‘ಸ್ಪೈಡರ್‌’ ಬಾಬು

7

‘ಸ್ಪೈಡರ್‌’ ಬಾಬು

Published:
Updated:
‘ಸ್ಪೈಡರ್‌’ ಬಾಬು

ಒಂದು ರೋಬೊ ಸ್ಪೈಡರ್‌ ಓಡಾಟ,  ಅಬ್ಬರದ ಹಿನ್ನೆಲೆ ಸಂಗೀತ, ಹತ್ತಾರು ಕಂಪ್ಯೂಟರ್ ಮುಂದೆ ಕೆಲಸ ಮಾಡುತ್ತಿರುವ ನಾಯಕ ಇದು ‘ಸ್ಪೈಡರ್‌’ ಸಿನಿಮಾದ ಟ್ರೇಲರ್. ಸ್ಟಾರ್ ನಾಯಕ ಮಹೇಶ್ ಬಾಬು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಮೇ 31ರಂದು ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿರುವ ಈ ಟ್ರೇಲರ್  ಮೊದಲ ದಿನವೇ 50 ಲಕ್ಷ ಬಾರಿ ವೀಕ್ಷಣೆಯಾಗಿದೆ.

ತೆಲುಗು ಚಿತ್ರರಂಗದ ನಟಿ ಲಕ್ಷ್ಮೀ ರೈ, ನಿಕಿಶಾ ಪಟೇಲ್ ಸೇರಿದಂತೆ ಸಾಕಷ್ಟು ನಟಿಯರೂ ‘ಸ್ಪೈಡರ್‌’ ಟ್ರೇಲರ್ ಬಗ್ಗೆ ಟ್ವೀಟ್‌ ಮಾಡಿದ್ದಾರೆ. ಮುರುಗದಾಸ್ ನಿರ್ದೇಶನದ ಚಿತ್ರವಿದು.  ಅಬ್ಬರದ ಸಂಗೀತ, ಅತಿ ಎನಿಸುವಷ್ಟು ಗ್ರಾಫಿಕ್ಸ್‌ ಬಳಕೆಯಾಗಿದೆ. ಒಟ್ಟಾರೆ ಈ ಟ್ರೇಲರ್‌ 1.14 ನಿಮಿಷವಿದೆ.

ಮಹೇಶ್‌ಬಾಬು ಭ್ರಷ್ಟಾಚಾರದ ವಿರುದ್ಧ ಹೋರಾಡುವ ಗುಪ್ತಚರ ಅಧಿಕಾರಿಯ ಪಾತ್ರ ನಿರ್ವಹಿಸಿದ್ದಾರೆ. ಸಿನಿಮಾದಲ್ಲಿ ಭಾರತ್, ರಾಕುಲ್ ಪ್ರೀತ್ ಸಿಂಗ್, ಎಸ್. ಜೆ. ಸೂರ್ಯ, ನಾಡಿಯಾ, ಪ್ರಿಯದರ್ಶಿ ಪುಲ್ಲಿಕೊಂಡಾ ಅಭಿನಯಿಸಿದ್ದಾರೆ. ಸಿನಿಮಾ ಸೆಪ್ಟೆಂಬರ್ 30ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry