ಮಧ್ಯಪ್ರದೇಶದಲ್ಲಿ ರೈತರ ಪ್ರತಿಭಟನೆ: ಪೊಲೀಸರ ಗುಂಡಿಗೆ ಇಬ್ಬರು ರೈತರು ಬಲಿ

7

ಮಧ್ಯಪ್ರದೇಶದಲ್ಲಿ ರೈತರ ಪ್ರತಿಭಟನೆ: ಪೊಲೀಸರ ಗುಂಡಿಗೆ ಇಬ್ಬರು ರೈತರು ಬಲಿ

Published:
Updated:
ಮಧ್ಯಪ್ರದೇಶದಲ್ಲಿ ರೈತರ ಪ್ರತಿಭಟನೆ: ಪೊಲೀಸರ ಗುಂಡಿಗೆ ಇಬ್ಬರು ರೈತರು ಬಲಿ

ಭೋಪಾಲ್: ಮಧ್ಯಪ್ರದೇಶದ ಮಂಡ್‍ಸೌರ್‍‍ನಲ್ಲಿ ಪ್ರತಿಭಟನೆ ನಿರತ ರೈತರ ಮೇಲೆ ಪೊಲೀಸರು ಗುಂಡು ಹಾರಿಸಿದ್ದು, ಇಬ್ಬರು ರೈತರು ಬಲಿಯಾಗಿದ್ದಾರೆ.

ಸಾಲ ಮನ್ನಾ ಮತ್ತು ಕೃಷಿ ಉತ್ಪನ್ನಗಳಿಗೆ ನ್ಯಾಯ ಬೆಲೆ ನೀಡಬೇಕು ಎಂದು ಒತ್ತಾಯಿಸಿ ಕಳೆದ 6 ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

ರೈತರ ಈ ಪ್ರತಿಭಟನೆ ಹಿನ್ನಲೆಯಲ್ಲಿ ಮಂಡ್‍ಸೌರ್, ರಾಟ್ಲಾಂ ಮತ್ತು ಉಜ್ಜೈನ್‍ನಲ್ಲಿ ಅಂತರ್ಜಾಲ ಸಂಪರ್ಕ ಸ್ಥಗಿತಗೊಳಿಸಲಾಗಿದೆ, ರಾಷ್ಟ್ರೀಯ ಕಿಸಾನ್ ಮಜದೂರ್ ಸಂಘ್ ಬುಧವಾರ ರಾಜ್ಯದಾದ್ಯಂತ ಬಂದ್‍ಗೆ ಕರೆ ನೀಡಿದೆ.

ರೈತರ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಅಕ್ಟೋಬರ್ 31ರೊಳಗೆ ರೈತರ ಸಾಲ ಮನ್ನಾ ಮಾಡಲಾಗುವುದು, ಭಾರತದಲ್ಲಿ ಇದೇ ದೊಡ್ಡ ಮಟ್ಟದ ಸಾಲ ಮನ್ನಾ ಆಗಲಿದೆ ಎಂದಿದ್ದಾರೆ.

ರೈತರ ಪ್ರತಿಭಟನೆ ವೇಳೆ ಹಲವಾರು ಕಡೆ ಪೊಲೀಸರೊಂದಿಗೆ ಸಂಘರ್ಷವೇರ್ಪಟ್ಟಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದು ಮಾತ್ರವಲ್ಲದೆ ವಾಹನಗಳಿಗೂ ಹಾನಿಯನ್ನುಂಟುಮಾಡಿದ್ದಾರೆ. ಈ ಉದ್ವಿಗ್ನ ಪರಿಸ್ಥಿತಿ ವೇಳೆ ಹಲವಾರು ಅಂಗಡಿಗಳಲ್ಲಿ ದರೋಡೆ ನಡೆದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry