ತಮಿಳುನಾಡು ಬಸ್ಸಿನಲ್ಲೇ ಮೃತಪಟ್ಟ ಪ್ರಯಾಣಿಕ: ಶವ ಇಳಿಸಿ ತೆರಳಿದ ಸಿಬ್ಬಂದಿ

7

ತಮಿಳುನಾಡು ಬಸ್ಸಿನಲ್ಲೇ ಮೃತಪಟ್ಟ ಪ್ರಯಾಣಿಕ: ಶವ ಇಳಿಸಿ ತೆರಳಿದ ಸಿಬ್ಬಂದಿ

Published:
Updated:
ತಮಿಳುನಾಡು ಬಸ್ಸಿನಲ್ಲೇ ಮೃತಪಟ್ಟ ಪ್ರಯಾಣಿಕ: ಶವ ಇಳಿಸಿ ತೆರಳಿದ ಸಿಬ್ಬಂದಿ

ಆನೇಕಲ್‌: ಬಸ್ಸಿನಲ್ಲಿ ಮೃತಪಟ್ಟ ಪ್ರಯಾಣಿಕರೊಬ್ಬರ ಶವವನ್ನು ಬಸ್‌ನ ಸಿಬ್ಬಂದಿ ಬಸ್‌ ನಿಲ್ದಾಣದಲ್ಲಿ ಇಳಿಸಿ ಸಂಬಂಧವೇ ಇಲ್ಲದಂತೆ ತೆರಳಿರುವ ಅಮಾನವೀಯ ಘಟನೆ ತಾಲ್ಲೂಕಿನ ಅತ್ತಿಬೆಲೆಯಲ್ಲಿ ನಡೆದಿದೆ.

ಮೃತಪಟ್ಟವರನ್ನು ಬೆಂಗಳೂರಿನ ವಿವೇಕ್‌ನಗರದ ಸುರೇಶ್‌ ಗೋಪಾಲ ನಾಯ್ಕ (58) ಎಂದು ಗುರುತಿಸಲಾಗಿದೆ. ಸಾವಿಗೆ ಕಾರಣ ತಿಳಿದುಬಂದಿಲ್ಲ. ಶವವನ್ನು ಅತ್ತಿಬೆಲೆ ಶವಾಗಾರದಲ್ಲಿ ಇಡಲಾಗಿದೆ. ಶುಕ್ರವಾರ ಮಧ್ಯಾಹ್ನ ತಮಿಳುನಾಡಿನ ಸಾರಿಗೆ ಬಸ್‌ನಲ್ಲಿ ಪ್ರಯಾಣಿಕರೆಲ್ಲರೂ ಇಳಿದ ನಂತರ ವ್ಯಕ್ತಿಯೊಬ್ಬರು ಕೊನೆಯ ಸೀಟಿನಲ್ಲಿ ಮಲಗಿರುವುದು ಕಂಡು ಬಂದಿದೆ. ನಿರ್ವಾಹಕ ಮತ್ತು ಚಾಲಕ, ಶವವನ್ನು ಕೆಳಗಿಳಿಸಿ  ತೆರಳಿದ್ದಾರೆ ಎಂದು ಸ್ಥಳೀಯರು ವಿವರಿಸಿದರು. ಅತ್ತಿಬೆಲೆ ಪೊಲೀಸರು ಪ್ರಕರಣ ದಾಖಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry