ಭಾನುವಾರ, ಡಿಸೆಂಬರ್ 6, 2020
20 °C

ಶೂಟಿಂಗ್‌ ವಿಶ್ವಕಪ್‌: 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಕಂಚು ಗೆದ್ದ ಜೀತು ರಾಯ್‌

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಶೂಟಿಂಗ್‌ ವಿಶ್ವಕಪ್‌: 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಕಂಚು ಗೆದ್ದ ಜೀತು ರಾಯ್‌

ನವದೆಹಲಿ: ಐಎಸ್‌ಎಸ್ಎಫ್‌ ವಿಶ್ವಕಪ್‌ನ 10 ಮೀಟರ್ ಏರ್ ಪಿಸ್ತೂಲ್ ವಿಭಾಗದ ಅಂತಿಮ ಸ್ಪರ್ಧೆಯಲ್ಲಿ ಭಾರತೀಯ ಶೂಟರ್‌ ಜೀತು ರಾಯ್‌ ಕಂಚಿನ ಪದಕ ಗೆದ್ದರು.

ಒಟ್ಟು 216.7 ಅಂಕಗಳನ್ನು ಪಡೆದ 29 ವರ್ಷ ವಯಸ್ಸಿನ ಶೂಟರ್‌ ಜೀತು ರಾಯ್ ಮೂರನೇ ಸ್ಥಾನ ಪಡೆದರು.

240.1 ಅಂಗಳೊಂದಿಗೆ ವಿಶ್ವದಾಖಲೆ ನಿರ್ಮಿಸಿ ಜಪಾನ್ ಟೊಮೋಯುಕಿ ಮಟ್ಸುಡಾ ಚಿನ್ನ ಗೆದ್ದರು, 236.6 ಅಂಕಗಳಿಸಿದ ವಿಯೆಟ್ನಾಂನ ಕ್ಸುವಾನ್‌ ವಿನ್‍ಹಾಂಗ್ ಬೆಳ್ಳಿಗೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು.

ಪದಕ ಪಟ್ಟಿ:

ಚೀನಾ 6 ಚಿನ್ನ, 5 ಬೆಳ್ಳಿ ಗೆಲ್ಲುವ ಮೂಲಕ ಪ್ರಥಮ ಸ್ಥಾನದಲ್ಲಿದ್ದರೆ, 2 ಚಿನ್ನದ ಪದಕ, 1 ಕಂಚು ಗೆದ್ದಿರುವ ಜಪಾನ್‌ ಎರಡನೇ ಸ್ಥಾನದಲ್ಲಿದೆ. ಮೂರು ಪದಕಗಳೊಂದಿಗೆ(1 ಬೆಳ್ಳಿ, 2 ಕಂಚು) ಭಾರತ 5ನೇ ಸ್ಥಾನದಲ್ಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.