ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಯಲ್ಲಿ ನೀರೂರಿಸುವ ಚಾಕಲೇಟ್ ಕೇಕ್‌

Last Updated 6 ಫೆಬ್ರುವರಿ 2017, 18:33 IST
ಅಕ್ಷರ ಗಾತ್ರ
ADVERTISEMENT

ಸಿಹಿಯಾದ ಚಾಕಲೇಟ್ ಕೇಕ್ ಆಂದರೆ ಎಂತಹವರ ಬಾಯಲ್ಲೂ  ನೀರೂರುತ್ತದೆ.  ವೆನಿಲಾ, ವಾಲ್‌ನೆಟ್‌,  ಮತ್ತು ಬೆಣ್ಣೆ  ಹಾಕಿ  ಚಾಕಲೇಟ್‌ ಕೇಕ್ ಅನ್ನು ಸುಲಭವಾಗಿ ತಯಾರಿಸಬಹುದು. ಈ ಕೇಕ್ ಮಾಡುವ ವಿಧಾನ ಮತ್ತು ಬೇಕಾಗುವ ಪದಾರ್ಥಗಳ ಮಾಹಿತಿ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು:
1. ಮೈದಾ                    100ಗ್ರಾಮ್
2. ಸಕ್ಕರೆ                      100ಗ್ರಾಮ್
3. ಬೆಣ್ಣೆ                         100ಗ್ರಾಮ್
4. ಮೊಟ್ಟೆ                       3
5. ಕೋಕೋ ಪೌಡರ್        2ಚಮಚ
6. ಬೇಕಿಂಗ್ ಪೌಡರ್        1ಚಮಚ
7. ಬೇಕಿಂಗ್ ಸೋಡ         1/4ಚಮಚ
8. ವೆನಿಲಾ ಎಸೆನ್ಸ್           1 ಚಮಚ
9. ವಾಲ್‍ನೆಟ್                  50 ಗ್ರಾಮ್
 

ಮಾಡುವ ಸಾಮಗ್ರಿಗಳು: ಕುಕ್ಕರ್‍ನಲ್ಲಿ ಉಪ್ಪು ಹಾಕುವುದು 5 ನಿಮಿಷ ಬಿಸಿಮಾಡುವುದು ನಂತರ ಬೌಲ್‍ನಲ್ಲಿ ಸಕ್ಕರೆ, ಬೆಣ್ಣೆಯನ್ನು ಚೆನ್ನಾಗಿ ಬೀಟ್ ಮಾಡಿ ಒಂದೊಂದೇ ಮೊಟ್ಟೆಯನ್ನು ಸೇರಿಸಿ ವೆನಿಲಾ ಎಸೆನ್ಸ್ ಸೇರಿಸುವುದು. ಜರಡಿಯಲ್ಲಿ ಮೈದಾ, ಕೋ ಕೋ ಪೌಡರ್, ಬೇಕಿಂಗ್ ಪೌಡರ್. ಸೋಡವನ್ನು 3 ಬಾರಿ ಜರಡಿ ಹಿಡಿಯುವುದು ಇದನ್ನು ಮೊಟ್ಟೆ ಮಿಶ್ರಣಕ್ಕೆ ಸೇರಿಸಿ.

ವೆನಿಲಾ ಏಸೆನ್ಸ್ ಹಾಗೂ ವಾಲ್‍ನೆಟ್ ಜೊತೆಗೆ ಹಾಲು ಸೇರಿಸಿ ಚೆನ್ನಾಗಿ ಮಿಶ್ರಣಮಾಡಿ ತಯಾರಾದ ಕೇಕ್ ಮೌಲ್ಡ್‍ಗೆ ಹಾಕಿ ಕುಕ್ಕರ್‍ನಲ್ಲಿ 20-25 ನಿಮಿಷ ಕಮ್ಮಿ ಉರಿಯಲ್ಲಿ ಬೇಯಿಸಿದರೆ ಚಾಕಲೇಟ್ ವಾಲ್ನೆಟ್ ಕುಕ್ಕರ್ ಕೇಕ್ ಸವಿಯಲು ಸಿದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT