ಪ್ರಾಕೃತಿಕ ಸಂಪತ್ತಿನ ಮೇಲೆ ನಿತ್ಯ ಶೋಷಣೆ

7

ಪ್ರಾಕೃತಿಕ ಸಂಪತ್ತಿನ ಮೇಲೆ ನಿತ್ಯ ಶೋಷಣೆ

Published:
Updated:
ಪ್ರಾಕೃತಿಕ ಸಂಪತ್ತಿನ ಮೇಲೆ ನಿತ್ಯ ಶೋಷಣೆ

ಹನೂರು: ಮೂಲ ಹಕ್ಕುಗಳಿಗಾಗಿ ಹೋರಾಡುತ್ತಿರುವ ನಾವು ಕರ್ತವ್ಯ ಗಳನ್ನು ಮರೆತಿದ್ದೇವೆ. ಇದರ ಪರಿಣಾಮ ಇಂದು ಅರಣ್ಯ ಸಂಪತ್ತು ಅಳಿವಿನಂಚಿ ನಲ್ಲಿದೆ ಎಂದು ಕೊಳ್ಳೇಗಾಲ ಜೆಎಂ ಎಫ್‌ಸಿ ಹಿರಿಯ ಸಿವಿಲ್ ನ್ಯಾಯಾಧೀಶ ಕೃಷ್ಣ ಅಭಿಪ್ರಾಯಪಟ್ಟರು.

ಕಾವೇರಿ ಹಾಗೂ ಮಲೆಮಹದೇಶ್ವರ ವನ್ಯಧಾಮ ಮತ್ತು ವಿವೇಕನಂದ  ಶಿಕ್ಷಣ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಸೋಮ ವಾರ ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯ ಕ್ರಮದಲ್ಲಿ ಮಾತನಾಡಿದರು.

ಪ್ರಾಕೃತಿಕ ಸಂಪತ್ತಿನ ಮೇಲೆ ದಿನಂ ಪ್ರತಿ ಒಂದಿಲ್ಲೊಂದು ರೀತಿ ಶೋಷಣೆ ನಡೆಯುತ್ತಿದೆ. ಮನುಷ್ಯನ ಆಸೆಗಳನ್ನು ಪೂರೈಸುವ ಶಕ್ತಿ ಪರಿಸರಕ್ಕಿದೆ, ಆದರೆ  ಆತನ  ದುರಾಸೆಗಳನ್ನಲ್ಲ  ಎಂದರು.

ಪ್ರಾಕೃತಿಕ ಸಂಪತ್ತು ಹಾಗೂ ರಾಷ್ಟ್ರೀಯ ಸಂಪತ್ತಿನ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಹೊಣೆ. ಇದನ್ನು ವಿಶ್ವದೆಲ್ಲೆಡೆ ಆಚರಿಸಬೇಕು. ವಿಶ್ವಸಂಸ್ಥೆ ಪ್ರತಿ ವರ್ಷ ಜೂನ್‌ 5 ವಿಶ್ವ ಪರಿಸರ ದಿನ ಎಂದು ಘೋಷಿಸಿದೆ ಎಂದರು.

ಮಲೆಮಹದೇಶ್ವರ ವನ್ಯಧಾಮದ ಪ್ರಭಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್. ಶಿವರಾಮ್‌ ಬಾಬು, ವಿಶ್ವ ಪರಿಸರ ದಿನ ಅಂಗವಾಗಿ  ಹನೂರು ಶೈಕ್ಷಣಿಕ ವಲ ಯದ ವಿವಿಧ ಶಾಲೆಗಳಿಗೆ ಇಲಾಖೆ ವತಿಯಿಂದ ಗಿಡಗಳನ್ನು ನೀಡಲಾಗಿದೆ ಎಂದರು.

‘ಇವುಗಳನ್ನು ಒಂದು ವರ್ಷದವರೆಗೆ ಪೋಷಿಸಿದ ಶಾಲೆಗಳಿಗೆ ಪುರಸ್ಕಾರ ನೀಡ ಲಾಗುವುದು. ವಿದ್ಯಾರ್ಥಿಗಳು ಪರಿಸರದ ಮಹತ್ವ ಮತ್ತು ಅದರ ಪ್ರಾಮುಖ್ಯತೆ ಅರಿತು, ಇತರರಿಗೂ ಅದರ ಬಗ್ಗೆ ತಿಳಿವಳಿಕೆ ಮೂಡಿಸಬೇಕು ಎಂದರು.

ಸಹಿಸಂಗ್ರಹ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪರಿಸರ ಸಂರಕ್ಷಣೆ ಗಾಗಿ ಶ್ರಮಿಸುತ್ತೇನೆ ಎಂಬುದಾಗಿ ಹಸಿರು ಪ್ರತಿಜ್ಞೆಯನ್ನು ಮಾಡಿಸಿ ನಂತರ ಗಣ್ಯರು ಹಾಗೂ ಪ್ರತಿ ವಿದ್ಯಾರ್ಥಿಗಳಿಂದ ಸಹಿ ಸಂಗ್ರಹಿಸಲಾಯಿತು.

ಕಾರ್ಯಕ್ರಮದಲ್ಲಿ ಮಲೆ ಮಹದೇಶ್ವರ ವನ್ಯಧಾಮದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಜೆ.ಚಂದ್ರ, ಬಿಇಒ ವೈ.ಕೆ.ತಿಮ್ಮೆಗೌಡ, ವಿವೇಕನಂದ ಶಿಕ್ಷಣ ಸಂಸ್ಥೆಯ ಕಾರ್ಯ ದರ್ಶಿ ಸುರೇಶ್‌ನಾಯ್ಡು, ಪ್ರಾಂಶುಪಾಲ ಮಧುಸೂಧನ್, ಮುಖ್ಯ ಶಿಕ್ಷಕಿ ಸತ್ಯಪ್ರಿಯಾ, ಆರ್ಎಫ್ಒ ಲೋಕೇಶ ಮೂರ್ತಿ, ಬಿ.ಸಿ.ಲೋಕೇಶ್, ಸಯ್ಯದ್ ಸಾಬಾ ನದಾಫ್, ಶಂಕರ್ ಅಂತರಗಟ್ಟಿ, ಸುಂದರ್, ಗಿರೀಶ್, ರಾಜೇಶ್ ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry