ಹಸಿರ ಕಾನನದಲ್ಲಿ ವನ್ಯಜೀವಿಗಳ ಮೆರವಣಿಗೆ

7
ಪೂರ್ವ ಮುಂಗಾರು ಕೃಪೆಯಿಂದ ಮೈ ತುಂಬಿಕೊಂಡ ಕಾಡುಗಳು; ವನ್ಯಜೀವಿಗಳಿಗೆ ವರದಾನ

ಹಸಿರ ಕಾನನದಲ್ಲಿ ವನ್ಯಜೀವಿಗಳ ಮೆರವಣಿಗೆ

Published:
Updated:
ಹಸಿರ ಕಾನನದಲ್ಲಿ ವನ್ಯಜೀವಿಗಳ ಮೆರವಣಿಗೆ

ಯಳಂದೂರು: ಪೂರ್ವ ಮುಂಗಾರು ಕೃಪೆ ತೋರಿದ್ದು, ಕಾನನದಲ್ಲಿ ಹಸಿರು ನಳನಳಿಸುತ್ತಿದೆ. ಬರದಿಂದ ಆಹಾರ ವಿಲ್ಲದೆ ನರಳಿದ್ದ ವನ್ಯ ಜೀವಿಗಳ ಹಸಿವು ತಕ್ಕ ಮಟ್ಟಿಗೆ ನೀಗಿದೆ. ಕೆರೆ ಕಟ್ಟೆಗಳಲ್ಲೂ ನೀರು ಸ್ವಲ್ಪ ಮಟ್ಟಿಗೆ ತುಂಬಿದ್ದು  ಪ್ರಾಣಿ, ಪಕ್ಷಿಗಳ ಸಂಚಾರಕ್ಕೂ ಜೀವಕಳೆ ತಂದಿದೆ.

‘ಮಳೆಗಾಗಿ ಮರ’ ಎಂಬುದು ರಾಜ್ಯ ಅರಣ್ಯ ಇಲಾಖೆಯ ಘೋಷಣೆ. ಎಲ್ಲೆಡೆ ‘ಮರನೆಟ್ಟು ಬರಅಟ್ಟು’ ಎನ್ನುವ ಕಾಯಕಕ್ಕೆ ಈಗ ಹೆಚ್ಚು ಒತ್ತು ನೀಡ ಲಾಗಿದೆ. ಇದಕ್ಕೆ ವರುಣನ ಸಾಥ್‌ ಸಿಕ್ಕಿದ್ದು ಭೂತಾಯಿ ಮಡಿಲಲ್ಲಿ ಹಸಿರು ತುಂಬಿದೆ. ಇದರಿಂದ ನವಚೈತನ್ಯ ಕಾಡು ಪ್ರಾಣಿ ಗಳಲ್ಲಿ ನವಚೈತನ್ಯ ತುಂಬಿದ್ದು, ತಾಲ್ಲೂಕಿನ ಕಾಡಿನ ರಸ್ತೆಗಳ ಎರಡೂ ಬದಿಗಳಲ್ಲೂ ವನ್ಯ ಜೀವಿಗಳು ಈಗ ಸಾಲಾಗಿ ಮೆರವಣಿಗೆ ಹೋಗುವುದನ್ನು ಕಾಣಬಹುದು.

ಕಾಡು ಮತ್ತು ನಾಡಿನ ಎಲ್ಲೆಡೆ ಸಸಿನೆಟ್ಟು ಹಸಿರೀಕರಣ ಮಾಡಲು ಸಾಮಾಜಿಕ ಅರಣ್ಯ ಇಲಾಖೆ ಕಾರ್ಯ ಯೋಜನೆ ಸಿದ್ಧಪಡಿಸಿದೆ. ಸರ್ಕಾರಿ ಸ್ಥಳ, ಶಾಲಾ ಕಾಲೇಜು ಹಾಗೂ ನೀರಿನ ಒರತೆ ಗಳ ಬಳಿ ಹಾಗೂ ಸಾರ್ವಜನಿಕ ಆವ ರಣಕ್ಕೆ ಗಿಡ ನೆಡುವ ಮೂಲಕ ವಿದ್ಯಾರ್ಥಿ ಗಳಲ್ಲೂ ಪರಿಸರದ ಬಗ್ಗೆ ಆಸಕ್ತಿ ಬೆಳೆಸುತ್ತಿದೆ.

ತಾಲ್ಲೂಕಿನ ಬಹಳಷ್ಟು ಕೆರೆಕಟ್ಟೆಗಳ ಸುತ್ತಲೂ ಸಸಿಗಳನ್ನು ಹಾಕಲಾಗಿದೆ. ರಸ್ತೆಬದಿ ನೆಟ್ಟಿರುವ ಗಿಡಗಳು ಮೇಲೆದ್ದಿವೆ. ಬೇಸಿಗೆಯಲ್ಲಿ ಟ್ಯಾಂಕರ್‌ ಮೂಲಕ ನೀರು ಹಾಕಿ ಬೆಳೆಸಿರುವುದನ್ನು ಮೆಲ್ಲಹಳ್ಳಿ ಗೇಟ್‌ ಮತ್ತು ಗೌಡಹಳ್ಳಿ ಸುತ್ತಮುತ್ತ ಕಾಣಬಹುದು. ಗುಂಬಳ್ಳಿ ಮತ್ತು ದೇವರಹಳ್ಳಿ ರಸ್ತೆಗಳಲ್ಲಿ ಮೇಲೆದ್ದ ಸಸಿಗಳು ಇತ್ತೀಚೆಗೆ ಸುರಿದ ಮಳೆಗೆ ಚಿಗು ರಿವೆ. ಕಾಡಂಚಿನ ಕೆರೆಗಳ ಬಳಿ ಕರಡಿ, ಕಾಟಿ, ಚಿರತೆಗಳು ಬರುವಷ್ಟು ಹಸಿರು ಪರಿಸರ ಸೃಷ್ಟಿಸಲಾಗಿದೆ ಎನ್ನುತ್ತಾರೆ ಸಾಮಾಜಿಕ ಅರಣ್ಯ ಇಲಾಖೆಯ ಅನಂತರಾಮು.

ಕೃಷಿ ಅರಣ್ಯ ಯೋಜನೆಯಡಿ ಕೃಷಿಕ ರಿಗೆ ಸಸಿ ವಿತರಿಸಲಾಗುತ್ತದೆ. ವರ್ಷಾಂತ್ಯಕ್ಕೆ ಆರ್ಥಿಕ ನೆರವು ಇವರಿಗೆ ನೀಡಲಾಗುತ್ತದೆ.

ಜೈವಿಕ ಸಂಪನ್ಮೂಲ ಸಂಗ್ರಹಕ್ಕೆ ನೆರವಾಗುವ ಹೊಂಗೆ, ಮಾರಿಬೇವು ಮತ್ತು ಹೆಬ್ಬೇವು, ರಸ್ತೆ ಬದಿ ಅಲಂಕಾರಿಕ ವಾಗಿ ಬೆಳೆಯುವ ಪುಷ್ಪ ಪ್ರಬೇಧ ಹಾಗೂ ನೇರಳೆ ಗಿಡಗಳನ್ನು ಗುಂಬಳ್ಳಿ ಸಸ್ಯಕ್ಷೇತ್ರ ದಲ್ಲಿ ಅಭಿವೃದ್ಧಿ ಪಡಿಸಿ ವಿತರಿಸ ಲಾಗುತ್ತಿದೆ.

‘ಈಗಾಗಲೇ ಕಾಡು ಜಾತಿಯ ವೃಕ್ಷಗಳನ್ನು ಪಡೆದು ಬಂಜರು ಭೂಮಿ ಯಲ್ಲಿ ನಾಟಿ ಮಾಡಲಾಗಿದೆ. ಜಮೀನಿನ ಸುತ್ತಮುತ್ತಾ ಹಾಗೂ ಗೌಡಹಳ್ಳಿ ಕಾಡಂ ಚಿನ ಜಮೀನುಗಳ ಬಳಿ ವನ್ಯಜೀವಿಗಳು ಬರುವುದಿದೆ. ಹೆಚ್ಚು ಹಸಿರೀಕರಣ ಮಾಡಿ, ನೀರು ನಿಲ್ಲಿಸಿದರೆ ವನ್ಯಜೀವಿಗಳ ಹಾವಳಿ ತಡೆಗಟ್ಟಬಹುದು’ ಎನ್ನುತ್ತಾರೆ ಕೃಷಿಕ ಸುರೇಶ್.

(ಯಳಂದೂರು ಕೃಷ್ಣಯ್ಯನ ಕಟ್ಟೆಯ ಹಸಿರು ಅಂಗಳದಲ್ಲಿ ಜಿಂಕೆಗಳ ಹಿಂಡು ಖುಷಿಯಿಂದ ಹೊರಟಿದ್ದು, ಮೆರವಣಿಗೆಯಂತೆ ಕಾಣುತ್ತಿದೆ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry