ಸೇನಾ ಹೆಲಿಕಾಪ್ಟರ್ ಪತನ; 3 ಸಾವು

7

ಸೇನಾ ಹೆಲಿಕಾಪ್ಟರ್ ಪತನ; 3 ಸಾವು

Published:
Updated:
ಸೇನಾ ಹೆಲಿಕಾಪ್ಟರ್ ಪತನ; 3 ಸಾವು

ಕೊಲ್ಕತ್ತಾ: ಸೇನಾ ಪಡೆಯ ಹೆಲಿಕಾಪ್ಟರ್ ಪತನಗೊಂಡಿದ್ದು, ಮೂವರು ಅಧಿಕಾರಿಗಳು ಸಾವಿಗೀಡಾಗಿದ್ದಾರೆ.

ಇಂದು ಬೆಳಗ್ಗೆ 11.45ರ ವೇಳೆ ಪಶ್ಚಿಮ ಬಂಗಾಳದ ಸುಖ್ನಾ ಎಂಬಲ್ಲಿ ಸೇನಾಪಡೆಯ ಚೀತಾ ಹೆಲಿಕಾಪ್ಟರ್ ಪತನವಾಗಿದೆ. ಈ ದುರ್ಘಟನೆಯಲ್ಲಿ ಮೂವರು ಅಧಿಕಾರಿಗಳು ಸಾವಿಗೀಡಾಗಿದ್ದು,  ಓರ್ವ ಅಧಿಕಾರಿ ಜೀವಾಪಾಯದಿಂದ ಪಾರಾಗಿದ್ದಾರೆ ಎಂದು ಸೇನಾ ಮೂಲಗಳು ಹೇಳಿವೆ.

ಘಟನೆಯಲ್ಲಿ ಗಾಯಗೊಂಡಿರುವ ಜೂನಿಯರ್ ಕಮಿಷನ್ಡ್ ಆಫೀಸರ್ (ಜೆಸಿಒ) ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ.

ಸಖ್ನಾ ವಾಯು ನೆಲೆಯಲ್ಲಿ ಎಂದಿನಂತೆ ಹಾರಾಟ ನಡೆಸಿ ಇನ್ನೇನು ಕೆಳಗಿಳಿಯುತ್ತಿದ್ದಂತೆ ಹೆಲಿಕಾಪ್ಟರ್ ಪತನವಾಗಿದೆ.

ಈ ಘಟನೆ ಬಗ್ಗೆ ತನಿಖೆ ನಡೆಸುವಂತೆ ನ್ಯಾಯಾಲಯ ಆದೇಶಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry