ಶುಕ್ರವಾರ, ಆಗಸ್ಟ್ 7, 2020
23 °C
ಮೆಡೆಲಿನ್‌ ನಗರ ಸಮೀಪದ ಗುಡ್ಡಗಾಡು ಪ್ರದೇಶದಲ್ಲಿ ದುರಂತ * ರಕ್ಷಣಾ ಕಾರ್ಯಕ್ಕೆ ಅಡ್ಡಿಯಾದ ಮಳೆ

ಕೊಲಂಬಿಯಾ ವಿಮಾನ ಪತನ: 76 ಸಾವು

ಎಪಿ Updated:

ಅಕ್ಷರ ಗಾತ್ರ : | |

ಕೊಲಂಬಿಯಾ ವಿಮಾನ ಪತನ: 76 ಸಾವು

ಬೊಗೊಟಾ : ಕೊಲಂಬಿಯಾದ ಮೆಡೆಲಿನ್‌ ನಗರದ ಸಮೀಪದ ಗುಡ್ಡಗಾಡು ಪ್ರದೇಶದಲ್ಲಿ ಲಘು ವಿಮಾನ ಪತನಗೊಂಡು 76 ಜನ ಮೃತಪಟ್ಟಿದ್ದಾರೆ. ದಕ್ಷಿಣ ಬ್ರೆಜಿಲ್‌ನ ಮೊದಲ ಡಿವಿಷನ್ ಫುಟ್ಬಾಲ್ ತಂಡದ ಆಟಗಾ ರರೂ ಸೇರಿ 82 ಪ್ರಯಾಣಿಕರು ವಿಮಾನದಲ್ಲಿದ್ದರು. ವಿಮಾನ ಪತನಗೊಳ್ಳಲು ತಾಂತ್ರಿಕ ವೈಫಲ್ಯ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತೀಯ ಕಾಲಮಾನ ಬೆಳಿಗ್ಗೆ 8.30ಕ್ಕೆ (ಸ್ಥಳೀಯ ಕಾಲಮಾನ ಸೋಮ ವಾರ ರಾತ್ರಿ 10.30) ವಿಮಾನ ಅಪಘಾತಕ್ಕೀಡಾಗಿದೆ. ತಾಂತ್ರಿಕ ವೈಫಲ್ಯ ಪತನಗೊಳ್ಳಲು ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಫುಟ್ಬಾಲ್‌ ಕೊನೆಯ ಪಂದ್ಯವೊಂದರಲ್ಲಿ ಆಡಲು  ಈ  ಆಟಗಾರರು ವಿಮಾನದಲ್ಲಿ ಕೊಲಂಬಿಯಾಗೆ ತೆರಳುತ್ತಿದ್ದರು. 

‘ಇದೊಂದು ದೊಡ್ಡ ಪ್ರಮಾಣದ ದುರಂತ’ ಎಂದು ಮೆಡಲಿನ್‌ನ ಮೇಯರ್ ಫೆಡೆರಿಕೊ ಗ್ವಿಟ್ರೆಜ್‌ ತಿಳಿಸಿದ್ದಾರೆ. ದುರಂತ ಸಂಭವಿಸಿದ ಪ್ರದೇಶ ನಗರದ ಹೊರವಲಯದಲ್ಲಿದ್ದು, ಗುಡ್ಡಗಳಿಂದ ಆವೃತವಾಗಿದೆ ಎಂದೂ ಅವರು ತಿಳಿಸಿದ್ದಾರೆ. ವಿಮಾನ ಅಪಘಾತಕ್ಕೀಡಾದ ತಕ್ಷಣವೇ ರಕ್ಷಣಾ ಕಾರ್ಯಚರಣೆ ಆರಂಭಿಸಲಾಗಿದೆ. ಆದರೆ, ಮಬ್ಬು ಕವಿದ ವಾತಾವರಣ ಇದ್ದ ಕಾರಣ ವಾಯುಪಡೆಯ ಹೆಲಿಕಾಪ್ಟರ್‌ ಆ ಪ್ರದೇಶಕ್ಕೆ ತೆರಳಲು ಸಾಧ್ಯವಾಗದೆ ವಾಪಸಾಯಿತು. ಕಳೆದ ಮೂರು ದಿನಗಳಿಂದ ಮಳೆಯಾಗುತ್ತಿರುವುದೂ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ಬುಧವಾರದ ಪಂದ್ಯದಲ್ಲಿ ಆಡಲಿದ್ದರು: ದಕ್ಷಿಣ ಬ್ರೆಜಿಲ್‌ನ ಮೊದಲ ಡಿವಿಷನ್‌ ಫುಟ್ಬಾಲ್ ತಂಡದ ಆಟಗಾರರು ಬುಧವಾರ ನಡೆಯಲಿರುವ ಪಂದ್ಯದಲ್ಲಿ ಮೆಡಲಿನ್‌ನ ತಂಡದ ವಿರುದ್ಧ ಆಟವಾಡಲಿದ್ದರು.

ಇತ್ತೀಚೆಗೆ ಬ್ರೆಜಿಲ್‌ನಲ್ಲಿ ನಡೆದಿದ್ದ ಪಂದ್ಯವೊಂದಕ್ಕೆ ಅರ್ಜೆಂಟೀನಾದ ರಾಷ್ಟ್ರೀಯ ತಂಡವನ್ನು ಇದೇ ವಿಮಾನವು ಕರೆದೊಯ್ದಿತ್ತು. ವೆನೆಜುವೆಲಾದ ರಾಷ್ಟ್ರೀಯ ಫುಟ್ಬಾಲ್ ತಂಡದ ಸದಸ್ಯರನ್ನೂ ಕರೆದೊಯ್ದಿತ್ತು ಎಂದು ಸ್ಥಳೀಯ ರೇಡಿಯೊ ವರದಿ ಮಾಡಿದೆ.

ಆರು ಪ್ರಯಾಣಿಕರ ರಕ್ಷಣೆ: ದುರಂತಕ್ಕೀಡಾದ ವಿಮಾನದಿಂದ ಆರು ಮಂದಿಯನ್ನು ರಕ್ಷಿಸಲಾಗಿದೆ. ಇವರಲ್ಲಿ ನಾಲ್ವರು ಫುಟ್ಬಾಲ್‌ ಆಟಗಾರರು ಎಂದು ಮೆಡಲಿನ್‌ನ ನೆರೆಯ ನಗರ ಲಾ ಸೆಜಾದ ಮೇಯರ್ ಎಲ್ಕಿನ್ ಒಸೊರಿಯೊ ತಿಳಿಸಿದ್ದಾರೆ.ಮುಖ್ಯಾಂಶಗಳು* ಬ್ರೆಜಿಲ್‌ನ ಚಪೆಕೊದಿಂದ ಕೊಲಂಬಿಯಾಕ್ಕೆ ತೆರಳುತ್ತಿದ್ದ ವಿಮಾನ

* ಬದುಕುಳಿದ ನಾಲ್ವರು ಫುಟ್ಬಾಲ್ ಆಟಗಾರು

* ತಾಂತ್ರಿಕ ವೈಫಲ್ಯ ಪತನಕ್ಕೆ ಕಾರಣಅಂಕಿ ಅಂಶ

* 82 ವಿಮಾನದಲ್ಲಿದ್ದವರ ಸಂಖ್ಯೆ

* 76 ಮೃತಪಟ್ಟ ಪ್ರಯಾಣಿಕರು

* 6 ಮಂದಿ ಬದುಕುಳಿದವರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.