ಬಜೆಟ್ 2017: ಕಲಾಪ ಆರಂಭ, ವಿಪಕ್ಷಗಳಿಂದ ಗದ್ದಲ

7

ಬಜೆಟ್ 2017: ಕಲಾಪ ಆರಂಭ, ವಿಪಕ್ಷಗಳಿಂದ ಗದ್ದಲ

Published:
Updated:
ಬಜೆಟ್ 2017: ಕಲಾಪ ಆರಂಭ, ವಿಪಕ್ಷಗಳಿಂದ ಗದ್ದಲ

ನವದೆಹಲಿ: ಲೋಕಸಭಾ ಸದಸ್ಯ ಇ. ಅಹಮದ್ ಅವರಿಗೆ ಸಂತಾಪ ಸೂಚಿಸಿದ ನಂತರ ಲೋಕಸಭೆಯಲ್ಲಿ ಬಜೆಟ್ ಮಂಡನೆ ಆರಂಭವಾಗಿದೆ.

ವಿತ್ತ ಸಚಿವ ಅರುಣ್ ಜೇಟ್ಲಿ  ಬಜೆಟ್ ಮಂಡನೆ ಮಾಡುವ ಮುನ್ನ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಇ. ಅಹಮದ್ ಅವರಿಗೆ ಸಂತಾಪ ಸೂಚಿಸಿ ಬಜೆಟ್ ಮಂಡಿಸುವಂತೆ ಸೂಚಿಸಿದ್ದಾರೆ.

ಕಲಾಪ ಆರಂಭವಾಗುತ್ತಿದ್ದಂತೆ ವಿಪಕ್ಷಗಳು ಗದ್ದಲವೆಬ್ಬಿಸಿವೆ. ಲೋಕಸಭಾ ಸದಸ್ಯರಾಗಿದ್ದ ಇ. ಅಹಮದ್ ಅವರು ನಿನ್ನೆ ಸಂಸತ್‍ನಲ್ಲೇ ಕುಸಿದು ಬಿದ್ದು ಇಂದು ನಿಧನರಾಗಿದ್ದಾರೆ, ನಮ್ಮನ್ನಗಲಿದ ಹಿರಿಯ ಮುತ್ಸದಿ ಇ. ಅಹಮದ್  ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಇಂದಿನ ಕಲಾಪ ಮುಂದೂಡಬೇಕಿತ್ತು. ಈ ಸಂದರ್ಭದಲ್ಲಿ ಬಜೆಟ್ ಮಂಡನೆ ನಡೆಸುತ್ತಿರುವುದು ಸರಿಯಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಖರ್ಗೆ ಅವರ ಮಾತುಗಳನ್ನು ನಿಲ್ಲಿಸುವಂತೆ ಸ್ಪೀಕರ್ ಸೂಚಿಸಿದ್ದು, ಈಗಾಗಲೇ ಬಜೆಟ್ ಮಂಡನೆ ನಡೆಸುವಂತೆ  ಅನುಮತಿ ನೀಡಲಾಗಿದೆ, ನಿಗದಿಯಂತೆ ಇಂದು ಬಜೆಟ್ ಮಂಡನೆ ನಡೆಯಲಿದ್ದು, ಬಜೆಟ್ ಮಂಡನೆ ಮಾಡುವಂತೆ ಜೇಟ್ಲಿ ಅವರಿಗೆ ಸೂಚಿಸಿದ್ದಾರೆ.

ನೇರ ಪ್ರಸಾರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry