ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ನರಸಿಂಹ' ಚಿತ್ರದ ಆ 'ಕ್ರೇಜಿ' ಡ್ಯಾನ್ಸ್ ಹಾಡು ಹುಟ್ಟಿದ್ದು 'ಸ್ಪಾನಿಷ್' ಹಾಡಿನಿಂದ!

Last Updated 1 ಮೇ 2017, 14:51 IST
ಅಕ್ಷರ ಗಾತ್ರ

2012ರಲ್ಲಿ ತೆರೆಕಂಡ ಚಿತ್ರ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ನರಸಿಂಹ. ನಿಖಿಶಾ ಪಟೇಲ್ ನಾಯಕಿಯಾಗಿ ನಟಿಸಿದ ಈ ಚಿತ್ರದಲ್ಲಿ ಸಂಜನಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಹಂಸಲೇಖಾ -ರವಿಚಂದ್ರನ್ ಜೋಡಿಯ ಸಂಗೀತದ ಮೋಡಿಯಿಂದ 'ನರಸಿಂಹ' ಹಾಡುಗಳು ಹಿಟ್ ಆಗಿದ್ದವು. 

ಈ ಚಿತ್ರದಲ್ಲಿ 'ನರಸಿಂಹ' ಪಾತ್ರಧಾರಿಯಾದ ರವಿಚಂದ್ರನ್ ಅವರನ್ನು ತನ್ನತ್ತ ಸೆಳೆಯಲು ಸಂಜನಾ 'ಹೋಯ್ ನರಸಿಂಹ ಸ್ವಾಮಿ' ಎಂದು ಹಾಡಿ ಕುಣಿಯುವ ದೃಶ್ಯ ರಂಗವೊಂದಿದೆ.

ಟಿಪ್ಪು ಮತ್ತು ಅನುರಾಧಾ ಶ್ರೀರಾಮ್ ಹಾಡಿರುವ ಈ ಹಾಡಿಗೆ ಸಂಗೀತ ಹಂಸಲೇಖ ಅವರದ್ದು. ಮಾದಕತೆ ಮತ್ತು ತುಂಟಾಟಿಕೆಯಿಂದ ಕೂಡಿದ ಈ ಹಾಡು ಸ್ಪಾನಿಷ್ ಭಾಷೆಯ'ಜನಪ್ರಿಯ'ಹಾಡೊಂದನ್ನು ಹೋಲುತ್ತದೆ.

ಚಿತ್ರ: ನರಸಿಂಹ
ಹಾಡು: ಹೋಯ್ ನರಸಿಂಹ ಸ್ವಾಮಿ
ಗಾಯಕರು: ಟಿಪ್ಪು, ಅನುರಾಧಾ ಶ್ರೀರಾಂ
ಸಂಗೀತ ನಿರ್ದೇಶನ: ಹಂಸಲೇಖ

ಸಾಮ್ಯತೆ

ಹಾಡು: ರಿವಾ ರಿವಾ
ಭಾಷೆ: ಸ್ಪಾನಿಷ್

2011ರಲ್ಲಿ ಆಫ್ರಿಕನ್ ಭಾಷೆಯ ಹಾಡು (ಮೆಕ್ಸಿಕನ್ ಭಾಷೆಯ ಹಾಡು ಎಂಬ ವಾದವೂ ಇದೆ) 'ರಿವಾ ರಿವಾ' ಎಂಬ ಹಾಡು ಭಾರತದಲ್ಲಿ ಜನಪ್ರಿಯವಾಗಿತ್ತು. ಅಂದ ಹಾಗೆ 'ರಿವಾ ರಿವಾ' ಹಾಡು ಹುಟ್ಟಿದ್ದು ಸ್ಪಾನಿಷ್ ಭಾಷೆಯ El Pasito de la Martita ಎಂಬ ಹಾಡಿನಿಂದ.

ಹಾಡುಗಳ ಮೂಲ ಮತ್ತು ಸಾಮ್ಯತೆಯನ್ನು ಪರಿಚಯಿಸುವುದಷ್ಟೇ 'ಸ್ಫೂರ್ತಿ ಸೆಲೆ' ಲೇಖನ ಸರಣಿಯ ಉದ್ದೇಶ. ಪರಭಾಷೆಯ ಹಾಡುಗಳಿಂದ ಸ್ಫೂರ್ತಿ ಪಡೆದ ಕನ್ನಡ ಚಿತ್ರಗೀತೆಗಳ ಬಗ್ಗೆ ನಿಮಗೆ ತಿಳಿದಿದ್ದರೆ ಕಾಮೆಂಟ್ ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT