ಭಾನುವಾರ, ಜೂಲೈ 5, 2020
28 °C

ಏಷ್ಯಾ ಕಪ್ ಹಾಕಿ: ಭಾರತಕ್ಕೆ ಜಯ

ಪಿಟಿಐ Updated:

ಅಕ್ಷರ ಗಾತ್ರ : | |

ಬ್ಯಾಂಕಾಕ್‌: ಗೆಲುವಿನ ಓಟ ಮುಂದುವರಿಸಿರುವ ಭಾರತದ ಮಹಿಳೆಯರ ತಂಡ ಇಲ್ಲಿ ನಡೆಯುತ್ತಿ ರುವ 18 ವರ್ಷದೊಳಗಿನವರ ಏಷ್ಯಾ ಕಪ್‌ ಹಾಕಿ ಟೂರ್ನಿಯಲ್ಲಿ ಶನಿವಾರ ಎರಡನೇ ಗೆಲುವು ದಾಖಲಿಸಿದೆ.

ಚೀನಾ ವಿರುದ್ಧದ ಎರಡನೇ ಪಂದ್ಯದಲ್ಲಿ ಭಾರತ ತಂಡ 3–2ಗೋಲುಗಳಲ್ಲಿ ಜಯಗಳಿಸಿದೆ.

ಪಂದ್ಯದ 7ನೇ ನಿಮಿಷದಲ್ಲಿಯೇ ಭಾರತ ತಂಡದ ಆಟಗಾರ್ತಿ ಲಾಲ್‌ರೆಮಸಿಯಾಮಿ ಚೆಂಡನ್ನು ಗುರಿ ಸೇರಿಸಿ ಸಂಭ್ರಮಿಸಿದರು. ಹತ್ತು ನಿಮಿಷದ ಅಂತರದಲ್ಲಿ ಲಾಲ್‌ ಭಾರತಕ್ಕೆ ಮತ್ತೊಂದು ಗೋಲು ತಂದುಕೊಟ್ಟರು. ದ್ವಿತೀಯಾರ್ಧದಲ್ಲಿ ಚೀನಾ ಆಕ್ರಮಣ ಕಾರಿಯಾಗಿ ಆಡಿತು. 40 ಹಾಗೂ 51ನೇ ನಿಮಿಷದಲ್ಲಿ ಚೀನಾ ತಂಡದ ಗು ಯಂಗ್ಯಾನ್‌ ಎರಡು ಗೋಲು ದಾಖಲಿಸಿ ಸಮಬಲಕ್ಕೆ ಕಾರಣರಾದರು.

ಪಂದ್ಯದ ಅಂತಿಮ ಹಂತದಲ್ಲಿ ಭಾರತದ ಸಂಗೀತಾ ಕುಮಾರಿ ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಗಳಿಸಿ ಗೆಲುವಿಗೆ ಕಾರಣರಾದರು. ಹಿಂದಿನ ಪಂದ್ಯದಲ್ಲಿ ಭಾರತ 4–0 ಗೋಲುಗಳಲ್ಲಿ ಚೀನಾ ತೈಪೆ ತಂಡವನ್ನು ಮಣಿಸಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.