ಪ್ರಜಾವಾಣಿ ಕ್ವಿಜ್‌

7

ಪ್ರಜಾವಾಣಿ ಕ್ವಿಜ್‌

Published:
Updated:
ಪ್ರಜಾವಾಣಿ ಕ್ವಿಜ್‌

1)  ಕಳೆದ 30 ವರ್ಷಗಳ ಬಳಿಕ ಭಾರತದ ಪ್ರಧಾನಿ ಇತ್ತೀಚೆಗೆ ಸ್ಪೇನ್‌ ದೇಶಕ್ಕೆ ಭೇಟಿ ನೀಡಿ ಹಲವು ಒಪ್ಪಂದಗಳಿಗೆ ಸಹಿ ಹಾಕಿದರು. ಪ್ರಸ್ತುತ ಸ್ಪೇನ್ ದೇಶದ ಪ್ರಧಾನಿ ಯಾರು?  

a) ಮೇರಿಯಾನೊ ರಜೊಯ್‌  

b) ಮಾಂಕೊಲ

c)  ಡೆಲ್‌ ಗೋಬಿರೆನೋ 

d) ಝಪಟೇರೊ2) ಸೂರ್ಯನ ಮೇಲಿನ ವಾತಾವರಣ ಅಧ್ಯಯನಕ್ಕಾಗಿ 2018ರಲ್ಲಿ ನಾಸಾ ಯಾವ ನೌಕೆಯನ್ನು ಉಡಾವಣೆ ಮಾಡಲಿದೆ?  

a)  ಪಾರ್ಕರ್‌ ಸೌರ ಶೋಧನಾನೌಕೆ

b)  ವಾಲರ್ಕರ್ ಸೌರ ನೌಕೆ

c)  ನಾಸಾ ಸೌರ ನೌಕೆ

d) ಹಾಕಿನ್ಸ್ ಸೌರ ನೌಕೆ

3)  ಈ ಕೆಳಕಂಡ   ಯಾವ ರಾಜ್ಯ ಪ್ರತಿ ಮನೆಗೂ ವಿದ್ಯುತ್ ಸಂಪರ್ಕ ಕಲ್ಪಿಸಿದ ದೇಶದ ಮೊಟ್ಟಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ?     

a) ಹರಿಯಾಣ    b) ಗೋವಾ

c) ಕೇರಳ          d) ದೆಹಲಿ

4)  2017ರ ಜೂನ್‌ 2ರಂದು ಅಮೆರಿಕ   ‘ಪ್ಯಾರಿಸ್ ಒಪ್ಪಂದ’ದಿಂದ ಹಿಂದೆ ಸರಿಯುವುದಾಗಿ ಪ್ರಕಟಿಸಿತು. ಈ ಪ್ಯಾರಿಸ್ ಒಪ್ಪಂದ ಕೆಳಕಂಡವುಗಳಲ್ಲಿ ಯಾವುದಕ್ಕೆ ಸಂಬಂಧಿಸಿದೆ? 

a) ಭಯೋತ್ಪಾದನೆ ನಿಗ್ರಹ

b) ಬಡರಾಷ್ಟ್ರಗಳಿಗೆ ನೆರವು

c) ಜಾಗತಿಕವಾಗಿ ಮಹಿಳೆಯರ ರಕ್ಷಣೆ

d) ಜಾಗತಿಕ ತಾಪಮಾನ ತಡೆ

5)  ದೇಶದಲ್ಲಿ ಬಯಲು ಶೌಚಾಲಯವನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ, ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಕೇಂದ್ರ ಸರ್ಕಾರ ಯಾವ  ’ಪ್ರಚಾರ ಅಭಿಯಾನ’ಕ್ಕೆ ಚಾಲನೆ ನೀಡಿದೆ.  

a) ಸ್ವಚ್ಛಭಾರತ ಅಭಿಯಾನ

b) ದರ್ವಾಜ್ ಬಂದ್ ಅಭಿಯಾನ

c) ಶೌಚಭಾರತ ಅಭಿಯಾನ

d) ಮೇಲಿನ ಯಾವುದು ಅಲ್ಲ

6) ಭಾರತ ಸರ್ಕಾರ ಹೊಸದಾಗಿ ನೆರಳೆ ಮತ್ತು ಗುಲಾಬಿಬಣ್ಣದ ಒಂದು ರೂಪಾಯಿ ನೋಟನ್ನು ಮುದ್ರಿಸುವುದಾಗಿ ಪ್ರಕಟಣೆ ಹೊರಡಿಸಿದೆ. ಈ ಕೆಳಗಿನ ಯಾವ ವರ್ಷದಲ್ಲಿ ಒಂದು ರೂಪಾಯಿ ನೋಟಿನ ಮುದ್ರಣವನ್ನು ನಿಲ್ಲಿಸಲಾಗಿತ್ತು?  

a) 1994            b) 1995

c) 1996            d)1997

7)  ಅಂತರರಾಷ್ಟ್ರೀಯ ಮಟ್ಟದ ಫೆನ್ಸಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಮೊಟ್ಟಮೊದಲ ಭಾರತೀಯ ಆಟಗಾರ್ತಿ ಎಂಬ  ಖ್ಯಾತಿಗೆ ಯಾರು ಪಾತ್ರರಾಗಿದ್ದಾರೆ? 

a) ಸಾಗರ ಲಾಗು

b) ವಸುಮತಿ ಡೋಗ್ರ

c) ಸಿ.ಎ. ಭವಾನಿದೇವಿ

d)  ತ್ರಿವೇಣಿ ಜೈನ್‌

8)  ಬಾಲಿವುಡ್‌ನ ಈ ಕೆಳಕಂಡ ಯಾವ ಜನಪ್ರಿಯ ನಟಿಗೆ ದಾದಾ ಸಾಹೇಬ್‌ ಫಾಲ್ಕೆ  ಆಕಾಡೆಮಿ ಪ್ರಶಸ್ತಿಯನ್ನು ನೀಡಲಾಗಿದೆ? 

a) ಪ್ರಿಯಾಂಕ ಚೋಪ್ರಾ

b) ರಾಧಿಕ ಆಮ್ಟೆ

c) ದೀಪಿಕಾ ಪಡುಕೋಣೆ

d) ಕತ್ರಿನಾ ಕೈಪ್‌

9) ಭಾರತದಲ್ಲಿ ಡಿಆರ್‌ಡಿಒ ಸಂಸ್ಥೆಯು ವೈಮಾನಿಕ ಪರೀಕ್ಷಾ ವಲಯ (ಏರೊನಾಟಿಕಲ್‌ ಟೆಸ್ಟ್‌ ರೇಂಜ್‌-ಎಟಿಆರ್‌) ಅನ್ನು ಈ ಕೆಳಕಂಡ ಯಾವ ಸ್ಥಳದಲ್ಲಿ ಅಭಿವೃದ್ಧಿಪಡಿಸಿದೆ?

a)  ಕೋಲಾರ    b) ವಿಶಾಖಪಟ್ಟಣ

c) ಬಿಕೇನಾರ್   d)  ಚಿತ್ರದುರ್ಗ

10)  ಅಸ್ಸಾಂನಲ್ಲಿ ಬ್ರಹ್ಮಪುತ್ರಾನದಿಗೆ ನಿರ್ಮಿಸಲಾಗಿರುವ ದೇಶದ ಅತಿ ಉದ್ದದ ಸೇತುವೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಇತ್ತೀಚೆಗೆ ಲೋಕಾರ್ಪಣೆ ಮಾಡಿದರು. ಈ ಸೇತುವೆ ಯಾವ ಎರಡು ರಾಜ್ಯಗಳನ್ನು ಜೋಡಿಸುತ್ತದೆ? 

a) ಅಸ್ಸಾಂ–ಮೇಘಾಲಯ

b) ಅರುಣಾಚಲ ಪ್ರದೇಶ–ಉತ್ತರ ಪ್ರದೇಶ 

c) ಅರುಣಾಚಲ ಪ್ರದೇಶ–ಅಸ್ಸಾಂ

d) ನಾಗಾಲ್ಯಾಂಡ್‌–ಮಣಿಪುರ

ಉತ್ತರಗಳು.... 1–a, 2–a, 3–c, 4–d, 5–b, 6–a, 7–c, 8–a,  9–d, 10–c

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry