ಕ್ರೆಡಿಟ್‌ ಕಾರ್ಡ್‌ ಭದ್ರತೆ; ಕಾಡುವ ಅನುಮಾನಗಳು

7

ಕ್ರೆಡಿಟ್‌ ಕಾರ್ಡ್‌ ಭದ್ರತೆ; ಕಾಡುವ ಅನುಮಾನಗಳು

Published:
Updated:
ಕ್ರೆಡಿಟ್‌ ಕಾರ್ಡ್‌ ಭದ್ರತೆ; ಕಾಡುವ ಅನುಮಾನಗಳು

ಸ್ಮಾರ್ಟ್‌ಫೋನ್‌ ಪರದೆಯಲ್ಲಿ ದಿಢೀರನೆ ಪ್ರತ್ಯಕ್ಷವಾಗುವ ಕೆಲವು ನೊಟಿಫಿಕೇಷನ್‌ಗಳು ಬಳಕೆದಾರರನ್ನು ಬೆಚ್ಚಿ ಬೀಳಿಸುವುದುಂಟು. ಹಣಕಾಸು ವಹಿವಾಟಿಗೆ ಸಂಬಂಧಿಸಿದ ತೀರಾ ವೈಯಕ್ತಿಕ ಅಥವಾ ಖಾಸಗಿ ಮಾಹಿತಿಯನ್ನು ಈ ಸಂದೇಶ ಒಳಗೊಂಡಿರುತ್ತವೆ. ಇಂತಹ ಸಂದೇಶಗಳ ಸತ್ಯಾಸತ್ಯತೆ ತಿಳಿಯಲು ಏನು ಮಾಡಬೇಕು. ಇಂತಹ ಎರಡು, ಪ್ರಶ್ನೆಗಳು ಮತ್ತು ಅದಕ್ಕೆ ಸಂಬಂಧಿಸಿದ ಉತ್ತರ ಇಲ್ಲಿದೆ. 


* ಪ್ರಶ್ನೆ: ಕಳೆದ ವಾರ ನನ್ನ ಸ್ಮಾರ್ಟ್‌ಫೋನ್‌ಗೆ ಗೂಗಲ್‌ ಕಂಪೆನಿಯಿಂದ ನಿಮ್ಮ ಕ್ರೆಡಿಡ್‌ ಕಾರ್ಡ್‌ನ ಸಾಲದ ಬಾಕಿ ಪಾವತಿ ಉಳಿದಿದೆ ಎಂಬ ಸಂದೇಶವೊಂದು ಬಂದಿತ್ತು. ಈ ಸಂದೇಶ ಅಚ್ಚರಿಯ ಜತೆಗೆ, ದಿಗ್ಭ್ರಮೆಯನ್ನೂ ಮೂಡಿಸಿತ್ತು. ಕ್ರೆಡಿಟ್‌ ಕಾರ್ಡ್‌ ಬಳಕೆಗೆ ಸಂಬಂಧಿಸಿದಂತೆ ಬಳಕೆದಾರನೊಬ್ಬನ ಖಾಸಗಿ ಮಾಹಿತಿಗಳು ಗೂಗಲ್‌ಗೆ ತಿಳಿದಿದ್ದಾರರೂ ಹೇಗೆ? ಇದು ಕಾನೂನುಬದ್ಧವೇ ಎಂಬ ಪ್ರಶ್ನೆಗಳು ಕಾಡಿದ್ದವು. ವೈಯಕ್ತಿಯ ಹಣಕಾಸು ವಹಿವಾಟಿಗೆ ಸಂಬಂಧಿಸಿದ ಅತ್ಯಂತ ಗೋಪ್ಯ ಮಾಹಿತಿ ಸೋರಿಕೆಯಾದ ಭಯದ ಜತೆಗೆ ಕ್ರೆಡಿಟ್‌ ಕಾರ್ಡ್‌ ಭದ್ರತೆಯ ಕುರಿತೂ ಅನುಮಾನಗಳು ಮೂಡಿದ್ದವು. ಈ ರೀತಿ ಆಗಲು ಸಾಧ್ಯವೇ? 

 

ಉತ್ತರ: ಹಲವು ಕ್ರೆಡಿಟ್‌ ಕಾರ್ಡ್‌ ಮತ್ತು ಯುಟಿಲಿಟಿ ಕಂಪೆನಿಗಳು, ಕಾರ್ಡ್‌ ಬಳಕೆ, ಸಾಲ ಪಾವತಿಗೆ ಸಂಬಂಧಿಸಿದಂತಹ ನೆನಪೋಲೆಗಳನ್ನು ಬಳಕೆದಾರನಿಗೆ ಇ–ಮೇಲ್‌ ಮೂಲಕ ಕಳುಹಿಸುತ್ತವೆ. ಈ ಇ–ಮೇಲ್‌ನಲ್ಲಿ ಬಳಕೆದಾರನ ಹೆಸರು, ಬ್ಯಾಂಕ್‌ ಖಾತೆ ಸಂಖ್ಯೆ, ಸಾಲ ಪಾವತಿಸಲು ಇರುವ ಕೊನೆಯ ದಿನ ಇತ್ಯಾದಿ ಮಾಹಿತಿಗಳಿರುತ್ತವೆ. ಸಾಮಾನ್ಯವಾಗಿ ವಿಮಾನ ಹೊರಡುವ ಸಮಯ, ಹೋಟೆಲ್‌, ರೆಸ್ಟೋರಂಟ್‌ಗಳ ಆಹ್ವಾನ ಪತ್ರಿಕೆ, ಶುಲ್ಕ ಪಾವತಿ ನೆನಪಿಸುವ ಮೇಲ್‌ಗಳನ್ನು ಕಂಪೆನಿಗಳು ಏಕಕಾಲದಲ್ಲಿ  ಸಾವಿರಾರು ಜನರಿಗೆ ಕಳುಹಿಸುತ್ತವೆ. ಇಂತಹ ಸಗಟು ಮೇಲ್‌ಗಳನ್ನು ಅಥವಾ ಇ–ಮೇಲ್‌ ಗುಚ್ಛವನ್ನು (package deliveries,) ಗೂಗಲ್‌ ಸ್ವಯಂಚಾಲಿತವಾಗಿ ಸ್ಕ್ಯಾನ್‌ ಮಾಡುತ್ತದೆ. ನಿಮ್ಮ  ಪ್ರಕರಣದಲ್ಲಿ ಆಗಿದ್ದಿಷ್ಟೇ. ಗೂಗಲ್‌ನ ಈ  ರೀತಿ ನಿಮಗೆ ಬಂದ ಇ–ಮೇಲ್‌ ಸ್ಕ್ಯಾನ್‌ ಮಾಡಿದೆ. ನಂತರ ಗೂಗಲ್‌ ನೌ ಅಥವಾ ಗೂಗಲ್‌ ಅಸಿಸ್ಟಂಟ್‌ ಎಂಬ ತಂತ್ರಾಂಶದ ಮೂಲಕ ಆ ಸಂದೇಶದ ಸಂಕ್ಷಿಪ್ತ ರೂಪ ನಿಮ್ಮ ಸ್ಮಾರ್ಟ್‌ಫೋನ್‌ ಪರದೆಯಲ್ಲಿ ಮೂಡುವಂತೆ ಮಾಡಿದೆ.

 

ಇಲ್ಲಿ ಭಯಪಡಬೇಕಾದ ಅಗತ್ಯವಿಲ್ಲ. ಇದು ಸುರಕ್ಷಿತ. ಗೂಗಲ್‌ನ ಈ ರೀತಿಯ ರಿಮೈಂಡರ್‌  ಸಂದೇಶಗಳಲ್ಲಿ  ಬಳಕೆದಾರನಿಗೆ ಸಂಬಂಧಿಸಿದ ಯಾವುದೇ ನಿಖರವಾದ ಮಾಹಿತಿ ಇರುವುದಿಲ್ಲ. ಅಂದರೆ ಬ್ಯಾಂಕ್‌ ಖಾತೆಯ ಸಂಪೂರ್ಣ ಸಂಖ್ಯೆ, ಕ್ರೆಡಿಟ್‌ ಕಾರ್ಡ್‌ ಮಾಹಿತಿಯಾಗಲಿ ಇರುವುದಿಲ್ಲ. ಅಷ್ಟೇ ಇಲ್ಲ, ಗೂಗಲ್‌ ನೌ ಪರದೆಯಲ್ಲಿ ಇದರ ಸಂಕ್ಷಿಪ್ತ ಮಾಹಿತಿ ಮಾತ್ರ ಲಭಿಸುತ್ತದೆ. ಇಮೇಲ್‌ಗೆ ಬಂದಿರುವ ಅಸಲಿ ಸಂದೇಶವನ್ನು ತೆರೆದು ನೋಡುವ ಆಯ್ಕೆಯನ್ನು ಬಳಕೆದಾರನಿಗೆ ನೀಡಲಾಗಿದೆ. ಗೂಗಲ್‌ ಆ್ಯಪ್‌ ಬಳಸುತ್ತಿದ್ದರೆ ಅದರಲ್ಲಿ “show me my bills” ಎಂದು ಟೈಪ್‌ ಮಾಡಿ ಸರ್ಚ್‌ ಮಾಡಿದರೆ ನಿಮ್ಮ ಇ–ಮೇಲ್‌ಗೆ ಬಂದಿರುವ ಪೇಮೆಂಟ್‌ ರಿಮೈಂಡರ್‌ ಮೇಲ್‌ಗಳನ್ನು ವೀಕ್ಷಿಸಬಹುದು. ಮುಂದುವರಿದು ಭದ್ರತೆಗೆ ಸಂಬಂಧಿಸಿದಂತೆ ಸಣ್ಣ ಅನುಮಾನ ಮೂಡಿದರೂ ತಕ್ಷಣವೇ ಕ್ರೆಡಿಟ್‌ ಕಾರ್ಡ್‌ ಕಂಪೆನಿಗೆ ಕರೆ ಮಾಡಿ ಅದನ್ನು ಖಚಿತಪಡಿಸಿಕೊಳ್ಳಬಹುದು. 

 

ಬಳಕೆದಾರನ ವೈಯಕ್ತಿಕ ಮಾಹಿತಿ ಬಳಕೆಗೆ ಸಂಬಂಧಿಸಿದಂತೆ ಗೂಗಲ್‌ ಯಾವುದೇ ರಹಸ್ಯ ನೀತಿ ಬಳಸುತ್ತಿಲ್ಲ. ವಿಶೇಷವಾಗಿ ಜಿ–ಮೇಲ್‌ ಮತ್ತು ಗೂಗಲ್‌ ಸರ್ಚ್‌ ಸೇವೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿಯನ್ನು ಸೋರಿಕೆ ಮಾಡಲಾಗುತ್ತಿಲ್ಲ ಎನ್ನುತ್ತದೆ ಕಂಪೆನಿ. ಬಳಕೆದಾರರಿಗೆ ಸಂಬಂಧಿಸಿದ ಕೆಲವು ಸಾಮಾನ್ಯ ದತ್ತಾಂಶಗಳನ್ನು ಮಾತ್ರ ಜಾಹೀರಾತು ಮತ್ತು ಸೇವೆ ಉತ್ತಮ ಪಡಿಸುವ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತದೆ ಎನ್ನುವುದು ಕಂಪೆನಿಯ ಸ್ಪಷ್ಟನೆ. 

 

ಅಷ್ಟಕ್ಕೂ ಇಂತಹ ಬಿಲ್‌ ರಿಮೈಂಡರ್‌ ಸಂದೇಶಗಳು ನಿಮ್ಮ ಸ್ಮಾರ್ಟ್‌ಫೋನ್‌ ನೋಟಿಫಿಕೇಷನ್‌ನಲ್ಲಿ ಕಾಣಿಸಿಕೊಳ್ಳುವುದು ನಿಮಗೆ ಇಷ್ಟವಿಲ್ಲ ಎಂದಾದದಲ್ಲಿ ಇದನ್ನು ಸ್ಥಗಿತಗೊಳಿಸಬಹುದು. ಮಾಡಬೇಕಾದದ್ದು ಇಷ್ಟೇ. ಗೂಗಲ್‌  ಆ್ಯಪ್‌ನ ಸೆಟ್ಟಿಂಗ್ಸ್‌ಗೆ ಹೋಗಿ, ಅಲ್ಲಿ disable the payment notices or turn off the Google Now feed altogethe ಆಯ್ಕೆಯನ್ನು ಆಯ್ದುಕೊಂಡರೆ ಕಿರಿಕಿರ ತಪ್ಪಲಿದೆ. 

 

* ಪ್ರಶ್ನೆ 2. ಅಮೆಜಾನ್‌ನಲ್ಲಿ ನೀಡುವ ಆರ್ಡರ್‌ ಮಾಡಿರದ ಸರಕೊಂದರ ಡೆಲಿವರಿಗೆ ಸಂಬಂಧಿಸಿದಂತೆ ನಿಮ್ಮ ಸ್ಮಾರ್ಟ್‌ಫೋನ್‌ಗೆ ನೊಟಿಫಿಕೇಷನ್‌ ಬಂದಿದೆ ಎಂದಿಟ್ಟುಕೊಳ್ಳಿ. ಆತಂಕ ಪಡಬೇಡಿ. 

 

ಇದೊಂದು ನಕಲಿ ಸಂದೇಶವಷ್ಟೇ. ಅಮೆಜಾನ್‌ ಹೆಸರಿನಲ್ಲಿ ಕೆಲವು ಕಂಪೆನಿಗಳು ನಕಲಿ ಇ–ಮೇಲ್‌ ಐಡಿ ಸೃಷ್ಟಿಸಿಕೊಂಡು  ಈ ರೀತಿಯ ಸಂದೇಶ ಕಳುಹಿಸುತ್ತವೆ. ಬಳಕೆದಾರನ ಖಾಸಗಿ ಮಾಹಿತಿಯನ್ನು ಅಂದರೆ ಪಾಸ್‌ವರ್ಡ್‌ ಸೇರಿದಂತೆ ಇತರೆ ಗೋಪ್ಯ ವಿವರಗಳನ್ನು ಕದಿಯುವುದು ಇದರ ಮುಖ್ಯ ಉದ್ದೇಶ.

 

ಇಂತಹ ಮೇಲ್‌ಗಳಲ್ಲಿ ಸಾಕಷ್ಟು ಅಕ್ಷರದೋಷಗಳು ಇರುತ್ತವೆ.  ವ್ಯಾಕರಣದೋಷವೂ ಎದ್ದು ಕಾಣುವಂತಿರುತ್ತದೆ. ಅಷ್ಟೇ ಅಲ್ಲ, ಸಂದೇಶ ಕಳುಹಿಸಿರುವ ವ್ಯಕ್ತಿಯ ಅಥವಾ ವಿಳಾಸ ಅಸ್ಪಷ್ಟವಾಗಿರುತ್ತದೆ. ಮೇಲ್ನೋಟಕ್ಕೆ ಅನುಮಾನ ಮೂಡುವಂತಿರುತ್ತದೆ. ಇಂತಹ ಮೇಲ್‌ಗಳನ್ನು ಯಥಾವತ್ತಾಗಿ ಅಮೆಜಾನ್‌ ಸಂಸ್ಥೆಗೆ stop-spoofing@amazon.com ಕಳುಹಿಸಿಕೊಡಬಹುದು. 

 

ತಕ್ಷಣವೇ ನಿಮ್ಮ  ಅಮೆಜಾನ್‌ ಅಕೌಂಟ್‌  ಬಳಸಿ ಲಾಗಿನ್‌ ಆದರೆ, ವೆಬ್‌ತಾಣದ ಆರ್ಡರ್‌ ಪಟ್ಟಿಯಲ್ಲಿ ನೀವು ಆರ್ಡರ್‌ ಮಾಡಿರುವ ಸರಕು, ವಿಲೇವಾರಿ ವಿವರ ಇರುತ್ತದೆ. ಸೆಕ್ಯುರಿಟಿ ಸೆಟ್ಟಿಂಗ್ಸ್‌ಗೆ ಹೋಗಿ ಪಾಸ್‌ವರ್ಡ್‌ ಬದಲಿಸಿಕೊಳ್ಳುವ ಅವಕಾಶವೂ ಇರುತ್ತದೆ. 

 

ರಜಾ ಕಾಲದಲ್ಲಿ ಇಂತಹ ಫಿಷಿಂಗ್‌ ಮೇಲ್‌ಗಳ ಹಾವಳಿ ಹೆಚ್ಚು. ಗಿರಿ ಧಾಮಗಳಿಗೆ ಪ್ಯಾಕೇಜ್‌ ಪ್ರವಾಸದ ಕೊಡುಗೆ, ಉಚಿತ ವಿಮಾನ ಟಿಕೆಟ್‌ ಸೇರಿದಂತೆ ಆಕರ್ಷಣೀಯ ಕೊಡುಗೆಗಳೊಂದಿಗೆ ಅಮೆಜಾನ್‌, ಪ್ಲಿಪ್‌ಕಾರ್ಟ್‌ ಮತ್ತಿತರ ಇ–ಶಾಪಿಂಗ್‌ ತಾಣಗಳಿಂದ ಇ–ಮೇಲ್‌ಗಳು ಬರುತ್ತವೆ. ಆಯಾ ತಾಣಗಳಲ್ಲೇ ಇಂತಹ  ನಕಲಿ ಇ–ಮೇಲ್‌ಗಳನ್ನು ಹೇಗೆ ನಿರ್ವಹಣೆ ಮಾಡಬಹುದು ಎನ್ನುವುದಕ್ಕೆ ಟಿಪ್ಸ್‌ ನೀಡಲಾಗಿದೆ. ಅಮೆಜಾನ್‌ ಬಳಕೆದಾರರು  http://amzn.to/2gsS1ME ಇಲ್ಲಿಗೆ ಭೇಟಿ ನೀಡಬಹುದು. 

-ನ್ಯೂಯಾರ್ಕ್‌ ಟೈಮ್ಸ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry