ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಯಣ್ಣನ ಸೈನಿಕ ಶಾಲೆ ನಿರ್ಮಾಣಕ್ಕೆ ಶೀಘ್ರ ಚಾಲನೆ’

Last Updated 6 ಜೂನ್ 2017, 7:29 IST
ಅಕ್ಷರ ಗಾತ್ರ

ಬೈಲಹೊಂಗಲ: ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜನ್ಮಸ್ಥಳ ಸಂಗೊಳ್ಳಿ ಗ್ರಾಮದಲ್ಲಿ ರಾಯಣ್ಣನ ಶೌರ್ಯ, ಸಾಹಸ ಕುರಿತು ತರಬೇತಿ ನೀಡುವ ಸೈನಿಕ ಶಾಲೆ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೂಮಿಪೂಜೆಯನ್ನು ಶೀಘ್ರ ನೆರವೇರಿಸಲಿದ್ದಾರೆ’ ಎಂದು ಸಂಗೊಳ್ಳಿ ರಾಯಣ್ಣ ಪ್ರಾಧಿಕಾರದ ಉನ್ನತ ಮಟ್ಟದ ಸಮಿತಿ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ಹೇಳಿದರು.

‘ಮುಖ್ಯಮಂತ್ರಿ ಅವರಿಂದ ಅನುಮೋದನೆ ಪಡೆದು ಈ ತಿಂಗಳ ಕೊನೆವಾರ, ಮುಂದಿನ ತಿಂಗಳ ಮೊದಲನೇ ವಾರದಲ್ಲಿ ಭೂಮಿ ಪೂಜೆ ನೆರವೇರಿಸಲು ಸೂಕ್ತ ಕ್ರಮ ಕೈಕೊಳ್ಳಲಾಗುವುದು’ ಎಂದು ಎಚ್.ಎಂ. ರೇವಣ್ಣ ತಿಳಿಸಿದರು. ತಾಲ್ಲೂಕಿನ ಸಂಗೊಳ್ಳಿ ಗ್ರಾಮಕ್ಕೆ ರಾಯಣ್ಣನ ಸ್ಮಾರಕಗಳ ಅಭಿವೃದ್ಧಿಗಾಗಿ ಸಮಿತಿ ತಂಡದ ಜೊತೆಯಲ್ಲಿ ಇಲ್ಲಿಗೆ ಭೇಟಿ ನೀಡಿದ್ದರು.

‘ರಾಯಣ್ಣನ ಶೌರ್ಯ, ಸಾಹಸಗಳನ್ನು ಯುವ ಪಿಳಿಗೆಗೆ ಪರಿಚಯಿಸುವ ಸಲುವಾಗಿ ರಾಯಣ್ಣನ ಹುಟ್ಟೂರ ಸಂಗೊಳ್ಳಿಯಲ್ಲಿ ರಾಯಣ್ಣನ ಶೌರ್ಯ ಅಕಾಡೆಮಿ ಸ್ಥಾಪನೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಇದಕ್ಕೆ ಸಂಗೊಳ್ಳಿ ಗ್ರಾಮದ ಹತ್ತಿರ ಈಗಾಗಲೇ 100 ಎಕರೆ ಜಮೀನು ಗುರುತಿಸಲಾಗಿದೆ’ ಎಂದರು.

‘ರಾಯಣ್ಣನ ಸೈನಿಕ ಶಾಲೆ ನಿರ್ಮಾಣಕ್ಕೆ ₹ 150 ಕೋಟಿ ವೆಚ್ಚ ಮಾಡಲಾಗುತ್ತದೆ. ರಾಯಣ್ಣನ ಬಾಲ್ಯದಿಂದ, ಬಲಿದಾನದವರೆಗೆ ಹಾವೇರಿ ಜಿಲ್ಲೆ ಗೊಟಗೂರಿ ಉತ್ಸವ ಉದ್ಯಾನದ ಮಾದರಿಯಲ್ಲಿ ರೂಪಕ, ಸನ್ನಿವೇಶ಼ ನಿರ್ಮಿಸಲು ₹ 25 ಕೋಟಿ ಅನುದಾನ ನೀಡಲಾಗುವದು.

ಅಕಾಡೆಮಿ ಸ್ಥಾಪನೆಗೆ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಲ್ಲಿ ಅಧಿಕಾರಿಗಳ ಸಭೆ ಕರೆದು ಕೆಲ ನಿರ್ಣಯಗಳನ್ನು ಕೈಕೊಂಡಿದ್ದಾರೆ’ಎಂದರು.

ಇದೇ ವೇಳೆ ಗ್ರಾಮಸ್ಥರು ಸಂಗೊಳ್ಳಿ, ಬೇವಿನಕೊಪ್ಪ ಗ್ರಾಮಗಳ ಮಧ್ಯೆ ₹ 40 ಕೋಟಿ ಅನುದಾನದಲ್ಲಿ ಮಂಜೂರು ಆಗಿರುವ ಸೇತುವೆ ಭೂಮಿ ಪೂಜೆಯನ್ನು ಮುಖ್ಯಮಂತ್ರಿಗಳಿಂದ ನೆರವೇರಿಸುವಂತೆ ಮನವಿ ಮಾಡಿದರು.

ಸೂಪರಿಟೆಂಟ್ ಎಂಜಿನಿಯರ್‌ ರಾಘವೇಂದ್ರ, ಪ್ರಾಧಿಕಾರ ಆಯುಕ್ತ ಎಚ್.ಮಲ್ಲೇಶಪ್ಪ, ತಜ್ಞ ಸಮಿತಿ ಮುಖಂಡ ಕೆ.ಟಿ.ಚಿಕ್ಕಣ್ಣ ತಂಡದಲ್ಲಿ ಇದ್ದರು. ಖಾದಗಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ವೀರಭೂಮಿ ಮ್ಯೂಜಿಯಂ ವಿನ್ಯಾಸಕ ಸೂರ್ಯಪ್ರಕಾಶ, ತಾಲ್ಲೂಕು ಪಂಚಾಯ್ತಿ ಸದಸ್ಯ ಗೌಸಸಾಬ ಬುಡ್ಡೆಮುಲ್ಲಾ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಯಲ್ಲವ್ವ ಹಳೇಮನಿ, ಉಪಾಧ್ಯಕ್ಷ ಬಸವರಾಜ ಕೊಡ್ಲಿ, ಶಿಕ್ಷಕ ಬಸವರಾಜ ಕಮತ, ಗ್ರಾಮ ಪಂಚಾಯ್ತಿ ಸದಸ್ಯ ಮಲ್ಲಪ್ಪ ವಾರದ, ಮಲ್ಲಪ್ಪ ಪೂಜೇರ, ಜಿ.ಬಿ.ಕುರಿ, ಮಹೇಶ ಹಿರೇಮಠ, ಮಲಂಗಸಾಬ ಮಕಾನದಾರ, ಬಸವರಾಜ ಡೊಳ್ಳಿನ, ಪಿಡಿಒ ಕಾವೇರಿ ಬಡಿಗೇರ, ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT