ಐಎಸ್‌ ಪ್ರತೀಕಾರ: 30 ನಾಗರಿಕರನ್ನು ಅಪಹರಿಸಿ ಹತ್ಯೆ

7

ಐಎಸ್‌ ಪ್ರತೀಕಾರ: 30 ನಾಗರಿಕರನ್ನು ಅಪಹರಿಸಿ ಹತ್ಯೆ

Published:
Updated:

ಕಾಬುಲ್‌ : ಇಸ್ಲಾಮಿಕ್‌ ಸ್ಟೇಟ್‌ ಉಗ್ರರೊಂದಿಗೆ ಸಂಪರ್ಕ ಹೊಂದಿರುವ ಉಗ್ರರ ಗುಂಪೊಂದು   ಆಪ್ಘಾನಿಸ್ತಾನದ ಪ್ರಾಂತೀಯ ರಾಜಧಾನಿ ಫೈರೋಜ್‌ ಕೋಹದ 30 ಕುರಿಗಾಹಿಗಳ ಹತ್ಯೆ ನಡೆಸಿದೆ ಎಂದು ಸ್ಥಳೀಯ ಸರ್ಕಾರ ತಿಳಿಸಿದೆ.ಸರ್ಕಾರಿ ಪಡೆಗಳು ಸ್ಥಳೀಯರ ಸಹಕಾರದೊಂದಿಗೆ ಮಂಗಳವಾರ ಕಾರ್ಯಾಚರಣೆ ನಡೆಸಿ ದಯಿಷ್‌ ಉಗ್ರ ಸಂಘಟನೆಯ ಕಮಾಂಡರ್‌ನನ್ನು ಕೊಂದಿದ್ದರು.  ಇದಕ್ಕೆ ಪ್ರತಿಕಾರ ತೀರಿಸಿಕೊಳ್ಳಲು ದಯೀಷ್‌ ಉಗ್ರರು ಮಕ್ಕಳು ಸೇರಿದಂತೆ 30 ಕುರಿಗಾಹಿಗಳನ್ನು ಮಂಗಳವಾರ ಸಂಜೆಯ ಹೊತ್ತಿಗೆ ಅಪಹರಿಸಿ ಕೊಂದು ಹಾಕಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಮೃತದೇಹಗಳನ್ನು ಸ್ಥಳೀಯರು ಬುಧವಾರ ಗುರುತಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry