ನವದೆಹಲಿ : ಇತ್ತೀಚಿನ ಟೂರ್ನಿಗಳಲ್ಲಿ ಗಮನ ಸೆಳೆ ಯುತ್ತಿರುವ ಭಾರತ ಫುಟ್‌ಬಾಲ್ ತಂಡ ಫಿಫಾ ರ್‍ಯಾಂಕಿಂಗ್‌ನಲ್ಲಿ 101ನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಎರಡು ದಶಕಗಳ ಅವಧಿಯಲ್ಲಿ ತಂಡದ ಅತ್ಯುತ್ತಮ ಸಾಧನೆ ಇದಾಗಿದೆ.

2019ರಲ್ಲಿ ನಡೆಯಲಿರುವ ಎಎಫ್‌ಸಿ ಏಷ್ಯಾ ಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಭಾರತ ತಂಡ 1–0 ಗೋಲಿ ನಿಂದ ಮ್ಯಾನ್ಮಾರ್ ಎದುರು ಗೆಲುವು ಪಡೆದಿತ್ತು. ಸೌಹಾರ್ದ ಪಂದ್ಯದಲ್ಲಿ ಕಾಂಬೋಡಿಯಾ ತಂಡವನ್ನು 3–2 ಗೋಲುಗಳಲ್ಲಿ ಮಣಿಸಿತ್ತು. ತವರಿನಲ್ಲಿ ನಡೆದ ಪಂದ್ಯದಲ್ಲಿ ಪೊರ್ಟೊರಿಕಾ ಎದುರು 4–1 ಗೋಲುಗಳಲ್ಲಿ ಜಯ ದಾಖಲಿಸಿತ್ತು.

ಎರಡು ವರ್ಷಗಳ ಅವಧಿಯಲ್ಲಿ ಭಾರತ ತಂಡ ಆಡಿದ 13 ಪಂದ್ಯಗಳಲ್ಲಿ 11ರಲ್ಲಿ ಗೆಲುವು ಸಾಧಿಸಿದೆ. ಆದ್ದರಿಂದ 31 ಸ್ಥಾನಗಳ ಬಡ್ತಿ ಲಭಿಸಿದೆ.

1996ರ ಫೆಬ್ರುವರಿಯಲ್ಲಿ ಭಾರತ ತಂಡ ರ್‍ಯಾಂಕಿಂಗ್‌ನಲ್ಲಿ 94ನೇ ಸ್ಥಾನದಲ್ಲಿ ಇದ್ದದ್ದು ಶ್ರೇಷ್ಠ ಸಾಧನೆಯಾಗಿದೆ. ಅದಕ್ಕೂ ಮೊದಲು 1993ರ ನವೆಂ ಬರ್‌ನಲ್ಲಿ 99ನೇ ಸ್ಥಾನದಲ್ಲಿತ್ತು. ಅದೇ ವರ್ಷದ ಅಕ್ಟೋಬರ್, ಡಿಸೆಂಬರ್ ಮತ್ತು 1996ರ ಏಪ್ರಿಲ್‌ನಲ್ಲಿ ನೂರನೇ ಸ್ಥಾನ ಹೊಂದಿತ್ತು. ಏಷ್ಯಾದ ತಂಡಗಳ ರ್‍ಯಾಂಕಿಂಗ್‌ನಲ್ಲಿ ಭಾರತ 11ನೇ ಸ್ಥಾನದಲ್ಲಿದೆ.

‘ಭಾರತ ತಂಡ ಕಷ್ಟದ ಹಾದಿಯಲ್ಲಿ ಸಾಗಿಬಂದು ಈ ಸಾಧನೆ ಮಾಡಿದೆ. ಈಗ ಸರಿಯಾದ ದಾರಿಯಲ್ಲಿ ಸಾಗುತ್ತಿದ್ದೇವೆ’ ಎಂದು ಭಾರತ ತಂಡದ ಕೋಚ್ ಸ್ಟೀಫನ್ ಕಾನ್ಸ್‌ಟಂಟೈನ್ ಹೇಳಿದ್ದಾರೆ.

ಕಾನ್ಸ್‌ಟಂಟೈನ್ ಅವರು ಕೋಚ್ ಆಗಿ ನೇಮಕಗೊಂಡಾಗ ಭಾರತ ತಂಡ 171ನೇ ಸ್ಥಾನದಲ್ಲಿತ್ತು. ಬಳಿಕ ಆಡಿದ ಮೊದಲ ಪಂದ್ಯದಲ್ಲೇ 2–0 ಗೋಲು ಗಳಲ್ಲಿ ನೇಪಾಳ ಎದುರು ಜಯ ದಾಖಲಿ ಸಿತ್ತು. ಇದೇ ವರ್ಷದ ಜೂನ್ 7ರಂದು ಭಾರತ ತಂಡ ಲೆಬನಾನ್ ವಿರುದ್ಧ ಸೌಹಾರ್ದ ಪಂದ್ಯ ಆಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.