ಸೋಮವಾರ, ಮಾರ್ಚ್ 27, 2023
22 °C
ಪ್ರಮುಖ ಬೀದಿಗಳಲ್ಲಿ ವಾಸವಿ ಭಾವಚಿತ್ರ ಮೆರವಣಿಗೆ, ದೇವಸ್ಥಾನದಲ್ಲಿ ವಿಶೇಷ ಪೂಜೆ

ವಿವಿಧೆಡೆ ಸಂಭ್ರಮದ ವಾಸವಿ ಜಯಂತಿ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿವಿಧೆಡೆ ಸಂಭ್ರಮದ ವಾಸವಿ ಜಯಂತಿ ಆಚರಣೆ

ಕುಷ್ಟಗಿ:  ಪಟ್ಟಣದಲ್ಲಿ ಶುಕ್ರವಾರ ವಾಸವಿ ಜಯಂತಿಯನ್ನು  ಸಂಭ್ರಮದಿಂದ ಆಚರಿಸಲಾಯಿತು. ಪ್ರಮುಖ ಬೀದಿಗಳಲ್ಲಿ ನಡೆದ ವಾಸವಿ ಭಾವಚಿತ್ರ  ಮೆರವಣಿಗೆಯಲ್ಲಿ ಆರ್ಯವೈಶ್ಯ ಸಮಾಜ, ಆರ್ಯವೈಶ್ಯ ಯುವಜನ ಸಂಘ ಮತ್ತು ಮಹಿಳಾ ಸಂಘಟನೆಯ  ಪ್ರಮುಖರು, ವಿವಿಧ ವಾದ್ಯ ಮೇಳದವರು ಭಾಗವಹಿಸಿದ್ದರು. ವಾಸವಿ ಪ್ರತಿಮೆಗೆ ಕುಂಕುಮಾರ್ಚನೆ, ಅಭಿಷೇಕ  ಕಾರ್ಯಕ್ರಮಗಳು ನಡೆದವು.ನಂತರ ವಾಸವಿ ದೇವಸ್ಥಾನದ ಬಳಿ ನಡೆದ ಕಾರ್ಯಕ್ರಮದಲ್ಲಿ ‘ಗಿಡಮರ ಬೆಳೆಸೋಣ ಮಳೆ ತರಿಸೋಣ’ ಎಂಬ ಘೋಷವಾಕ್ಯದ ಅಡಿ ಸಮಾಜದ ಹಿರಿಯರು, ಯುವಕರು ಮತ್ತು ಮಹಿಳೆಯರು ಸಸಿಗಳನ್ನು ನೆಟ್ಟರು.‘ಕಾಡು ಉಳಿಸಿ ಬೆಳೆಸಬೇಕು. ಕಾಡಿದ್ದರೆ ನಾಡು ಸುರಕ್ಷಿತವಾಗಿರುತ್ತದೆ. ಕಾಲಕಾಲಕ್ಕೆ ಮಳೆ ಬಂದು ಬರ ನೀಗುತ್ತದೆ. ಹಾಗಾಗಿ  ಪ್ರತಿಯೊಬ್ಬರೂ ಸಸಿಗಳನ್ನು ನೆಡಬೇಕು’ ಎಂದು  ಸಮಾಜದ ಮುಖಂಡರು ಹೇಳಿದರು.ಮೇವು ವಿತರಣೆ: ಬರದಿಂದಾಗಿ ಜಾನುವಾರುಗಳು ಮೇವು, ನೀರಿಲ್ಲದೆ ಪರದಾಡುತ್ತಿವೆ. ಹೀಗಾಗಿ ಆರ್ಯವೈಶ್ಯ ಯುವಜನ ಸಂಘದ ವತಿಯಿಂದ ಜಾನುವಾರುಗಳನ್ನು ಹೊಂದಿದ ರೈತರಿಗೆ ಮೇವು ವಿತರಿಸಲಾಯಿತು.ಆರ್ಯವೈಶ್ಯ ಸಮಾಜದ ಪ್ರಮುಖರಾದ ಅಮರೇಶ್ವರ ಶೆಟ್ಟರ್‌, ಶ್ರೀನಿವಾಸ ಕಂದಕೂರು, ತಿಮ್ಮಯ್ಯ ಶ್ರೇಷ್ಠಿ, ಪ್ರಭಾಕರ ಕಂದಕೂರು, ಗೋಪಾಲ ಶ್ರೇಷ್ಠಿ, ರಾಘವೇಂದ್ರ ಶ್ರೇಷ್ಠಿ, ಪವನ್‌ ಶ್ರೇಷ್ಠಿ, ಈಶಪ್ಪ ಶ್ರೇಷ್ಠಿ, ಇದ್ದರು.ಹನುಮಸಾಗರ ವರದಿ: ಇಲ್ಲಿನ ಆರ್ಯ ವೈಶ್ಯ ಸಮಾಜ, ವಾಸವಿ ಯುವಜನ ಸಂಘ, ವಾಸವಿ ಮಹಿಳಾ ಸಂಘಗಳ ಆಶ್ರಯದಲ್ಲಿ ವಾಸವಿ ಜಯಂತಿಯನ್ನು ಶುಕ್ರವಾರ ವಿಜೃಂಭಣೆಯಿಂದ ಆಚರಿ ಸಲಾಯಿತು. ಬೆಳಿಗ್ಗೆ ರಾಘವೇಂದ್ರಸ್ವಾಮಿ ಮಠ ದಲ್ಲಿ ವಿಶೇಷ ಪೂಜೆ, ಕುಂಭ ಮೆರವಣಿಗೆ, ಹೋಮ ಹವನಗಳು ಜರುಗಿದವು.ಸುಬ್ಬಣ್ಣಾಚಾರ್ಯ ಕಟ್ಟಿ, ಪಾಂಡು ರಂಗಾಚಾರ್ಯ ಪಪ್ಪು, ಭೀಮ ಶೇನಾಚಾರ್ಯ ಪುರಾಣಿಕ, ಪ್ರಹ್ಲಾದಾ ಚಾರ್ಯ ಜೋಷಿ, ಶ್ರೀನಿವಾಸಾಚಾರ್ಯ ಜೋಷಿ ಹೋಮ ಕಾರ್ಯ ನೆರವೇರಿಸಿದರು. ಪ್ರಹ್ಲಾದ ಗುಡಿಕೋಟಿ ದಂಪತಿಗಳು ಹೋಮದ ಪುಣ್ಯಾಹುವಾಚನೆ ಮಾಡಿಸಿಕೊಂಡರು. ಕುಂಭ ಮೆರವಣಿಗೆ ನಂತರ ಮಹಾ ಮಂಗಳಾರತಿ, ಪ್ರಸಾದ ವಿತರಣೆ, ತೊಟ್ಟಿಲು ಪೂಜೆ, ಪಲ್ಲಕ್ಕಿ ಸೇವೆ, ಸುಮಂಗಲೆಯರಿಂದ ವಾಸವಿದೇವಿಗೆ ಆರತಿ, ಉಡಿ ತುಂಬುವ ಕಾರ್ಯಕ್ರಮ, ಭಜನೆ ಮುಂತಾದ ಕಾರ್ಯಕ್ರಮಗಳು ಜರುಗಿದವು.ಸಮಾಜದ ಪ್ರಮುಖರಾದ ವಿಠಲಶ್ರೇಷ್ಠಿ ನಾಗೂರ, ಕೃಷ್ಟಪ್ಪ ಗುಡಿಕೋಟಿ, ಶ್ರೀನಿವಾಸ ಗುಡಿಕೋಟಿ, ವಾಸುದೇವ ನಾಗೂರ, ನರಸಿಂಹ ಗುಡಿಕೊಟಿ, ಸುಭಾಷ ನಾಗೂರ, ವಿಶ್ವನಾಥ ನಾಗೂರ, ಪ್ರಾಣೇಶ ಗುಡಿಕೋಟಿ, ರಾಮಣ್ಣ ಕಟಗೇರಿ, ಗೋಪಾಲಶೆಟ್ಟಿ ಅಬ್ಬಿಗೇರಿ, ನಾರಾಯ ಣಪ್ಪ ನಾಗೂರ, ರಾಜು ನಾಗೂರ, ಪ್ರಹ್ಲಾದ ಕೃಷ್ಟಪ್ಪ ಗುಡಿಕೋಟಿ, ವೆಂಕಟೇಶ ಕಟಗೇರಿ, ಮಹೇಶ ರಾಮ ತ್ನಾಳ, ಪ್ರಕಾಶ ಅಬ್ಬಿಗೇರಿ, ರಾಘವೇಂದ್ರ ತಿಮ್ಮಣ್ಣ ಗುಡಿಕೋಟಿ, ಅಶೋಕ ನಾಗೂರ, ಬಾಲಾಜಿ ಗುಡಿಕೋಟಿ, ಪವನ ನಾಗೂರ, ರಮೇಶ ವೆಂಕಣ್ಣ ಗುಡಿಕೋಟಿ, ಪ್ರಕಾಶ ಗುಡಿಕೋಟಿ, ಸತೀಶ ಗುಡಿಕೋಟಿ  ಪಾಲ್ಗೊಂಡಿದ್ದರು.

ಕನಕಗಿರಿ ವರದಿ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ  ಆರ್ಯವೈಶ್ಯ ಸಮಾಜದವರು  ವಾಸವಿ ಜಯಂತಿಯನ್ನು ಶುಕ್ರವಾರ ಸಡಗರ, ಸಂಭ್ರಮದಿಂದ ಆಚರಿಸಿದರು. ವಾಸವಿ ಭಾವಚಿತ್ರಕ್ಕೆ ವಿಶೇಷ ಪೂಜೆ, ಕುಂಕುಮಾರ್ಚನೆ, ಗಂಗೆಸ್ಥಳದ ಕಾರ್ಯಕ್ರಮಗಳು ಶ್ರದ್ಧಾ, ಭಕ್ತಿಯಿಂದ ನಡೆದವು.

 

ವಾಸವಿ ಭಾವಚಿತ್ರದ ಮೆರವಣಿಗೆ ಮಹಿಳೆಯರ ಪೂರ್ಣ ಕುಂಭ, ಕಳಸ ದೊಂದಿಗೆ ಯಲಬುರ್ಗಿ ತಿಪ್ಪಣ್ಣ ಮನೆಯಿಂದ ಆರಂಭವಾಗಿ ಮಡಿ ವಾಳರ, ಗಾಣಿಗೇರ ಓಣಿ  ಮೂಲಕ ನಗರೇಶ್ವರ ದೇವಸ್ಥಾನದವರೆಗೆ ವಿಜೃಂಭ ಣೆಯಿಂದ ನಡೆಯಿತು. ನಗರೇಶ್ವರ ದೇವಸ್ಥಾನದಲ್ಲಿ ವಿಠ್ಠಲಾಚಾರ್ಯ ರಾಜಪುರೋಹಿತ ಹುಲಿಹೈದರ ಅವರ ನೇತೃತ್ವದಲ್ಲಿ ತೊಟ್ಟೀಲು ಸೇವೆ, ಪ್ರಸಾದ, ನೈವೇದ್ಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಬಾಲಾಜಿ ಯಲಬುರ್ಗಿ ಅವರಿಂದ ಒಡಪು ಹೇಳುವ ಕಾರ್ಯಕ್ರಮ ನಡೆಯಿತು. ಯುವಕರು ಪಟಾಕಿ ಸಿಡಿಸಿ ಸಂಭ್ರಮಿಸಿದರು.ಆರ್ಯವೈಶ್ಯ ಸಮಾಜದ ಅಧ್ಯಕ್ಷ  ಹನುಮೇಶ ಭಕಸ್ತ, ಯುವ ಘಟಕದ ಅಧ್ಯಕ್ಷ ಮಂಜುನಾಥ ತಿಪ್ಪಣ್ಣ ಭಕಸ್ತ,  ಸಮಾಜದ ಪ್ರಮುಖರಾದ ಭಕಸ್ತ ಲಕ್ಷ್ಮಣ, ತಿಪ್ಪಣ್ಣ ಯಲಬುರ್ಗಿ, ನಾಗಪ್ಪ ಜನಾದ್ರಿ,  ಮಹಾಬಳೇಶ್ವರ ಶ್ರೇಷ್ಠಿ, ಪಾಂಡುರಂಗ ಜನಾದ್ರಿ, ವೆಂಕಟೇಶ ಸೌದ್ರಿ, ಹನುಮೇಶ ಯಲಬುರ್ಗಿ,  ರಮೇಶಶೆಟ್ಟಿ ಶಿರಿವಾರ. ಗೋಪಾಲ ಜನಾದ್ರಿ, ಸತ್ಯಪ್ಪ ಖ್ಯಾಡೆದ, ರಾಘವೇಂದ್ರ ಯಲಬುರ್ಗಿ, ರಾಘವೇಂದ್ರ ಜನಾದ್ರಿ, ಸಾಗರ ಜನಾದ್ರಿ, ಸಂಜೀವ ಸೌದ್ರಿ  ಹಾಗೂ ಆರ್ಯವೈಶ್ಯ ಸಮಾಜದ ವಾಸವಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀದೇವಿ, ವಿಜಯಲಕ್ಷ್ಮೀ ಜನಾದ್ರಿ,  ಕಾವ್ಯಾ ಶೇಷಗಿರಿ ಇದ್ದರು.ಶಿರಿವಾರ: ಸಮೀಪದ ಶಿರಿವಾರ ಗ್ರಾಮದಲ್ಲಿ  ಶಿರಿವಾರ–ಹಿರೇಖೇಡ  ಆರ್ಯವೈಶ್ಯ ಸಮಾಜದವರಿಂದ   ವಾಸವಿ ಜಯಂತಿ ಆಚರಿಸಲಾಯಿತು.

ಈ ನಿಮಿತ್ತ ಹನುಮಂತ ದೇವರ ದೇವಸ್ಥಾನದಲ್ಲಿ ಅಭಿಷೇಕ, ಕುಂಕಮಾರ್ಚನೆ, ವಾಸವಿ ನಾಮಕರಣ, ಕುಂಭ, ಕಳಸದ ಮೆರವಣಿಗೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು  ನಡೆದವು.  ಕಾರಟಗಿ ವರದಿ: ಪಟ್ಟಣದಲ್ಲಿ ಆರ್ಯ ವೈಶ್ಯ ಸಮಾಜದಿಂದ ವಾಸವಿ ಜಯಂತಿಯನ್ನು ಸಡಗರ, ಸಂಭ್ರಮ ದಿಂದ ಶುಕ್ರವಾರ ಆಚರಿಸಲಾಯಿತು.

ಲಕ್ಷ್ಮೀ ವೆಂಕಟೇಶ್ವರ ದೇವಾಲಯ ದಲ್ಲಿ ಗಂಗಾಪೂಜೆ ನೆರವೇರಿಸಿದ ಬಳಿಕ ವಾಸವಿ ಅಮ್ಮನವರ ಬೃಹತ್  ಭಾವಚಿತ್ರದ ಮೆರವಣಿಗೆ ಆರಂಭಗೊಂಡಿತು.

ಪೂರ್ಣಕುಂಭ, ಕಳಸ ಹೊತ್ತ ಮಹಿಳೆಯರು, ಉತ್ಸಾಹದಿಂದ ಪಾಲ್ಗೊಂಡ ಸಮಾಜದವರು, ವಾದ್ಯಮೇಳಗಳು ಮೆರವಣಿಗೆಯ ಕಳೆ ಹೆಚ್ಚಿಸಿದವು. ಮೆರವಣಿಗೆಯಲ್ಲಿ ಮಹಿಳೆಯರು ಪ್ರದರ್ಶಿಸಿದ ಕೋಲಾಟ  ಗಮನ ಸೆಳೆಯಿತು.ಮೆರವಣಿಗೆಯು ರಾಜಕುಮಾರ್‌ ಕಲಾ ಮಂದಿರ, ರಾಜ್ಯ ಹೆದ್ದಾರಿ, ಕನಕದಾಸ ವೃತ್ತ, ನವಲಿ ರಸ್ತೆ ಮಾರ್ಗವಾಗಿ ವಾಸವಿ ದೇವಾಲಯ ತಲುಪಿತು.

ದೇವಾಲಯದಲ್ಲಿ ವಿಶೇಷ ಪೂಜೆ,  ಅಲಂಕಾರ, ಹೋಮ, ಹವನ, ಒಂದು ಜೋಡಿ ಉಚಿತ ವಿವಾಹ, ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಿದವು.ವೈಶ್ಯ ಸಮಾಜದ ಪ್ರಮುಖರಾದ ಎಸ್‌.ಇ.ಪ್ರಹ್ಲಾದ ಶ್ರೇಷ್ಠಿ, ಪಿ.ಗೋವಿಂದರಾಜ ಶ್ರೇಷ್ಠಿ, ವೆಂಕೋಬಣ್ಣ ಶ್ರೇಷ್ಠಿ, ನಾಗರಾಜ್ ಶ್ರೇಷ್ಠಿ, ಎಸ್‌. ಇ. ಗೋಪಾಲ ಶ್ರೇಷ್ಠಿ, ವೀರೇಶ್ ಶ್ರೇಷ್ಠಿ, ವಾಸು ಶ್ರೇಷ್ಠಿ, ಶರಣು ಶ್ರೇಷ್ಠಿ, ಲಕ್ಷ್ಮೀನಾರಾಯಣ ಶ್ರೇಷ್ಠಿ ಆರ್ಯ ವೈಶ್ಯ ಸೇವಾ ಸಂಘ, ವಾಸವಿ ಯುವಜನ ಸಂಘ, ವಾಸವಿ ಮಹಿಳಾ ಘಟಕಗಳ ಸದಸ್ಯರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.