ಕಾಬೂಲ್‌ನಲ್ಲಿ ಕಾರ್‌ ಬಾಂಬ್‌ ಸ್ಫೋಟ: 40 ಸಾವು

7

ಕಾಬೂಲ್‌ನಲ್ಲಿ ಕಾರ್‌ ಬಾಂಬ್‌ ಸ್ಫೋಟ: 40 ಸಾವು

Published:
Updated:
ಕಾಬೂಲ್‌ನಲ್ಲಿ ಕಾರ್‌ ಬಾಂಬ್‌ ಸ್ಫೋಟ: 40 ಸಾವು

ಕಾಬೂಲ್‌: ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಬುಧವಾರ ಕಾರ್‌ ಬಾಂಬ್‌ ಸ್ಫೋಟಗೊಂಡು ಕನಿಷ್ಠ 40 ಮಂದಿ ಮೃತಪಟ್ಟಿದ್ದಾರೆ.

ಕಾಬೂಲ್‌ನಲ್ಲಿರುವ ವಿವಿಧ ದೇಶಗಳ ರಾಜತಾಂತ್ರಿಕ ಕಚೇರಿಗಳ ಸಮೀಪದಲ್ಲೇ ಈ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.‘ಜರ್ಮನ್‌ ರಾಜತಾಂತ್ರಿಕ ಕಚೇರಿಯ ತಡೆಗೋಡೆಯ ಹತ್ತಿರವೇ ಈ ಸ್ಫೋಟ ಸಂಭವಿಸಿದೆ. ಹತ್ತಿರದಲ್ಲೇ ಇನ್ನಿತರ ರಾಷ್ಟ್ರಗಳ ರಾಜತಾಂತ್ರಿಕ ಕಚೇರಿಗಳೂ ಇವೆ. ಯಾವ ರಾಷ್ಟ್ರದ ರಾಜತಾಂತ್ರಿಕ ಕಚೇರಿಯನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ಹೇಳುವುದು ಸದ್ಯಕ್ಕೆ ಕಷ್ಟ’ ಎಂದು ಕಾಬೂಲ್‌ ಪೊಲೀಸ್‌ ಇಲಾಖೆಯ ವಕ್ತಾರ ಬಶೀರ್‌ ಮುಜಾಹಿದ್‌ ತಿಳಿಸಿದ್ದಾರೆ.‘ದೇವರ ದಯೆಯಿಂದ ಭಾರತೀಯ ರಾಜತಾಂತ್ರಿಕ ಕಚೇರಿಯ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ’ ಎಂದು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್‌ ಟ್ವೀಟ್‌ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry