ಭಾರೀ ವ್ಯಂಗ್ಯಕ್ಕೆ ಗುರಿಯಾದ ನ್ಯಾಯಮೂರ್ತಿ ಮಹೇಶ್‌ಚಂದ್ರ ಶರ್ಮಾ ‘ನವಿಲು ಕಣ್ಣೀರಿ’ನ ಹೇಳಿಕೆ

7
‘ಹೆಣ್ಣು ನವಿಲು ಗಂಡು ನವಿಲಿನ ಕಣ್ಣೀರು ಕುಡಿದು ಬಸಿರಾಗುತ್ತದೆ’ ಎಂದಿದ್ದ ಶರ್ಮಾ

ಭಾರೀ ವ್ಯಂಗ್ಯಕ್ಕೆ ಗುರಿಯಾದ ನ್ಯಾಯಮೂರ್ತಿ ಮಹೇಶ್‌ಚಂದ್ರ ಶರ್ಮಾ ‘ನವಿಲು ಕಣ್ಣೀರಿ’ನ ಹೇಳಿಕೆ

Published:
Updated:
ಭಾರೀ ವ್ಯಂಗ್ಯಕ್ಕೆ ಗುರಿಯಾದ ನ್ಯಾಯಮೂರ್ತಿ ಮಹೇಶ್‌ಚಂದ್ರ ಶರ್ಮಾ ‘ನವಿಲು ಕಣ್ಣೀರಿ’ನ ಹೇಳಿಕೆ

ಬೆಂಗಳೂರು: ‘ಹೆಣ್ಣು ನವಿಲು ಗಂಡು ನವಿಲಿನ ಕಣ್ಣೀರು ಕುಡಿದು ಬಸಿರಾಗುತ್ತದೆ’ ಎಂದು ಹೇಳಿದ್ದ ರಾಜಸ್ತಾನ ಹೈಕೋರ್ಟ್‌ನ ನ್ಯಾಯಮೂರ್ತಿ ಮಹೇಶ್‌ಚಂದ್ರ ಶರ್ಮಾ ಅವರ ಹೇಳಿಕೆ ಅಂತರ್ಜಾಲದಲ್ಲಿ ಅಲ್ಲೋಲ ಕಲ್ಲೋಲ ಉಂಟುಮಾಡಿದೆ!

ಶರ್ಮಾ ಅವರ ಈ ಹೇಳಿಕೆಯನ್ನು ಭಾರೀ ಸಂಖ್ಯೆಯ ನೆಟ್ಟಿಗರು ವ್ಯಂಗ್ಯ ಮಾಡಿದ್ದಾರೆ. ನವಿಲುಗಳು ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ಚಿತ್ರ ಹಾಗೂ ವಿಡಿಯೊಗಳೊಂದಿಗೆ ‘ನವಿಲು ಕಣ್ಣೀರು ಕುಡಿಯುತ್ತಿರುವ ಅಪರೂಪದ ಚಿತ್ರ’ ಎಂದು ಹಲವರು ಟ್ವೀಟ್‌ ಮಾಡಿದ್ದಾರೆ.

ಶರ್ಮಾ ಹೇಳಿಕೆಯಿಂದಾಗಿ ಹಲವು ಜೋಕ್‌ಗಳೂ ಹುಟ್ಟಿವೆ. ಫೇಸ್‌ಬುಕ್‌, ಟ್ವಿಟರ್‌, ವಾಟ್ಸ್ಆ್ಯಪ್‌ಗಳಲ್ಲಿ ನವಿಲಿನ ‘ಕಣ್ಣೀರಿ’ನ ಜೋಕ್‌ಗಳು ಹರಿದಾಡುತ್ತಿವೆ.

ಬುಧವಾರ ಸಿಎನ್‌ಎಸ್‌ ನ್ಯೂಸ್‌ 18 ಸುದ್ದಿ ವಾಹಿನಿಯೊಂದಿಗೆ ಮಾತನಾಡುತ್ತಾ ಶರ್ಮಾ, ‘ನವಿಲು ಆಜನ್ಮ ಬ್ರಹ್ಮಚಾರಿ. ಅದು ಹೆಣ್ಣು ನವಿಲಿನೊಂದಿಗೆ ಲೈಂಗಿಕ ಸಂಪರ್ಕ ನಡೆಸುವುದಿಲ್ಲ. ಹೀಗಾಗಿಯೇ ನವಿಲನ್ನು ರಾಷ್ಟ್ರಪಕ್ಷಿ ಎಂದು ಒಪ್ಪಿಕೊಳ್ಳಲಾಗಿದೆ’ ಎಂದು ಹೇಳಿದ್ದರು.

ಹೀಗೊಂದು ನವಿಲು ಜೋಕ್‌:
ಗಂಡು ನವಿಲು: ಬಾ ಒಂದಾಗೋಣ
ಹೆಣ್ಣು ನವಿಲು: ಅಯ್ಯೋ, ನಾವು ಒಳ್ಳೆಯ ಸ್ನೇಹಿತರು ಮಾತ್ರ
ಈ ಮಾತು ಕೇಳಿ ಗಂಡು ನವಿಲು ಅಳಲು ಶುರು ಮಾಡಿತು. ಆ ಕಣ್ಣೀರು ಕುಡಿದು ಹೆಣ್ಣು ನವಿಲು ಬಸಿರಾಯಿತು!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry