ಮತ್ತೆ ‘ಟರ್ಮಿನೇಟರ್‌’

7

ಮತ್ತೆ ‘ಟರ್ಮಿನೇಟರ್‌’

Published:
Updated:
ಮತ್ತೆ ‘ಟರ್ಮಿನೇಟರ್‌’

ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ‘ಟರ್ಮಿನೇಟರ್‌’ ಚಿತ್ರ ಸರಣಿಯ 6ನೇ ಚಿತ್ರ ಶೀಘ್ರ ಸೆಟ್ಟೇರಲಿದೆ.

ಕಾನ್‌ ಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದ ಟರ್ಮಿನೇಟರ್ ಚಿತ್ರ ಸರಣಿಯ ಕಾಯಂ ಮುಖ್ಯ ಪಾತ್ರಧಾರಿ ಅರ್ನಾಲ್ಡ್ ಅವರೇ ಸ್ವತಃ ಈ ವಿಷಯ ಹೇಳಿಕೊಂಡಿದ್ದಾರೆ.

‘ಟರ್ಮಿನೇಟರ್’ ಚಿತ್ರ ಸರಣಿಯ ಮೊದಲ ಮತ್ತು ಎರಡನೇ ಚಿತ್ರಗಳನ್ನು ನಿರ್ದೇಶಿಸಿದ್ದ ಜೇಮ್ಸ್‌ ಕ್ಯಾಮರೂನ್ ಅವರೇ ಈ ಚಿತ್ರವನ್ನೂ ನಿರ್ದೇಶಿಸಲಿದ್ದಾರೆ. ಹೊಸ ಪೀಳಿಗೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಚಿತ್ರಕತೆ ರಚಿಸಲಾಗುತ್ತಿದೆಯಂತೆ.

ಟೈಟಾನಿಕ್, ಅವತಾರ್‌ನಂಥ ಬಹುಕೋಟಿ ಚಿತ್ರಗಳ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ‘ಟರ್ಮಿನೇಟರ್–6’ ಚಿತ್ರಕಥೆಯನ್ನು ಹೊಸ ಪೀಳಿಗೆಗೆ ಇಷ್ಟವಾಗುವಂತೆ ಮುತುವರ್ಜಿಯಿಂದ ಹೆಣೆಯುತ್ತಿದ್ದಾರೆ. ಟರ್ಮಿನೇಟರ್ ಸರಣಿಯ 5 ಚಿತ್ರ ‘ಟರ್ಮಿನೇಟರ್ ಜೆನಸಿಸ್‌’ 2015ರಲ್ಲಿ ಬಿಡುಗಡೆಯಾಗಿತ್ತು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry