‘ಬಾಂಡ್‌’ಗೆ ದಂಡ!

7

‘ಬಾಂಡ್‌’ಗೆ ದಂಡ!

Published:
Updated:
‘ಬಾಂಡ್‌’ಗೆ ದಂಡ!

‘ಬಾಂಡ್‌’ಗೆ ದಂಡ!

ಏಳು ಸಿನಿಮಾಗಳಲ್ಲಿ ಜೇಮ್ಸ್  ಬಾಂಡ್ ಪಾತ್ರದಲ್ಲಿ ನಟಿಸಿದ ಸೀನ್ ಕಾನರಿ ಅವರಿಗೆ ಬ್ರಿಟಿಷ್ ಪೊಲೀಸರು ಅತಿ ವೇಗವಾಗಿ ಕಾರು ಚಾಲನೆ ಮಾಡಿದ್ದಕ್ಕೆ ದಂಡ ಹಾಕಿದ್ದರು. ಅವರಿಗೆ ದಂಡ ವಿಧಿಸಿದ್ದ ಪೊಲೀಸ್ ಅಧಿಕಾರಿಯ ಹೆಸರು ಸರ್ಜೆಂಟ್ ಜೇಮ್ಸ್  ಬಾಂಡ್!

ನೀಳ ಕೂದಲು

ವಿಶ್ವದ ಅತಿ ನೀಳ ಕೂದಲಿನ ಮಹಿಳೆ ಎನ್ನುವ ದಾಖಲೆಯು ಚೀನಾದ ಕ್ಸೀ ಕ್ವಿಪಿಂಗ್ ಹೆಸರಿನಲ್ಲಿದೆ. 1973ರಿಂದ ಅವರ ನೀಳಕೂದಲು ಜನಪ್ರಿಯ. ಆಗ 13 ವರ್ಷದವಳಾಗಿದ್ದ ಕ್ಸೀ, 2004ರಲ್ಲಿ 5.62 ಮೀಟರ್ ಉದ್ದದ ಕೂದಲು ಬೆಳೆಸಿದ್ದರು. 18 ಅಡಿ 5.5 ಇಂಚು ಉದ್ದದ ಕೂದಲು ನಿಭಾಯಿಸುವುದು ಎಷ್ಟು ಕಷ್ಟ? ನಡೆದು ಸಾಗುವಾಗ ಕೂದಲನ್ನು ಹಿಡಿದುಕೊಳ್ಳಲೆಂದೇ ಅವರಿಗೆ ಒಬ್ಬ ಸಹಾಯಕನಿದ್ದಾನೆ.

ಜಗಜ್ಜಾಣ

ಕೊರಿಯಾದ ಸಿವಿಲ್ ಎಂಜಿನಿಯರ್ ಕಿಮ್ ಉಂಗ್–ಯೊಂಗ್ ಎರಡು ವರ್ಷದ ಮಗು ಆಗಿದ್ದಾಗಲೇ ನಾಲ್ಕು ಭಾಷೆಗಳನ್ನು ಮಾತನಾಡಬಲ್ಲವನಾಗಿದ್ದ. ಮೂರನೇ ವಯಸ್ಸಿಗೆ ಬೀಜಗಣಿತ ತಿಳಿದಿತ್ತು. ಏಳನೇ ವಯಸ್ಸಿಗೆ ನಾಸಾ ಕೆಲಸಕ್ಕೆ ಆಹ್ವಾನಿಸಿತು. ಅವರ ಐಕ್ಯೂ 210. ವಿಶ್ವದಲ್ಲೇ ಇಷ್ಟು ಐಕ್ಯೂ ಇನ್ಯಾರಿಗೂ ಇಲ್ಲ. 15ನೇ ವಯಸ್ಸಿಗೆ ಕಿಮ್ ಪಿಎಚ್.ಡಿ. ಪದವಿ ಗಳಿಸಿದ್ದರು.

ತಪ್ಪಿಸಿಕೊಳ್ಳುವ ತಂತ್ರ

ಪಂಚತಂತ್ರ ಕಥೆಗಳಲ್ಲಿ ಕುಶಲಮತಿಯ ಪ್ರಾಣಿ ಎಂದು ಹೆಸರಾಗಿರುವ ಮೊಲ ಅಂಕುಡೊಂಕಾಗಿ ಅತ್ಯಂತ ವೇಗವಾಗಿ ಓಡಬಲ್ಲದು. ತನ್ನನ್ನು ಬೆನ್ನಟ್ಟುವವರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಅದು ಈ ತಂತ್ರವನ್ನು ಅನುಸರಿಸುತ್ತದೆ.

ಪ್ರಾಣಿಗಳ ಪೈಕಿ ಕತ್ತೆಗೆ ಅತ್ಯಂತ ಹೆಚ್ಚಿನ ನೆನಪಿನ ಶಕ್ತಿ ಇದೆ. ತಮ್ಮವರನ್ನು ಭೇಟಿ ಮಾಡಿದ ಸ್ಥಳದ ಗುರುತನ್ನು ಇಪ್ಪತ್ತೈದು ವರ್ಷವಾದರೂ ಅವು ಜ್ಞಾಪಕದಲ್ಲಿಟ್ಟುಕೊಳ್ಳಬಲ್ಲವು.

ನೀರಿನ ಬಾಟಲಿಗಳ ಮೇಲೆ ನಮೂದಿಸುವ ಕೊನೆಯ ದಿನಾಂಕ (ಎಕ್ಸ್‌ಪೈರಿ ಡೇಟ್‌) ಆ ಬಾಟಲಿಗೇ ಹೊರತು ನೀರಿಗಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry