ಇಂಪ್ಲಾಂಟ್‌’ ಕುರಿತು ಮಾಹಿತಿ ನೀಡಲಾಯಿತು. ಶಸ್ತ್ರಚಿಕಿತ್ಸೆಯ ಮೊದಲು ಮತ್ತು ನಂತರ ವಹಿಸಬೇಕಾದ ಕ್ರಮಗಳು, ಶ್ರವಣ ದೋಷವನ್ನು ಬಹಳ ಬೇಗ ಗುರುತಿಸುವುದರಿಂದ ಆಗುವ ಪ್ರಯೋಜನ, ಮಾತು ಕಲಿಸುವ ತಂತ್ರ, ಕಿವಿ ಕೇಳಿಸದ, ಮಾತು ಬಾರದ ಮಕ್ಕಳಿಗಾಗಿ ಪಠ್ಯಪುಸ್ತಕಗಳು ಮುಂತಾದ ವಿಷಯಗಳ ಬಗ್ಗೆ ತಜ್ಞರು ಮಾಹಿತಿ ನೀಡಿದರು. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಪ್ರತಿನಿಧಿಗಳು ಬಂದಿದ್ದರು.

ಇದೇ ಸಂದರ್ಭದಲ್ಲಿ ‘ಕಾಕ್ಲಿಯರ್‌ ಇಂಪ್ಲಾಂಟ್‌’ ಪುಸ್ತಕವನ್ನು ‘ಪ್ರಜಾವಾಣಿ’ಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಬಿಡುಗಡೆ ಮಾಡಿದರು. ಡಾ. ಶಾಂತಾ ರಾಧಾಕೃಷ್ಣ ದತ್ತಿ ಪ್ರಶಸ್ತಿಯನ್ನು ರವೀಂದ್ರ ಭಟ್ಟ ಅವರಿಗೆ ಪ್ರದಾನ ಮಾಡಲಾಯಿತು. ವೈದ್ಯೆ ಡಾ. ಲಕ್ಷ್ಮೀ ಸತೀಶ್‌ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !