ಡಾಲ್ಮೇಷಿಯಾ ವಿಚಾರ

7

ಡಾಲ್ಮೇಷಿಯಾ ವಿಚಾರ

Published:
Updated:
ಡಾಲ್ಮೇಷಿಯಾ ವಿಚಾರ

ಡಿಸ್ನಿ ಸಿನಿಮಾ ‘101 ಡಾಲ್ಮೇಷಿಯನ್ಸ್’ನಲ್ಲಿ ಕ್ರುಯೆಲ್ಲಾ ಡಿವಿಲ್ಲೆ ಎಂಬ ವಿಕೃತ ಮಹಿಳೆ ಡಾಲ್ಮೇಷಿಯನ್ ನಾಯಿಗಳನ್ನು ಅಪಹರಿಸುತ್ತಾ ಇರುತ್ತಾಳೆ. ಅವುಗಳ ಚರ್ಮದಿಂದ ಬಟ್ಟೆ ತಯಾರಿಸುವುದು ಅವಳ ಉದ್ದೇಶ.

ಡಾಲ್ಮೇಷಿಯಾ ನಾಯಿಯು ಕ್ರೊಯೇಷಿಯಾ ಮೂಲದ್ದು ಎನ್ನುತ್ತಾರೆ. ಕುರಿಗಳ ನಿಗಾ ಮಾಡಲು ಹಾಗೂ ಮನರಂಜನೆಗೆಂದು ಈ ನಾಯಿಗಳನ್ನು ಅಲ್ಲಿ ಸಾಕುತ್ತಿದ್ದರು. ವಿಕ್ಟೋರಿಯನ್ ಇಂಗ್ಲೆಂಡ್್ನಲ್ಲಿ ಕುದುರೆ ಗಾಡಿಗಳು ಸಾಗುವಾಗ ಕಾಪಾಡಲೆಂದು ಈ ನಾಯಿಗಳಿಗೆ ತರಬೇತಿ ನೀಡುತ್ತಿದ್ದರು.

ಕ್ರಮೇಣ ಇವು ಫ್ಯಾಷನ್ ಸಂಕೇತವಾದವು. ಅಮೆರಿಕದಲ್ಲಿ ಕುದುರೆಗಳು ಎಳೆದೊಯ್ಯುತ್ತಿದ್ದ ಅಗ್ನಿಶಾಮಕ ವಾಹನಗಳ ಕಾವಲಿಗೆಂದು ಇವನ್ನು ಬಳಸಿದರು. ಅಗ್ನಿಶಾಮಕ ವಾಹನಗಳ ಚಕ್ರಗಳ ಮಧ್ಯ ತುಸುವೂ ಅಳುಕಿಲ್ಲದೆ ವೇಗವಾಗಿ ಓಡಬಲ್ಲ ನಾಯಿಗಳಿವು.

ಹುಟ್ಟುವಾಗ ಈ ತಳಿಯ ನಾಯಿ ಬಿಳಿಬಣ್ಣದ್ದಾಗಿರುತ್ತದೆ. ವಾರದ ನಂತರ ಚರ್ಮದ ಮೇಲೆ ಕಪ್ಪು ತೇಪೆಗಳು ಮೂಡುತ್ತವೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry