ಜುಲೈ 1ರಂದು ದಾವಣಗೆರೆಯಲ್ಲಿ ವಾಲ್ಮೀಕಿ ಸಮಾವೇಶ

7

ಜುಲೈ 1ರಂದು ದಾವಣಗೆರೆಯಲ್ಲಿ ವಾಲ್ಮೀಕಿ ಸಮಾವೇಶ

Published:
Updated:
ಜುಲೈ 1ರಂದು ದಾವಣಗೆರೆಯಲ್ಲಿ ವಾಲ್ಮೀಕಿ ಸಮಾವೇಶ

ಬೆಂಗಳೂರು: ರಾಜ್ಯ ಜನತಾದಳ (ಜಾತ್ಯತೀತ) ಜುಲೈ 1 ರಂದು ದಾವಣಗೆರೆಯಲ್ಲಿ  ಬೃಹತ್‌ ವಾಲ್ಮೀಕಿ ಸಮಾವೇಶ ಏರ್ಪಡಿಸಿದೆ.

ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಸೋಮವಾರ ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದರು.

‘ಕಾಂಗ್ರೆಸ್‌ ಮತ್ತು ಬಿಜೆಪಿಗೆ ಪರ್ಯಾಯವಾಗಿ ಈ ಸಮಾವೇಶ ಆಯೋಜಿಸಲಾಗಿದೆ. ವಾಲ್ಮೀಕಿ ಜನಾಂಗದವರನ್ನು ಒಗ್ಗೂಡಿಸುವ ಉದ್ದೇಶದಿಂದ ಸಮಾವೇಶ ನಡೆಸಲಾಗುತ್ತಿದೆ’ ಎಂದರು.

ಜಿಡಿಪಿ ಕುಸಿತಕ್ಕೆ ನೋಟು ರದ್ದು ಕಾರಣ: ‘ದೇಶದ ಜಿಡಿಪಿ ಕುಸಿತಕ್ಕೆ ನೋಟು ರದ್ದತಿಯೇ ಕಾರಣ. ಪ್ರಧಾನಿ ನರೇಂದ್ರಮೋದಿ ಅವರ ನೋಟು ರದ್ದು  ಪರಿಣಾಮಕ್ಕೆ ಜಿಡಿಪಿ ಕುಸಿತಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ’ ಎಂದು ಅವರು ಹೇಳಿದರು.

‘ನೋಟು ರದ್ದತಿಯಿಂದ ಜನರಿಗೆ ಅನೇಕ ಸಮಸ್ಯೆಗಳು ಆಗಿವೆ. ಈ ಕುರಿತು ಶೀಘ್ರದಲ್ಲೇ ಸಭೆ ನಡೆಸಿ, ಆಗಿರುವ ತೊಂದರೆಗಳನ್ನು ಬಹಿರಂಗಪಡಿಸುತ್ತೇನೆ’ ಎಂದರು.

ಕಾಂಗ್ರೆಸ್ ಸೇರಿದರೆ ಪರಿಣಾಮ ಆಗಲ್ಲ: ‘ಕೆಲ  ಮಾಜಿ ನಾಯಕರು ಕಾಂಗ್ರೆಸ್‌ ಸೇರಿದರೆ ಪಕ್ಷಕ್ಕೇನೂ ಪರಿಣಾಮ ಆಗುವುದಿಲ್ಲ. ದೊಡ್ಡವರು ಸೇರಿದರೆ ಮಾತ್ರ ಸುದ್ದಿ ಆಗುತ್ತದೆ’ ಎಂದು ದೇವೇಗೌಡ ತಮ್ಮ ಪಕ್ಷದಿಂದ ಅಮಾನತುಗೊಂಡಿರುವ ಶಾಸಕರ ವಿರುದ್ಧ  ವ್ಯಂಗ್ಯವಾಡಿದರು.

‘ಪಕ್ಷಕ್ಕೆ ಯುವ ನಾಯಕರು ಸೇರುತ್ತಿದ್ದಾರೆ. ಇದರಿಂದ ಜೆಡಿಎಸ್‌ಗೆ ಹೆಚ್ಚಿನ ಬಲ ಬಂದಿದೆ’ ಎಂದೂ  ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry