ಮನಿಪ್ಲಾಂಟ್‌ ಕರಾಮತ್ತು

7

ಮನಿಪ್ಲಾಂಟ್‌ ಕರಾಮತ್ತು

Published:
Updated:
ಮನಿಪ್ಲಾಂಟ್‌ ಕರಾಮತ್ತು

ಮನೆಯಲ್ಲಿ ಅಲಂಕಾರಕ್ಕೆ ಇರಿಸುವ ಮನಿಪ್ಲಾಂಟ್‌ಗೆ ವಾಸ್ತುವಿನ ಮಹತ್ವವೂ ಇದೆ. ಮನೆಯಲ್ಲಿ ಮನಿಪ್ಲಾಂಟ್‌ ಇರಿಸುವುದರಿಂದ ಲಕ್ಷ್ಮೀ ನೆಲೆಸುತ್ತಾಳೆ ಎಂಬ ನಂಬಿಕೆ ಹಲವರದು. ಮಣ್ಣು, ನೀರು ಎರಡರಲ್ಲೂ ಬೆಳೆಯುವ ಮನಿಪ್ಲಾಂಟ್‌ ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ.

* ಮನಿಪ್ಲಾಂಟ್‌ ಬೆಳೆಸುವುದರಿಂದ ಮನೆಯ ಸಂಪತ್ತಿನ ಜೊತೆಗೆ ಆದಾಯವೂ ವೃದ್ಧಿಯಾಗುತ್ತದೆ ಎನ್ನುವ ನಂಬಿಕೆ ಇದೆ.

*ಇದನ್ನು ಮನೆಯ ನೈಋತ್ಯ ಭಾಗದಲ್ಲಿರಿಸಬೇಕು. ಇದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುತ್ತದೆ.

*ಈಶಾನ್ಯ ಭಾಗದಲ್ಲಿ ಇದನ್ನು ಇರಿಸುವುದರಿಂದ ಮನೆಯಲ್ಲಿ ನೆಗೆಟಿವ್‌ ಎನರ್ಜಿ ಮನೆಮಾಡುತ್ತದೆ. ಇದರಿಂದ ಮನೆಮಂದಿಯ ನಡುವೆ ಇರುಸುಮುರುಸು ಉಂಟಾಗುವ ಸಂಭವವಿರುತ್ತದೆ.

*ಇದನ್ನು ಕಂಪ್ಯೂಟರ್‌, ಟಿ.ವಿ. ಪಕ್ಕದಲ್ಲಿ ಇರಿಸುವುದರಿಂದ  ಒತ್ತಡ ಮತ್ತು ಆತಂಕ ಕಡಿಮೆಯಾಗುತ್ತದೆ. 

*ಇದನ್ನು ಮನೆಯಲ್ಲಿ ಇರಿಸುವುದರಿಂದ ನೆಮ್ಮದಿ ನೆಲೆಸುತ್ತದೆ. ನಿದ್ರೆ ಸಮಸ್ಯೆ ಮತ್ತು ಇನ್ನೊಬ್ಬರ ಜೊತೆ ವಾದ ಮಾಡುವ ಸನ್ನಿವೇಶವೂ ಎದುರಾಗುವುದಿಲ್ಲ.

*ಇದನ್ನು ಮನೆಯ ಉದ್ಯಾನದಲ್ಲಿ ನೆಡುವುದಕ್ಕಿಂತ ಮನೆಯ ಒಳಗೆ ನೆಟ್ಟರೆ ಅದೃಷ್ಟ ಒಲಿಯುತ್ತದೆ. 

(ಮೂಲ: ವಾಸ್ತು ಶಾಸ್ತ್ರ ಗುರು)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry