ಬಸವನಗುಡಿ ಸೆಂಟರ್‌ಗೆ ಸಮಗ್ರ ಪ್ರಶಸ್ತಿ

7

ಬಸವನಗುಡಿ ಸೆಂಟರ್‌ಗೆ ಸಮಗ್ರ ಪ್ರಶಸ್ತಿ

Published:
Updated:
ಬಸವನಗುಡಿ ಸೆಂಟರ್‌ಗೆ ಸಮಗ್ರ ಪ್ರಶಸ್ತಿ

ಬೆಂಗಳೂರು: ಬಸವನಗುಡಿ ಅಕ್ವೆಟಿಕ್ ಸೆಂಟರ್‌ (ಬಿಎಸಿ) ಶುಕ್ರವಾರ ಇಲ್ಲಿ ಮುಕ್ತಾಯಗೊಂಡ ರಾಜ್ಯ ಸಬ್ ಜೂನಿಯರ್ ಮತ್ತು ಜೂನಿಯರ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಸಮಗ್ರ ಪ್ರಶಸ್ತಿ ಎತ್ತಿಹಿಡಿದಿದೆ.

ಜೂನಿಯರ್ ವಿಭಾಗದಲ್ಲಿ ಬಿಎಸಿ 861 ಪಾಯಿಂಟ್ಸ್ ಕಲೆಹಾಕುವ ಮೂಲಕ ಮೊದಲ ಸ್ಥಾನ ಪಡೆದರೆ, ಸಬ್ ಜೂನಿಯರ್ ವಿಭಾಗದಲ್ಲಿ 323 ಪಾಯಿಂಟ್ಸ್‌ಗಳಿಂದ ಅಗ್ರಸ್ಥಾನ ಸಾಧಿಸಿದೆ.

ಗ್ಲೋಬಲ್ ಸ್ವಿಮ್ ಸೆಂಟರ್‌ನ ಶ್ರೀಹರಿ ನಟರಾಜ್‌ ಹಾಗೂ ಪೂಜಾ ಅಕ್ವೆಟಿಕ್ ಸೆಂಟರ್‌ನ ರಿದ್ಧಿ ಎಸ್.ಬೋಹ್ರಾ ಕ್ರಮವಾಗಿ ಗುಂಪು 1ರ ಬಾಲಕ ಮತ್ತು ಬಾಲಕಿಯರ  ವಿಭಾಗಗಳಲ್ಲಿ ವೈಯಕ್ತಿಕ ಪ್ರಶಸ್ತಿ ಎತ್ತಿಹಿಡಿದರು.

ಅಂತಿಮ ದಿನ ಗ್ಲೋಬಲ್ ಸ್ವಿಮ್ ಸೆಂಟರ್‌ನ ಪ್ರಸಿದ್ಧ ಕೃಷ್ಣ ನೂತನ ಕೂಟ ದಾಖಲೆ ನಿರ್ಮಿಸಿದರು. ಎರಡನೇ ಗುಂಪಿನ ಬಾಲಕರ 100ಮೀ ಪ್ಲೈ ವಿಭಾಗದಲ್ಲಿ ಕೃಷ್ಣ 59.42ಸೆಕೆಂಡುಗಳಲ್ಲಿ ಗುರಿ ಸೇರುವ ಮೂಲಕ ಚಿನ್ನಕ್ಕೆ ಕೊರಳೊಡ್ಡಿದರು. 1999ರಲ್ಲಿ ಸುದೀಪ್‌ ಚಟರ್ಜಿ ಅವರ ಹೆಸರಿನಲ್ಲಿದ್ದ ದಾಖಲೆ ಯನ್ನು ಅವರು ಅಳಿಸಿ ಹಾಕಿದರು.

ಈ ವಿಭಾಗದ ಬೆಳ್ಳಿ ಪದಕವನ್ನು ಡಾಲ್ಫಿನ್ ಅಕ್ವೆಟಿಕ್ಸ್‌ನ ತನಿಷ್ (59.63) ಗೆದ್ದುಕೊಂಡರೆ, ಕಂಚಿನ ಪದಕ ರಾಜ್ ವಿನಾಯಕ್ ಅವರ ಪಾಲಾಯಿತು.

ಗುಂಪು 1ರ ಮಹಿಳೆಯರ 200ಮೀ ಬ್ರೆಸ್ಟ್‌ಸ್ಟ್ರೋಕ್ ವಿಭಾಗದಲ್ಲಿ ಬಸವನ ಗುಡಿ ಅಕ್ವೆಟಿಕ್ ಸೆಂಟರ್‌ನ ಸಲೋನಿ ದಲಾಲ್ ನೂತನ ಕೂಟ ದಾಖಲೆ ನಿರ್ಮಿಸಿದರು. ಇವರು ನಿಗದಿತ ದೂರ ವನ್ನು 2ನಿ.50.49ಸೆಕೆಂಡುಗಳಲ್ಲಿ ಕ್ರಮಿ ಸುವ ಮೂಲಕ ಚಿನ್ನ ಗೆದ್ದರು. 2016ರಲ್ಲಿ ಹರ್ಷಿತಾ ಜಯರಾಮ್‌ (ಕಾಲ: 2;50.52) ಅವರ ಹೆಸರಿನ ದಾಖಲೆ ಅಳಿಸಿದರು. ಗ್ಲೋಬಲ್ ಸೆಂಟ ರ್‌ನ ಹರ್ಷಿತಾ ಬೆಳ್ಳಿ ಗೆದ್ದರು ಹಾಗೂ ರಿದ್ಧಿ ಎಸ್‌. ಬೋಹ್ರಾ ಕಂಚಿಗೆ ಕೊರ ಳೊಡ್ಡಿದರು. ಗುಂಪು 1ರ ಬಾಲಕರ 400ಮೀ ಮೆಡ್ಲೆ ವಿಭಾಗದಲ್ಲಿ ಗ್ಲೋಬಲ್ ಸೆಂಟರ್‌ನ ವಿ.ಬಿ ಹೇಮಂತ್ ಜೇನುಕಲ್ (ಕಾಲ: 4;55.69) ಚಿನ್ನಕ್ಕೆ ಕೊರ ಳೊಡ್ಡಿದರು. ಇದೇ ವಿಭಾಗದ ಗುಂಪು 2ರ ಸ್ಪರ್ಧೆಯಲ್ಲಿ ಬಸವನಗುಡಿ ಅಕ್ವೆಟಿಕ್ ಸೆಂಟರ್‌ನ ಶಿವಾಂಶ್ ಸಿಂಗ್‌ (ಕಾಲ: 5; 11.54) ಮೊದಲ ಸ್ಥಾನದಲ್ಲಿ ಗುರಿ ಸೇರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry