ಹಲ್ಲೆಯಿಂದ ಗಾಯ: ವಿದ್ಯಾರ್ಥಿ ಕಣ್ಣಿಗೆ ಶಸ್ತ್ರಚಿಕಿತ್ಸೆ

7

ಹಲ್ಲೆಯಿಂದ ಗಾಯ: ವಿದ್ಯಾರ್ಥಿ ಕಣ್ಣಿಗೆ ಶಸ್ತ್ರಚಿಕಿತ್ಸೆ

Published:
Updated:
ಹಲ್ಲೆಯಿಂದ ಗಾಯ: ವಿದ್ಯಾರ್ಥಿ ಕಣ್ಣಿಗೆ ಶಸ್ತ್ರಚಿಕಿತ್ಸೆ

ನವದೆಹಲಿ: ‘ಗೋಮಾಂಸ ಉತ್ಸವ’ದಲ್ಲಿ ಭಾಗವಹಿಸಿದ್ದಕ್ಕಾಗಿ  ಹಲ್ಲೆಗೆ ಒಳಗಾಗಿರುವ ಮದ್ರಾಸ್‌ ಐಐಟಿಯ ಸಂಶೋಧನಾ ವಿದ್ಯಾರ್ಥಿ ಸೂರಜ್‌ ಅವರ ಬಲಗಣ್ಣಿಗೆ ತೀವ್ರ ಗಾಯವಾಗಿದ್ದು, ಅವರ ದೃಷ್ಟಿಯನ್ನು ಉಳಿಸಲು ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

ಏರೋಸ್ಪೇಸ್‌ ಎಂಜಿನಿಯರಿಂಗ್‌ ವಿಭಾಗದ ವಿದ್ಯಾರ್ಥಿಯಾದ ಸೂರಜ್‌ ಅವರ ಕಣ್ಣಿನ ಸ್ಥಿತಿಗತಿ ಕುರಿತು ಇನ್ನೊಂದು ವಾರದೊಳಗೆ  ವೈದ್ಯರು ಮಾಹಿತಿ ನೀಡಲಿದ್ದಾರೆ.

ಸೂರಜ್‌ ಮೇಲೆ ಹಲ್ಲೆ ನಡೆಸಿದ ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ಈಗಾಗಲೇ ನಡೆಸುತ್ತಿರುವ ಪ್ರತಿಭಟನೆಗಳನ್ನು ತೀವ್ರಗೊಳಿಸುವುದಾಗಿ ಆತನ ಸ್ನೇಹಿತರು ಎಚ್ಚರಿಕೆ ನೀಡಿದ್ದಾರೆ.

ಐಐಟಿ ನಿರ್ದೇಶಕರನ್ನು ಗುರುವಾರ ಭೇಟಿ ಮಾಡಿದ  ವಿದ್ಯಾರ್ಥಿಗಳು, ಹಲ್ಲೆ ನಡೆಸಿದ ವಿದ್ಯಾರ್ಥಿಗಳ ಗುಂಪು ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ಸಂಪರ್ಕ ಹೊಂದಿದೆ ಎಂದು ಆರೋಪಿಸಿದ್ದಾರೆ.

‘ಮೇ 30ರಂದು ಕ್ಯಾಂಪಸ್‌ನಲ್ಲಿ ಗೋಮಾಂಸ ಉತ್ಸವವನ್ನು ನಾವು ಆಯೋಜಿಸಿರಲಿಲ್ಲ. ಆದರೆ ಜಾನುವಾರು ಮಾರಾಟಕ್ಕೆ ಸಂಬಂಧಿಸಿದಂತೆ ಕೇಂದ್ರದ ಹೊಸ ಅಧಿಸೂಚನೆ ಕುರಿತು ಚರ್ಚಿಸಲು ಸಭೆ ಸೇರಲಾಗಿತ್ತು. ಸಭೆ ನಂತರ ಅಲ್ಲಿದ್ದವರಿಗೆ ಗೋಮಾಂಸ ನೀಡಲಾಯಿತು. ಆದ್ದರಿಂದ ಅದನ್ನು ಗೋಮಾಂಸ ಉತ್ಸವ ಎಂದು ನಾವು ಕರೆಯುವುದಿಲ್ಲ’ ಎಂದು ಇನ್ನೊಬ್ಬ ವಿದ್ಯಾರ್ಥಿ ಪರಮೇಶ್ವರನ್‌ ತಿಳಿಸಿದ್ದಾರೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry