ಹಿಮಕುಸಿತಕ್ಕೆ ಸಿಲುಕಿ 10 ಯೋಧರು ಸಾವು

7

ಹಿಮಕುಸಿತಕ್ಕೆ ಸಿಲುಕಿ 10 ಯೋಧರು ಸಾವು

Published:
Updated:
ಹಿಮಕುಸಿತಕ್ಕೆ ಸಿಲುಕಿ 10 ಯೋಧರು ಸಾವು

ಶ್ರೀನಗರ:  ಹಿಮಕುಸಿತದಲ್ಲಿ ಸಿಲುಕಿ ಹತ್ತು ಯೋಧರು ಸಾವಿಗೀಡಾಗಿದ್ದು, ಹಲವು ಸೈನಿಕರು ಕಾಣೆಯಾಗಿದ್ದಾರೆ.

ದೇಶದಾದ್ಯಂತ ಗಣ್ಯರಾಜ್ಯೋತ್ಸವ ಆಚರಣೆ ನಡೆಯುತ್ತಿದ್ದರೆ, ಗಡಿಯಲ್ಲಿ ರಾಷ್ಟ್ರ ಕಾಯುತ್ತಿರುವ ಯೋಧರು ದುರ್ಘನೆಯಲ್ಲಿ ಸಾವಿಗೀಡಾಗಿದ್ದಾರೆ. ರಾಷ್ಟ್ರಕಾಯುವ ಯೋಧರ ಸಾವಿನ ಸುದ್ದಿ ಜಮ್ಮು ಮತ್ತು ಕಾಶ್ಮೀರದ ಗುರೆಜ್‌ ವಲಯದಲ್ಲಿ ಉಂಟಾಗಿರುವ ಹಿಮಕುಸಿತದಲ್ಲಿ ಭಾರತೀಯ ಸೇನೆಯ ಯೋಧರು ಸಿಲುಕಿ ಮೃತಪಟ್ಟಿದ್ದಾರೆ.

ಗಡಿ ನಿಯಂತ್ರಣ ಸಮೀಪದ ಗುರೆಜ್‌ ವಲಯದ ಸೇನಾ ಶಿಬಿರದ ಮೇಲೆ ಎರಡು ಬಾರಿ ಹಿಮಕುಸಿತವಾಗಿದೆ. ಬುಧವಾರ  ಸಂಜೆ ನಡೆದಿರುವ ಹಿಮಕುಸಿತದಲ್ಲಿ ಅನೇಕ ಸೈನಿಕರು ಸಿಲುಕಿದ್ದಾರೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

ಸದ್ಯದ ಮಾಹಿತಿ ಪ್ರಕಾರ 10 ಯೋಧರು ಮೃತಪಟ್ಟಿದ್ದು, ಇನ್ನೂ ಅನೇಕರು ಕಾಣೆಯಾಗಿದ್ದಾರೆ. ಸೇನಾ ಕಾರ್ಯಾಚರಣೆಯಲ್ಲಿ ಈವರೆಗೂ 7 ಯೋಧರನ್ನು ರಕ್ಷಿಸಲಾಗಿದೆ.

ಪ್ರದೇಶವು ಸಂಪೂರ್ಣ ಹಿಮಾವೃತವಾಗಿರುವುದರಿಂದ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಬೆಳೆಗಿನ ಕಾರ್ಯಾಚರಣೆಯಲ್ಲಿ 3 ಯೋಧರ ದೇಹ ಪತ್ತೆಯಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry