ಕ್ವಾರ್ಟರ್‌ಫೈನಲ್‌ಗೆ ಅಜಯ್‌

7

ಕ್ವಾರ್ಟರ್‌ಫೈನಲ್‌ಗೆ ಅಜಯ್‌

Published:
Updated:
ಕ್ವಾರ್ಟರ್‌ಫೈನಲ್‌ಗೆ ಅಜಯ್‌

ಅಲ್‌ಮೆರೆ, ನೆದರ್ಲೆಂಡ್ಸ್‌ : ಹಾಲಿ ಚಾಂಪಿಯನ್‌ ಅಜಯ್‌ ಜಯ ರಾಮ್‌ ಅವರು ಡಚ್‌ ಓಪನ್‌ ಬ್ಯಾಡ್ಮಿಂ ಟನ್‌ ಟೂರ್ನಿಯಲ್ಲಿ ಗೆಲುವಿನ ಓಟ ಮುಂದುವರಿಸಿದ್ದು ಸಿಂಗಲ್ಸ್‌ ವಿಭಾಗ ದಲ್ಲಿ  ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನದ ಸಾಧನೆ ಮಾಡಿರುವ ಪರುಪಳ್ಳಿ ಕಶ್ಯಪ್‌  ಅವರು 16ರ ಘಟ್ಟಕ್ಕೆ ಲಗ್ಗೆ ಇಟ್ಟಿದ್ದಾರೆ.

ಗುರುವಾರ ನಡೆದ ಪ್ರಿ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ಜಯರಾಮ್‌ 21–6, 21–6ರಲ್ಲಿ ನಾರ್ವೆಯ ಮರಿಯಾಸ್‌ ಮೈಹ್ರೆ ಅವರನ್ನು ಸೋಲಿಸಿದರು.

ಎರಡನೇ ಸುತ್ತಿನ ಹಣಾಹಣಿಯಲ್ಲಿ ಜಯರಾಮ್‌ 21–7, 21–9ರ ನೇರ ಗೇಮ್‌ಗಳಿಂದ ಬಲ್ಗೇರಿಯಾದ  ಫಿಲಿಪ್‌ ಶಿಸೊವ್‌ ಅವರನ್ನು ಪರಾಭವಗೊಳಿಸಿದ್ದರು.

ಇಲ್ಲಿ ಅಗ್ರಶ್ರೇಯಾಂಕ ಹೊಂದಿರುವ ಜಯರಾಮ್‌ ಆರಂಭದಿಂದಲೇ ಗುಣ ಮಟ್ಟದ ಆಟಕ್ಕೆ ಒತ್ತು ನೀಡಿದರು.  ಟೂರ್ನಿಯಲ್ಲಿ ಮೂರು ಬಾರಿ ಪ್ರಶಸ್ತಿ ಎತ್ತಿಹಿಡಿದಿರುವ ಭಾರತದ ಆಟಗಾರ  ಚುರುಕಿನ ಸರ್ವ್‌ ಹಾಗೂ ಅಮೋಘ ಡ್ರಾಪ್‌ಗಳ ಮೂಲಕ ಪಾಯಿಂಟ್ಸ್‌ ಹೆಕ್ಕಿದರು.

ಇದರಿಂದ ಒತ್ತಡಕ್ಕೆ ಒಳಗಾದಂತೆ ಕಂಡ ಬಲ್ಗೇರಿಯಾದ ಆಟಗಾರ ಹಲವು ಸ್ವಯಂಕೃತ ತಪ್ಪುಗಳನ್ನು ಮಾಡಿ ಪಾಯಿಂಟ್ಸ್‌ ಕೈಚೆಲ್ಲಿದರು.

ಇದರ ಪೂರ್ಣ ಲಾಭ ಎತ್ತಿಕೊಂಡ ಜಯರಾಮ್‌ ನಿರಾಯಾಸವಾಗಿ ಗೇಮ್‌ ಜಯಿಸಿ ಮುನ್ನಡೆ ಕಂಡುಕೊಂಡರು.

ಎರಡನೇ ಗೇಮ್‌ನಲ್ಲಿ ಶಿಸೊವ್‌ ತಿರುಗೇಟು ನೀಡಬಹುದೆಂಬ ನಿರೀಕ್ಷೆ ಯೂ ಹುಸಿಯಾಯಿತು.  ಶುರುವಿನಲ್ಲಿ ಭಾರತದ ಆಟಗಾರನಿಗೆ ಅಲ್ಪ ಪ್ರತಿ ರೋಧ ಒಡ್ಡಿದ ಅವರು 9–9ರಲ್ಲಿ ಸಮಬಲ ಮಾಡಿಕೊಂಡಿದ್ದರು.

ಆ ನಂತರ ಜಯರಾಮ್‌ ಅಂಗಳದಲ್ಲಿ ಅಬ್ಬರಿಸಿದರು.  ಭಾರತದ ಆಟಗಾರ ರಭಸವಾಗಿ ಬಾರಿಸುತ್ತಿದ್ದ ಷಟಲ್‌ ಅನ್ನು ಹಿಂತಿರುಗಿಸಲು ಬಲ್ಗೇ ರಿಯಾದ ಆಟಗಾರ ಪ್ರಯಾಸ ಪಟ್ಟರು.

ಇದರಿಂದ ಇನ್ನಷ್ಟು ವಿಶ್ವಾಸ ಹೆಚ್ಚಿಸಿ ಕೊಂಡ ಜಯರಾಮ್‌ ಎದು ರಾಳಿಯ ಮೇಲೆ ಪ್ರಭುತ್ವ ಸಾಧಿಸಿ ಏಕಪಕ್ಷೀಯ ವಾಗಿ ಗೆಲುವು ಒಲಿಸಿಕೊಂಡರು.

ಕಶ್ಯಪ್‌ ಮಿಂಚು: ಇಲ್ಲಿ 11ನೇ ಶ್ರೇಯಾಂಕ ಪಡೆದಿರುವ ಪರುಪಳ್ಳಿ ಕಶ್ಯಪ್‌ ಅವರೂ ಪ್ರಶಸ್ತಿಯತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಎರಡನೇ ಸುತ್ತಿನ ಹೋರಾಟ ದಲ್ಲಿ ಕಶ್ಯಪ್‌ 21–11, 7–21, 21–10 ರಲ್ಲಿ  ಡೆನ್ಮಾರ್ಕ್‌ನ  ರಾಸ್‌ಮಸ್‌  ಜೆಮ್ಕೆ ವಿರುದ್ಧ ಗೆದ್ದರು.

50 ನಿಮಿಷಗಳ ಹೋರಾಟದಲ್ಲಿ ಮೊದಲ ಗೇಮ್‌ನಲ್ಲಿ ಗೆದ್ದ ಕಶ್ಯಪ್‌ ಎರಡನೇ ಗೇಮ್‌ನಲ್ಲಿ ಮುಗ್ಗರಿಸಿದರು. ಆದರೆ ನಿರ್ಣಾಯಕ ಗೇಮ್‌ನಲ್ಲಿ ಅವರು ಮಿಂಚಿದರು.

ಮುಂದಿನ ಸುತ್ತಿನಲ್ಲಿ ಕಶ್ಯಪ್‌ ಅವರು ಎಸ್ತೋನಿಯಾದ ರೌಲ್‌ ಮಸ್ಟ್‌ ವಿರುದ್ಧ ಆಡುವರು.

ಇನ್ನೊಂದು ಪಂದ್ಯದಲ್ಲಿ ರೌಲ್‌ 21–17, 21–17ರಲ್ಲಿ ಭಾರತದ ಲಖನೀ ಸರಂಗ್‌ ಅವರನ್ನು ಸೋಲಿಸಿದರು.

ಮಿಶ್ರ ಡಬಲ್ಸ್‌ ವಿಭಾಗದ ಪಂದ್ಯದಲ್ಲಿ ಬಿ. ಸುಮೀತ್‌ ರೆಡ್ಡಿ ಮತ್ತು  ಮೇಘನಾ ಜಕ್ಕಂಪುಡಿ 21–11, 21–17ರಲ್ಲಿ ಜರ್ಮನಿಯ ಡೇನಿಯಲ್‌ ಬೆಂಜ್‌ ಮತ್ತು  ತೆರೆಸಾ ವುರ್ಮ್‌ ಅವರನ್ನು ಮಣಿಸಿದರು.

ಭಾರತದ ಜೋಡಿ ಮುಂದಿನ ಸುತ್ತಿನಲ್ಲಿ  ನೆದರ್ಲೆಂಡ್ಸ್‌ನ ಜೆಲ್ಲೆ ಮಾಸ್‌ ಮತ್ತು ಇಮ್ಕೆ ವಾನ್‌ ಡರ್‌ ಆರ್‌ ವಿರುದ್ಧ ಪೈಪೋಟಿ ನಡೆಸಲಿದೆ.

ಈ ವಿಭಾಗದ ಇನ್ನೊಂದು ಪಂದ್ಯದಲ್ಲಿ ಇಲ್ಲಿ ನಾಲ್ಕನೇ ಶ್ರೇಯಾಂಕ ಹೊಂದಿರುವ ಎನ್‌. ಸಿಕ್ಕಿ ರೆಡ್ಡಿ ಮತ್ತು  ಪ್ರಣವ್‌ ಜೆರ್ರಿ ಚೋಪ್ರಾ 21–5, 21–16 ರಲ್ಲಿ ನೆದರ್ಲೆಂಡ್ಸ್‌ನ ತಿಯೆಸ್‌ ವಾನ್‌ ಡರ್‌ ಲೆಕ್ ಮತ್ತು ಅಲಿಸಾ ಟರ್ಟೊಸೆಂಟೊನೊ ಅವರನ್ನು ಪರಾಭವಗೊಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry