ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯ ನಾಗರಿಕರಿಗೆ ಅವಕಾಶ ಮಾಡಿಕೊಡಿ

Last Updated 2 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ನಂದಿನಿ ಲೇಔಟ್ ಬಡಾವಣೆಯಲ್ಲಿ ಮಹಾನಗರಪಾಲಿಕೆಯಿಂದ ಸುಸಜ್ಜಿತ ಪಾರ್ಕ್ ರೂಪುಗೊಂಡಿದೆ. ಶಾಸಕರು ಮತ್ತು ಪಾಲಿಕೆ ಸದಸ್ಯರ ಪರಿಶ್ರಮದಿಂದ ಪಾರ್ಕ್‌ನಲ್ಲಿ ‘ಹಿರಿಯ ನಾಗರೀಕರ ಅಂಗ ಸಾಧನೆ ಸ್ಥಳ’ (ಹಿರಿಯ ನಾಗರಿಕರಿಗಾಗಿ ಜಿಮ್‌) ಆರಂಭಿಸಲಾಗಿದೆ.
 
‘ಹಿರಿಯ ನಾಗರಿಕರಿಗೆ ಮಾತ್ರ’ ಎಂದು ಫಲಕದಲ್ಲಿ ನಮೂದಿಸಲಾಗಿದೆ. ಆದರೆ ಯುವಕರೇ ಎಲ್ಲ ಸೌಲಭ್ಯ ಬಳಸಿಕೊಳ್ಳುತ್ತಿದ್ದಾರೆ. ಬೆಳಿಗ್ಗೆ  ಮತ್ತು ಸಂಜೆ, ಹೀಗೆ ಯಾವ ಸಮಯದಲ್ಲಿಯೂ ಹಿರಿಯ ನಾಗರೀಕರಿಗೆ ಜಿಮ್ ಮಾಡಲು ಅವಕಾಶವೇ ಸಿಗುವುದಿಲ್ಲ. 
 
ದಯವಿಟ್ಟು ಇದನ್ನು ಹಿರಿಯ ನಾಗರೀಕರಿಗಾಗಿ ಮೀಸಲಿಡಿ. ಯುವಕರಿಗಾಗಿ ಇದೇ ಪಾರ್ಕ್‌ನಲ್ಲಿ ಮತ್ತೊಂದು ಜಿಮ್ ನಿರ್ಮಿಸಿ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ, ಸಮಸ್ಯೆ ಪರಿಹರಿಸಬೇಕು.
ಮೋಹನ್ ರಾವ್ ಮುಸಲೆ, ನಂದಿನಿ ಬಡಾವಣೆ
 
ನೋ ಪಾರ್ಕಿಂಗ್ ಫಲಕಗಳಲ್ಲಿ ಆದೇಶ ಸಂಖ್ಯೆ ನಮೂದಿಸಿ
ನೋ ಎಂಟ್ರಿ, ನೋ ಪಾರ್ಕಿಂಗ್‌ ಫಲಕ ತೋರಿಸಿ ಸಂಚಾರ ಪೊಲೀಸರು ದಂಡ ವಸೂಲು ಮಾಡುತ್ತಾರೆ. ಕಾನೂನು ಪ್ರಕಾರ ಅವರು ಮಾಡುವುದು ಸರಿ. ಆದರೆ, ಬಹುತೇಕ ಫಲಕಗಳಲ್ಲಿ ಕಮೀಷನರ್ ಕಚೇರಿಯಲ್ಲಿ ಹೊರಡಿಸಿದ ಆದೇಶದ ಸಂಖ್ಯೆ ನಮೂದಿಸಿಲ್ಲ.

ಈ ಫಲಕಗಳು ಅಸಲಿಯೋ, ನಕಲಿಯೋ ಎಂಬ ಸಂಶಯ ಮೂಡಿದೆ. ಪ್ರತಿ ಫಲಕಕ್ಕೂ ಕಮೀಶನರ್ ಕಚೇರಿಯಲ್ಲಿ ಹೊರಡಿಸುವ ಆದೇಶ ಸಂಖ್ಯೆ ನಮೂದಿಸಲು ಅಧಿಕಾರಿಗಳು ಗಮನ ಹರಿಸಬೆಕು.
ಪಲ್ಲವಿ, ಪದ್ಮನಾಭನಗರ
 
ಕೆರೆಯಲ್ಲಿ ನೀಲಗಿರಿ ಸಸಿ
ಕೃಷ್ಣರಾಜಪುರ ವಿಧಾನಸಭಾ ಕ್ಷೇತ್ರದ ಬಸವನಗರದಲ್ಲಿರುವ ವಿಭೂತಿಪುರ ಕೆರೆಯಲ್ಲಿ ನೀಲಗಿರಿ ಮರಗಳು ಬೆಳೆಯುತ್ತಿವೆ. ಅಧಿಕಾರಿಗಳು ಶೀಘ್ರ ಇತ್ತ ಗಮನ ಹರಿಸಿ, ಗಿಡಗಳನ್ನು ಕೆರೆಯಿಂದ ತೆಗೆಯಬೇಕು. ಕೆರೆಯಲ್ಲಿ ನೀರು  ಉಳಿಸಬೇಕು.
ಮಹೇಶ್ ನಾಯ್ಕ, ಬಸವನಗರ
 
ಎಲ್ಲಿ ಮಾಯವಾಯ್ತು 56ನೇ ನಂಬರ್ ಬಸ್ಸು
ಜಗಜೀವನರಾಮ್‌ನಗರ (ಗೋರಿಪಾಳ್ಯ) ನಿವಾಸಿಗಳಾದ ನಾವು ತುಂಬಾ ವರ್ಷಗಳಿಂದ ಕೂಲಿ ಕೆಲಸಕ್ಕೆ ಸಿಟಿಬಸ್‌ಗಳಲ್ಲಿಯೇ ಓಡಾಡುತ್ತಿದ್ದೇವೆ. ಗೋರಿಪಾಳ್ಯದಿಂದ ಚಾಮರಾಜಪೇಟೆ ಕಡೆಗೆ ಹೋಗುವ 56ನೇ ಮಾರ್ಗಸಂಖ್ಯೆಯಲ್ಲಿ ಈ ಹಿಂದೆ 2 ಬಸ್‌ಗಳಿದ್ದವು.

ಆದರೆ, ಕಳೆದ ಮೂರು ತಿಂಗಳಿನಿಂದ ಕೇವಲ ಒಂದೇ ವಾಹನ ವಾಹನ ಇದೆ. ಇದರಿಂದಾಗಿ ಗೋರಿಪಾಳ್ಯದಿಂದ ಚಾಮರಾಜಪೇಟೆ ಕಡೆಗೆ ಹೋಗುವ ಪ್ರಯಾಣಿಕರಿಗೆ (ವಿದ್ಯಾರ್ಥಿಗಳು ಸೇರಿ) ಹಾಗೂ ಮೆಜೆಸ್ಟಿಕ್‌ಗೆ ಪ್ರಯಾಣಿಸುವ ಪ್ರಯಣಿಕರಿಗೆ ತೊಂದರೆಯಾಗುತ್ತಿದೆ. ಬಿಎಂಟಿಸಿ ಅಧಿಕಾರಿಗಳು ಶೀಘ್ರ ಇತ್ತ ಗಮನ ಹರಿಸಬೇಕು ಎಂದು ಕೋರಿಕೊಳ್ಳುತ್ತೇವೆ.
ಗೋರಿಪಾಳ್ಯ ನಿವಾಸಿಗಳು

ಇತ್ತ ಗಮನಿಸಿ
ಶಿವಾಜಿನಗರದಿಂದ ಮೈಸೂರು ರಸ್ತೆ, ಕೆಂಗೇರಿ ಕಡೆಗೆ ರಾತ್ರಿ ಹೊತ್ತು ಬಸ್‌ಗಳು ಸರಿಯಾಗಿ ಸಂಚರಿಸುತ್ತಿಲ್ಲ. ಕೆಂಗೇರಿಗೆ 222ಇ ಮಾರ್ಗಸಂಖ್ಯೆಯ ಬಸ್ ರಾತ್ರಿ 9.40ಕ್ಕೆ ಹೊರಡುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ 9.15ಕ್ಕೆ ಶಿವಾಜಿನಗರ ಬಿಡುತ್ತಿದೆ.

ಇದಲ್ಲದೆ 9.50ಕ್ಕೆ ಬಿಡುತ್ತಿದ್ದ 155 ಸಂಖ್ಯೆಯ ಬಸ್‌ ಈಗ 9.20ಕ್ಕೆ  ಹೊರಡುತ್ತಿದೆ. ರಾತ್ರಿ ಸೇವೆಯ (ನೈಟ್ ಸರ್ವೀಸ್) ಬಸ್‌ಗಳಿಗೂ ಈಚೆಗೆ ಚಾಲನೆ ಸಿಕ್ಕಿದೆ. ಆದರೆ ಆದರೆ ಶಿವಾಜಿನಗರದಿಂದ ಮೈಸೂರು ರಸ್ತೆಗೆ ಸರಿಯಾದ ಬಸ್ ವ್ಯವಸ್ಥೆ ಇಲ್ಲ. ಅಧಿಕಾರಿಗಳು ಶೀಘ್ರ ಇತ್ತ ಗಮನ ಹರಿಸಿ, ರಾತ್ರಿ 10.30ರವರೆಗೂ ಮೈಸೂರು ರಸ್ತೆಗೆ ಬಸ್ ಸಂಚಾರ ವ್ಯವಸ್ಥೆ ಮಾಡಬೇಕೆಂದು ಕೇಳಿಕೊಳ್ಳುತ್ತೇವೆ.
ಚಂದ್ರಶೇಖರ್, ಕೆಂಗೇರಿ ಉಪನಗರ

ಪಾದಚಾರಿ ಮಾರ್ಗ
ರಾಜಾಜಿನಗರದ ಹೃದಯ ಭಾಗದಲ್ಲಿರುವ 12ನೇ ಮುಖ್ಯ ರಸ್ತೆಯನ್ನು ಡಾ.ರಾಜಕುಮಾರ್ ರಸ್ತೆಗೆ ಜೋಡಣೆ ಮಾಡುವ ರಾಜಾಜಿನಗರ ಪೊಲೀಸ್ ಠಾಣೆಯ ಎದುರಿನ ಏಕಮುಖ ರಸ್ತೆಯ ಎಡಭಾಗದಲ್ಲಿ ಪಾದಚಾರಿಗಳಿಗೆ ಸುರಕ್ಷಿತವಾಗಿ ನಡೆದಾಡಲು ಅನುಕೂಲವಾಗುವಂತೆ ಪಾದಚಾರಿ ಮಾರ್ಗ ನಿರ್ಮಿಸಲಾಗಿದೆ.
 
ಅಸಮರ್ಪಕ ನಿರ್ವಹಣೆಯಿಂದಾಗಿ ಇದು ಹದಗೆಟ್ಟಿದೆ. ಸಂಬಂಧಪಟ್ಟವರು ಶೀಘ್ರ ಇತ್ತ ಗಮನಹರಿಸಿ ಪಾದಚಾರಿ ಮಾರ್ಗ ದುರಸ್ತಿ ಮಾಡಿಸಬೇಕಿದೆ.
ಬಸವರಾಜ ಹುಡೇದಗಡ್ಡಿ. ರಾಜಾಜಿನಗರ 2ನೇಹಂತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT