ಮೊದಲ ಪ್ರಶಸ್ತಿಗೆ ಒಂದೇ ಹೆಜ್ಜೆ

7
ಮಲೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌: ಫೈನಲ್‌ಗೆ ಸೈನಾ ನೆಹ್ವಾಲ್‌ ಲಗ್ಗೆ

ಮೊದಲ ಪ್ರಶಸ್ತಿಗೆ ಒಂದೇ ಹೆಜ್ಜೆ

Published:
Updated:
ಮೊದಲ ಪ್ರಶಸ್ತಿಗೆ ಒಂದೇ ಹೆಜ್ಜೆ

ಸರಾವಕ್, ಮಲೇಷ್ಯಾ (ಪಿಟಿಐ):  ಭಾರತದ ಸೈನಾ ನೆಹ್ವಾಲ್‌ ಅವರು ಮಲೇಷ್ಯಾ ಮಾಸ್ಟರ್ಸ್‌ ಗ್ರ್ಯಾಂಡ್‌ ಪ್ರಿ ಗೋಲ್ಡ್‌ ಬ್ಯಾಡ್ಮಿಂಟನ್‌ ಟೂರ್ನಿಯ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಜಯಿಸಲು ಒಂದು ಹೆಜ್ಜೆಯಷ್ಟೇ ಬಾಕಿಯಿದೆ.

ಮಂಡಿ ನೋವಿನ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಮೊದಲ ಮಹತ್ವದ ಟೂರ್ನಿ ಆಡುತ್ತಿರುವ ಅವರು ಶನಿವಾರ ನಡೆದ ಸೆಮಿಫೈನಲ್‌ನಲ್ಲಿ 21–13, 21–10ರಲ್ಲಿ ಯಿಪ್‌ ಪುಯಿ ಯಿನ್ ಎದುರು ಸುಲಭ ಗೆಲುವು ಪಡೆದರು.

ಮೊದಲ ಗೇಮ್‌ನ ಆರಂಭದಲ್ಲಿ ಸೈನಾ 4–1ರಲ್ಲಿ ಮುನ್ನಡೆ ಹೊಂದಿ ದ್ದರು. ನಂತರ ಪೈಪೋಟಿ ಒಡ್ಡಿದ ಯಿಪ್‌ 7–4ರಲ್ಲಿ ಮುನ್ನಡೆ ಪಡೆದು ಕೊಂಡರು. ನಂತರ ಚುರುಕಿನ ಸ್ಮಾಷ್‌ ಸಿಡಿಸಿದ ಭಾರತದ ಆಟಗಾರ್ತಿ    12–9 ರಲ್ಲಿ ಮುನ್ನಡೆ ಸಂಪಾದಿಸಿ ಗೇಮ್‌ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ಜಯದ ಹಾದಿ ಸುಗಮ ಮಾಡಿಕೊಂಡರು.

ಈ ಮೂಲಕ ಸೈನಾ ಹಾಂಕಾಂಗ್ ಆಟಗಾರ್ತಿಯ ಎದುರಿನ ಗೆಲುವಿನ ಅಂತರ ಹೆಚ್ಚಿಸಿಕೊಂಡರು. ಇವರು ಒಟ್ಟು ಒಂಬತ್ತು ಸಲ ಮುಖಾಮುಖಿ ಯಾಗಿದ್ದು ಸೈನಾ ಏಳು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ. 2010ರ ಏಷ್ಯನ್‌ ಕ್ರೀಡಾಕೂಟದ ಬಳಿಕ ಈಗ ಮತ್ತೆ ಪೈಪೋಟಿ ನಡೆಸಿದರು.

ಮೊದಲ ಪ್ರಶಸ್ತಿಯ ನಿರೀಕ್ಷೆ: ಸೈನಾ  ಹೋದ ವರ್ಷ ಆಸ್ಟ್ರೇಲಿಯಾ   ಓಪನ್‌ನಲ್ಲಿ ಚಾಂಪಿಯನ್‌ ಆಗಿದ್ದರು. ಇದರ ಬಳಿಕ ರಿಯೊ ಒಲಿಂಪಿಕ್ಸ್‌ನಲ್ಲಿ ಗುಂಪು ಹಂತದಿಂದಲೇ ನಿರ್ಗಮಿಸಿ ದ್ದರು.  ಈಗ ಈ ಟೂರ್ನಿಯಲ್ಲಿ ಮೊದಲ ಪ್ರಶಸ್ತಿಯ ನಿರೀಕ್ಷೆಯಲ್ಲಿ ದ್ದಾರೆ. ಫೈನಲ್‌ನಲ್ಲಿ ಭಾರತದ ಆಟ ಗಾರ್ತಿ ಥಾಯ್ಲೆಂಡ್‌ನ ಪೊರ್ನಪವೀ ಚಚೊವ್‌ವುಂಗ್ ಎದುರು ಆಡಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry