ವಿ.ಜೆ.ನಾಯಕ ನಿಧನ

7

ವಿ.ಜೆ.ನಾಯಕ ನಿಧನ

Published:
Updated:
ವಿ.ಜೆ.ನಾಯಕ ನಿಧನ

ಅಂಕೋಲಾ: ಸಮಾಜವಾದಿ ಚಿಂತಕ ವಿ.ಜೆ.ನಾಯಕ (84) ಅವರು ತಾಲ್ಲೂಕಿನ ವಂದಿಗೆ ಗ್ರಾಮದಲ್ಲಿ ಭಾನುವಾರ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ.

ಭೂಸುಧಾರಣಾ ಚಳವಳಿ ಸಂದರ್ಭ ದಿನಕರ ದೇಸಾಯಿ ಅವರೊಂದಿಗೆ ಕೈಜೋಡಿಸಿದ್ದ ಅವರು, ಯಕ್ಷಗಾನ, ಚಂಡೆಮದ್ದಳೆ, ಬಯಲಾಟ, ಹವ್ಯಾಸಿ ನಾಟಕದಲ್ಲಿ ಅಭಿನಯಿಸುವ ಮೂಲಕ ಕಲಾ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು.

ಶಿಕ್ಷಣ ಪ್ರಸಾರ, ಕನ್ನಡ ಪರ ಆಂದೋಲನ ಸೇರಿದಂತೆ  ವಿವಿಧ ಹೋರಾಟಗಳಲ್ಲಿ ಪಾಲ್ಗೊಂಡಿದ್ದರು. 1961ರಲ್ಲಿ ಶೇಟಗೇರಿಯಲ್ಲಿ ಸ್ಥಾಪನೆಯಾದ ಸತ್ಯಾಗ್ರಹ ಸ್ಮಾರಕ ವಿದ್ಯಾಲಯದ ಸಂಸ್ಥಾಪಕ ಕಾರ್ಯದರ್ಶಿಯಾಗಿ  ಮತ್ತು ಮುಖ್ಯೋಪಾಧ್ಯಾಯರಾಗಿ ಕಾರ್ಯನಿರ್ವಹಿಸಿದ್ದರು.

ರಾಷ್ಟ್ರಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಪುಸ್ತಕ ಬಹುಮಾನ, ಕರ್ನಾಟಕ ನಾಟಕ ಅಕಾಡೆಮಿ ಗೌರವ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಅಂತ್ಯಕ್ರಿಯೆ ಸೋಮವಾರ (ಜೂನ್‌ 5) ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry