ಓಎಲ್‌ಎಕ್ಸ್‌, ಕ್ವಿಕರ್‌ನಲ್ಲಿ ಜಾನುವಾರುಗಳು ಮಾರಾಟಕ್ಕಿವೆ !

7

ಓಎಲ್‌ಎಕ್ಸ್‌, ಕ್ವಿಕರ್‌ನಲ್ಲಿ ಜಾನುವಾರುಗಳು ಮಾರಾಟಕ್ಕಿವೆ !

Published:
Updated:
ಓಎಲ್‌ಎಕ್ಸ್‌, ಕ್ವಿಕರ್‌ನಲ್ಲಿ ಜಾನುವಾರುಗಳು ಮಾರಾಟಕ್ಕಿವೆ !

ಬೆಂಗಳೂರು: ಕೊಲ್ಲುವ ಉದ್ದೇಶಕ್ಕಾಗಿ ಪ್ರಾಣಿಗಳ ಮಾರುಕಟ್ಟೆಯಲ್ಲಿ ಜಾನುವಾರು ಮಾರಾಟ ಮಾಡುವುದರ ಮೇಲೆ ನಿಷೇಧ ಹೇರಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿರುವ ಬೆನ್ನಲೇ ರೈತರು ಮತ್ತು ಜಾನುವಾರು ಮಾರಾಟಗಾರರು ಹಸುಗಳನ್ನು ಆನ್‌ಲೈನ್‌ ಮೂಲಕ ಮಾರಾಟ ಮಾಡಲು ಆರಂಭಿಸಿದ್ದಾರೆ.

ಆನ್‌ಲೈನ್‌ ಮಾರಾಟಜಾಲಗಳಾದ ಓಎಲ್‌ಎಕ್ಸ್‌, ಕ್ವಿಕರ್‌ಗಳಲ್ಲಿ ಜಾನುವಾರು ಮಾರಾಟಕ್ಕಿವೆ ಎಂಬ ಜಾಹೀರಾತುಗಳು ಕಾಣಿಸಿಕೊಳ್ಳುತ್ತಿವೆ.

₹10 ಸಾವಿರದಿಂದ ₹3 ಲಕ್ಷದವರೆಗಿನ ಹಸುಗಳು ಮಾರಾಟಕ್ಕೆ ಲಭ್ಯವಿವೆ ಎಂಬ ಜಾಹೀರಾತುಗಳು ಆನ್‌ಲೈನ್‌ ಮಾರಾಟ ತಾಣಗಳಲ್ಲಿ ಕಾಣುತ್ತಿವೆ.

 

ಮಾಧ್ಯಮಗಳಲ್ಲಿ ಈ ಸುದ್ದಿ ಕಾಣಿಸಿಕೊಳ್ಳುತ್ತಿದ್ದಂತೆ ಓಎಲ್‌ಎಕ್ಸ್‌ ಮತ್ತು ಕ್ವಿಕರ್‌ ಈ ಜಾಹೀರಾತುಗಳನ್ನು ತೆಗೆದುಹಾಕಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry