7
ಕುಂಜಾರುಗಿರಿ: 32 ಅಡಿ ಎತ್ತರದ ಮಧ್ವಾಚಾರ್ಯರ ಏಕಶಿಲಾವಿಗ್ರಹ

ಮೇ 7 ರಿಂದ ಪ್ರತಿಷ್ಠಾಪನಾ ಮಹೋತ್ಸವ

Published:
Updated:
ಮೇ 7 ರಿಂದ ಪ್ರತಿಷ್ಠಾಪನಾ ಮಹೋತ್ಸವ

ಉಡುಪಿ: ಪಾಜಕ ಕ್ಷೇತ್ರ ಸಮೀಪದ ಕುಂಜಾರುಗಿರಿಯಲ್ಲಿ 32 ಅಡಿ ಎತ್ತರದ ಶ್ರೀಮಧ್ವಾಚಾರ್ಯರ ಏಕಶಿಲಾವಿಗ್ರಹದ ಪ್ರತಿಷ್ಠಾಪನಾ ಮಹೋತ್ಸವ ಇದೇ 7ರಿಂದ 10ರ ವರೆಗೆ ನಡೆಯಲಿದೆ ಎಂದು ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಹೇಳಿದರು.

 

ಭಾನುವಾರ ನಗರದ ರಥಬೀದಿ ಪಲಿಮಾರು ಮಠದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಧ್ವಾಚಾರ್ಯರ ಹುಟ್ಟೂರಾದ ಪಾಜಕ ಕೇತ್ರದಲ್ಲಿ ಅವರ ಅವತಾರ ಸ್ಮರಿಸುವ ಕೆಲವು ಅವಶೇಷಗಳಿವೆ.

 

ಅಲ್ಲದೆ, ಕುಂಜಾರುಗಿರಿ ಬೆಟ್ಟದಿಂದ ಹಾರಿದ ಅವರ ಪಾದದ ಚಿಹ್ನೆಗಳೂ ಇವೆ. ಹಾಗಾಗಿ ಮಾಧ್ವಪ್ರಜ್ಞೆಯನ್ನು ಜಾಗೃತಗೊಳಿಸುವ ಕುಂಜಾರುಗಿರಿಯಲ್ಲಿ ಆಚಾರ್ಯರ ಅವತಾರ ಸಮಾಪ್ತಿಯ ಸಪ್ತ ಶತಮಾನೋತ್ಸವದ ನೆನಪಿಗಾಗಿ ವಿಶ್ವದಲ್ಲೇ ಅಪೂರ್ವವಾದ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುತ್ತಿದೆ’ ಎಂದರು. 

 

ಮೇ 7ರಂದು ಸಂಜೆ 4 ಗಂಟೆಗೆ ಪಾಜಕದಿಂದ ಕುಂಜಾರುಗಿರಿವರೆಗೆ ಮೆರವಣಿಗೆ ನಡೆಯಲಿದೆ. ಆ ಬಳಿಕ ಕರಾವಳಿಯ ವಿವಿಧ ಮಠಾಧೀಶರ ಸಮ್ಮೇಳನ ಜರುಗಲಿದೆ.

 

8ರಂದು ಮುಂಜಾನೆ ಪ್ರತಿಷ್ಠಾಂಗ ಹೋಮಗಳು ಹಾಗೂ ಬೆಳಿಗ್ಗೆ 10.46ರ ಶುಭ ಮುಹೂರ್ತದಲ್ಲಿ ವಿಗ್ರಹ ಪ್ರತಿಷ್ಠಾಪನೆ ನಡೆಯಲಿದೆ. ಅಂದು ಸಂಜೆ 4 ಗಂಟೆಗೆ ಹೊರೆಕಾಣಿಕೆ ಮೆರವಣಿಗೆ ಹೊರಡಲಿದೆ ಎಂದು ತಿಳಿಸಿದರು. 

 

9ರಂದು ಬೆಳಿಗ್ಗೆ ವಿದ್ವತ್ಸಭೆ, ಸಂಜೆ 5ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. 10ರಂದು ಬೆಳಿಗ್ಗೆ 8.55ಕ್ಕೆ ಬ್ರಹ್ಮಕಲಶೋತ್ಸವ, ಸಂಜೆ 108 ಭಜನಾ ತಂಡಗಳಿಂದ ಭಜನೆ, ಮಧ್ವದೀಪೋತ್ಸವ ನಡೆಯಲಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry