ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಬುರ್ಖಾ ಧರಿಸುವ ಮಹಿಳೆಯರೂ ನಿನಗೆ ಮತ ನೀಡಿದ್ದರು' ಎಂಬುದು ನೆನಪಿರಲಿ

Last Updated 22 ಮಾರ್ಚ್ 2017, 14:49 IST
ಅಕ್ಷರ ಗಾತ್ರ

ಡೆಹ್ರಾಡೂನ್: 'ಎಲ್ಲರನ್ನೂ ಸಮಾನವಾಗಿ ಕಾಣಬೇಕು, ಬುರ್ಖಾ ಧರಿಸುವ ಮಹಿಳೆಯರೂ ಆತನಿಗೆ ಮತ ನೀಡಿದ್ದರು. ಎಲ್ಲ ಧರ್ಮಗಳನ್ನು ಗೌರವಿಸುವ ಮೂಲಕ ಆತ ಹೃದಯ ಗೆಲ್ಲಬೇಕು' ಹೀಗೆ ಹೇಳಿದ್ದು ಉತ್ತರಪ್ರದೇಶದ ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಅಪ್ಪ ಆನಂದ್ ಸಿಂಗ್ ಭಿಷ್ತ್.

ಅರಣ್ಯ ರೇಜಂರ್ ಆಗಿ ನಿವೃತ್ತರಾಗಿರುವ 84ರ ಹರೆಯದ ಬಿಷ್ತ್, ಮುಸ್ಲಿಂ ಮಹಿಳೆಯರೂ ಬಿಜೆಪಿಗೆ ಮತ ನೀಡಿದ್ದಾರೆ. ತ್ರಿವಳಿ ತಲಾಖ್ ಮತ್ತು ಇನ್ನಿತರ ಸಮಸ್ಯೆಗಳನ್ನು ಹೋಗಲಾಡಿಸಲು ಬಿಜೆಪಿ ಸಹಾಯ ಮಾಡುತ್ತದೆ ಎಂಬ ಭರವಸೆಯಿಂದ ಅವರು ಮತ ನೀಡಿದ್ದರು. ಬಿಜೆಪಿ ಮತ್ತು ಆದಿತ್ಯನಾಥ್ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಾರೆ ಎಂಬ ನಂಬಿಕೆ ಇಲ್ಲಿನ ಜನರಿಗಿದೆ. ಆದಿತ್ಯನಾಥ್ ಈ ಎಲ್ಲ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದಿದ್ದಾರೆ.

'ಬುರ್ಖಾ ಧರಿಸುವ ಮಹಿಳೆಯರೂ ನಿನಗೆ ಮತ ನೀಡಿದ್ದರು' ಎಂಬುದು ನೆನಪಿರಲಿ

ಉತ್ತರಪ್ರದೇಶದ ಪೌರಿ ಜಿಲ್ಲೆಯ ಪಂಚೂರ್ ಗ್ರಾಮದಲ್ಲಿ ಪತ್ನಿ ಸಾವಿತ್ರಿ ಜತೆ ಬಿಷ್ತ್ ವಾಸವಾಗಿದ್ದಾರೆ.

[Related]

ಅಧಿಕಾರ ಸ್ವೀಕರಿಸಿ ಮುಖ್ಯಮಂತ್ರಿ ಗದ್ದುಗೆಗೇರಿದ ದಿನವೇ ಆದಿತ್ಯನಾಥ್, ಜನರಿಗೆ ನೋವುಂಟು ಮಾಡುವ ಯಾವುದೇ ಕೆಟ್ಟ ಮಾತುಗಳನ್ನು ಸಚಿವರು ಆಡಬಾರದು ಎಂದು ಹೇಳಿದ್ದರು. ಅಭಿವೃದ್ಧಿಗಾಗಿ ಅವರು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ ಎಂಬುದು ಇಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ ಎಂದಿದ್ದಾರೆ ಬಿಷ್ತ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT