ಎಸ್‌ಬಿಐ ಸೇವಾ ಶುಲ್ಕ ಹೆಚ್ಚಳ

7

ಎಸ್‌ಬಿಐ ಸೇವಾ ಶುಲ್ಕ ಹೆಚ್ಚಳ

Published:
Updated:
ಎಸ್‌ಬಿಐ ಸೇವಾ ಶುಲ್ಕ ಹೆಚ್ಚಳ

ನವದೆಹಲಿ: ದೇಶದ ಅತಿದೊಡ್ಡ ಬ್ಯಾಂಕ್‌ ಆಗಿರುವ ಸ್ಟೇಟ್‌  ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ), ಹಲವು ಬಗೆಯ ನಗದು ವಹಿವಾಟಿನ ಸೇವಾ ಶುಲ್ಕವನ್ನು ಹೆಚ್ಚಿಸಿದೆ.

ಪರಿಷ್ಕೃತ ದರಗಳು ಗುರುವಾರದಿಂದಲೇ (ಜೂನ್‌ 1) ಜಾರಿಗೆ ಬಂದಿವೆ.

ಎಟಿಎಂ ಬಳಸಿ ಉಳಿತಾಯ ಖಾತೆಯಿಂದ ಪ್ರತಿ ತಿಂಗಳೂ 8 ಬಾರಿ (ಎಸ್‌ಬಿಐ  5 ಮತ್ತು ಅನ್ಯ ಬ್ಯಾಂಕ್‌ನ 3 ) ಉಚಿತವಾಗಿ ಹಣ ಪಡೆಯಬಹುದು. ಬಡವರಿಗೆ ನೀಡಲಾಗುವ ಸೀಮಿತ ಸೇವೆಯ ಉಳಿತಾಯ ಖಾತೆಯಿಂದ  ಪ್ರತಿ ತಿಂಗಳು ನಾಲ್ಕು ಬಾರಿ ಉಚಿತವಾಗಿ ಎಟಿಎಂನಿಂದ ಹಣ ಪಡೆಯಬಹುದು.

ಐಎಂಪಿಎಸ್‌ ಶುಲ್ಕ: ತಕ್ಷಣ ಹಣ ಪಾವತಿ ಸೇವೆಯಡಿ (ಐಎಂಪಿಎಸ್‌) ₹1 ಲಕ್ಷದವರೆಗೆ ಹಣ ರವಾನೆಗೆ ₹ 5 ಶುಲ್ಕ ಮತ್ತು ಸೇವಾ ತೆರಿಗೆ, ₹ 1 ಲಕ್ಷದಿಂದ ₹ 2 ಲಕ್ಷದವರೆಗಿನ  ಮೊತ್ತಕ್ಕೆ ₹ 15 ಶುಲ್ಕ ಮತ್ತು ಸೇವಾ ತೆರಿಗೆ,  ₹ 2 ಲಕ್ಷದಿಂದ ₹ 5 ಲಕ್ಷದ ಮೊತ್ತಕ್ಕೆ ₹ 25 ಶುಲ್ಕ ಮತ್ತು ಸೇವಾ ತೆರಿಗೆ ಅನ್ವಯವಾಗಲಿದೆ.

ಮಾಸಿದ ನೋಟು ವಿನಿಮಯ: 20ಕ್ಕಿಂತ ಹೆಚ್ಚಿನ ಸಂಖ್ಯೆಯ ಅಥವಾ ₹ 5 ಸಾವಿರಕ್ಕಿಂತ ಹೆಚ್ಚಿನ ಮೊತ್ತದ ಮಾಸಿದ ನೋಟುಗಳ ವಿನಿಮಯಕ್ಕೆ

₹ 2 ಶುಲ್ಕ ಮತ್ತು ಸೇವಾ ತೆರಿಗೆ ವಿಧಿಸಲಿದೆ. ಚೆಕ್‌ ಬುಕ್‌: 10 ಹಾಳೆಗಳ ಚೆಕ್‌ ಬುಕ್‌ಗೆ ₹ 30 ಶುಲ್ಕ ಮತ್ತು ಸೇವಾ ತೆರಿಗೆ, 25 ಹಾಳೆಗಳ ಚೆಕ್‌ಬುಕ್‌ಗೆ ₹ 75 ಶುಲ್ಕ ಮತ್ತು  ಸೇವಾ ತೆರಿಗೆ ಅನ್ವಯವಾಗಲಿದೆ.

ರೂಪೇ ಕ್ಲಾಸಿಕ್‌ ಎಟಿಎಂ ಕಾರ್ಡ್‌ ಉಚಿತವಾಗಿ ವಿತರಿಸಲಾಗುವುದು. ಹೊಸ ಡೆಬಿಟ್‌ ಕಾರ್ಡ್‌ ಪಡೆಯಲು ಗ್ರಾಹಕರು ಶುಲ್ಕ ಪಾವತಿಸಬೇಕಾಗುತ್ತದೆ. ಆದರೆ, ಶುಲ್ಕದ ಮೊತ್ತ  ಪ್ರಕಟಿಸಲಾಗಿಲ್ಲ.

ಬ್ಯಾಂಕ್‌ನ ಮೊಬೈಲ್‌ ವಾಲೆಟ್‌ ‘ಬಡ್ಡಿ’ ಮೂಲಕ ಎಟಿಎಂಗಳಿಂದ ಪ್ರತಿ ಬಾರಿ ಹಣ ಪಡೆದಾಗಲೂ ₹ 25 ಸೇವಾ ಶುಲ್ಕ ವಿಧಿಸಲಾಗುವುದು ಎಂದು ಬ್ಯಾಂಕ್‌ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry