ಕೈ ತಪ್ಪಿದ ಅಧ್ಯಕ್ಷ ಪಟ್ಟ: ಡಿಕೆಶಿ ಸಿಟ್ಟು

7

ಕೈ ತಪ್ಪಿದ ಅಧ್ಯಕ್ಷ ಪಟ್ಟ: ಡಿಕೆಶಿ ಸಿಟ್ಟು

Published:
Updated:
ಕೈ ತಪ್ಪಿದ ಅಧ್ಯಕ್ಷ ಪಟ್ಟ: ಡಿಕೆಶಿ ಸಿಟ್ಟು

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸ್ಥಾನ ಕೈತಪ್ಪಿದ್ದರಿಂದ ಮುನಿಸಿಕೊಂಡಿರುವ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ನಾಲ್ಕೈದು ದಿನಗಳಿಂದ ಸರ್ಕಾರದ ಕಾರ್ಯಕ್ರಮಗಳಿಂದ ದೂರ ಉಳಿದಿದ್ದಾರೆ.

ಬಹಳ ನಿರೀಕ್ಷೆ ಹೊತ್ತು ದೆಹಲಿಗೆ ಹೋಗಿದ್ದ ಶಿವಕುಮಾರ್‌ಗೆ ಕೊನೆಗಳಿಗೆಯಲ್ಲಿ ಅಧ್ಯಕ್ಷ ಸ್ಥಾನ ಕೈತಪ್ಪಿತ್ತು. ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನವಷ್ಟೇ ಗಟ್ಟಿ ಎಂಬುದು ಬೆಂಗಳೂರಿಗೆ ವಾಪಸಾದಾಗ ಖಾತ್ರಿಯಾಗಿತ್ತು.

ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅವರು ಭಾಗಿಯಾಗಿಲ್ಲ. ಸರ್ಕಾರದ ಆಯಕಟ್ಟಿನಲ್ಲಿರುವವರೇ ಅಧ್ಯಕ್ಷ ಸ್ಥಾನ ತಪ್ಪಿಸಲು ಕಾರಣ ಎಂದೂ ಆಪ್ತರ ಬಳಿ ಹೇಳಿಕೊಂಡಿದ್ದರು.

ಪ್ರಚಾರ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅಥವಾ ಮುಂದಿನ ಚುನಾವಣೆಯ ನೇತೃತ್ವ ವಹಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೌಜನ್ಯಕ್ಕಾದರೂ ಶಿವಕುಮಾರ್ ಭೇಟಿಯಾಗಿಲ್ಲ. ಅವರು ಕೋಪಿಸಿಕೊಂಡಿರುವುದಕ್ಕೆ ಇದು ನಿದರ್ಶನ ಎಂದು ಕಾಂಗ್ರೆಸ್ವಲಯದಲ್ಲಿ  ಹೇಳಲಾಗುತ್ತಿದೆ.

‘ಯಾರೋ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಪಕ್ಷದ ಜವಾಬ್ದಾರಿನಿಷ್ಠೆಯಿಂದ ಪಾಲಿಸುತ್ತೇನೆ’ ಎಂದು ಶಿವಕುಮಾರ್‌ ‘ಪ್ರಜಾವಾಣಿ’ಗೆ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry