ಮಂಗಳವಾರ, ಜುಲೈ 14, 2020
28 °C

ವಾಂಕೊವರ್‌ಗೆ ಭಾರತ ವನಿತೆಯರ ಹಾಕಿ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಏಪ್ರಿಲ್ ಒಂದರಿಂದ ಆರಂಭವಾಗಲಿರುವ  ಮಹಿಳೆಯರ ಎರಡನೇ ಸುತ್ತಿನ ವಿಶ್ವ ಲೀಗ್‌ನಲ್ಲಿ ಪಾಲ್ಗೊಳ್ಳಲು ಭಾರತ ಹಾಕಿ ತಂಡ ಗುರುವಾರ ವೆಸ್ಟ್‌ ವಾಂಕೊವರ್‌ಗೆ ಪ್ರಯಾಣ ಬೆಳೆಸಿದೆ.

ಬೆಲಾರಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ‘ಕ್ಲೀನ್ ಸ್ವೀಪ್’ ಸಾಧಿಸುವ ಮೂಲಕ ಆತ್ಮವಿಶ್ವಾಸದಲ್ಲಿರುವ ಭಾರತ ತಂಡ ಈ ಟೂರ್ನಿಯಲ್ಲಿ ಕೆನಡಾ, ಮೆಕ್ಸಿಕೊ, ಬೆಲಾರಸ್‌, ಟ್ರಿನಿಡಾಡ್, ಟೊಬ್ಯಾಗೊ, ಚಿಲಿ ಮತ್ತು ಉರುಗ್ವೆಯ ವಿರುದ್ಧ ಆಡಲಿದೆ. ‘ರ್‍ಯಾಂಕಿಂಗ್‌ನಲ್ಲಿ ನಮಗಿಂತ ಮೇಲಿನ ಸ್ಥಾನದಲ್ಲಿರುವ ತಂಡಗಳನ್ನೂ ಈ ಟೂರ್ನಿಯಲ್ಲಿ ಎದುರಿಸಲಿದ್ದೇವೆ. ಹತ್ತು ದಿನ ಮುಂಚಿತವಾಗಿಯೇ ಅಭ್ಯಾಸ ನಡೆಸುವ ಅವಕಾಶ ಸಿಕ್ಕಿದೆ.

ಟೂರ್ನಿಗಿಂತ ಮೊದಲು ಎರಡು ಅಭ್ಯಾಸ ಪಂದ್ಯಗಳಲ್ಲೂ ಆಡುತ್ತಿದ್ದೇವೆ. ಆದ್ದರಿಂದ ಇಲ್ಲಿಯ ವಾತಾವರಣ ಅರಿತುಕೊಂಡು ತಂತ್ರ ಹೆಣೆಯಲು ಸಹಾಯವಾಗುತ್ತದೆ’ ಎಂದು ಭಾರತ ತಂಡದ ನಾಯಕಿ ರಾಣಿ ಹೇಳಿದ್ದಾರೆ. ಭೋಪಾಲ್‌ನಲ್ಲಿ ನಡೆದ ರಾಷ್ಟ್ರೀಯ ಶಿಬಿರದಲ್ಲಿ ತಂಡ ಅತ್ಯುತ್ತಮ ಅಭ್ಯಾಸ ನಡೆಸಿದೆ. ಮುಖ್ಯ ಕೋಚ್‌ ಮರಿಜ್ನೆ ಅವರ ಮಾರ್ಗದರ್ಶನ ತಂಡಕ್ಕಿದೆ.

‘ಬೆಲಾರಸ್ ವಿರುದ್ಧ ಸರಣಿ ಜಯಿಸಿದ್ದು ತಂಡದ ಶಕ್ತಿಯನ್ನು ಇಮ್ಮಡಿ ಗೊಳಿಸಿದೆ. ಐದು ಪಂದ್ಯಗಳಲ್ಲಿ ನಾವು ಸಾಕಷ್ಟು ಹೊಸ ಸಂಗತಿಗಳನ್ನು ಕಲಿತು ಕೊಂಡಿದ್ದೇವೆ’ ಎಂದು ಉಪನಾಯಕಿ ದೀಪ್ ಗ್ರೇಸ್ ಎಕ್ಕಾ ಹೇಳಿದ್ದಾರೆ.

ತಂಡ ಇಂತಿದೆ: ಗೋಲ್‌ಕೀಪರ್‌: ಸವಿತಾ, ರಜನಿ, ಇತಿಮರ್ಪು. ಡಿಫೆಂಡರ್: ದೀಪ್‌ ಗ್ರೇಸ್ ಎಕ್ಕಾ, ಸುನಿತಾ ಲಾಕ್ರಾ, ಗುರ್ಜಿತ್ ಕೌರ್, ರೇಣುಕಾ ಯಾದವ್, ಮಾಲ್‌ಉನ್ಮವಿ. ಮಿಡ್‌ಫೀಲ್ಡರ್‌: ದೀಪಿಕಾ, ನವ್‌ಜೋತ್ ಕೌರ್, ರಿತು ರಾಣಿ, ಮೋನಿಕಾ, ಲಿಲಿ ಚಾನು, ನಮಿತಾ ಟೊಪ್ಪೊ. ಫಾವರ್ಡ್‌: ರಾಣಿ, ವಂದನಾ ಕಠಾರಿಯಾ, ಪೂನಮ್ ರಾಣಿ, ಸೋನಿಕಾ, ಅನುಪಾ ಬಾರ್ಲಾ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.