5.77 ಕೋಟಿ ಮೊತ್ತದ ಹಳೇ ನೋಟುಗಳು ಜಪ್ತಿ, 15 ಜನರ ಬಂಧನ

7

5.77 ಕೋಟಿ ಮೊತ್ತದ ಹಳೇ ನೋಟುಗಳು ಜಪ್ತಿ, 15 ಜನರ ಬಂಧನ

Published:
Updated:
5.77 ಕೋಟಿ ಮೊತ್ತದ ಹಳೇ ನೋಟುಗಳು ಜಪ್ತಿ, 15 ಜನರ ಬಂಧನ

ಬೆಂಗಳೂರು: ಗರಿಷ್ಠ ಮುಖಬೆಲೆಯ ಹಳೇ ನೋಟುಗಳನ್ನು ರದ್ದುಗೊಳಿಸಿ ಎಂಟು ತಿಂಗಳು ಕಳೆದರೂ ನಗರದಲ್ಲಿ ‘ನೋಟು ಬದಲಾವಣೆ ದಂಧೆ’ ಮುಂದುವರಿದಿದ್ದು, ಬಸವನಗುಡಿ ಹಾಗೂ ಪುಟ್ಟೇನಹಳ್ಳಿ ಪೊಲೀಸರು ವಾರದ ಅಂತರದಲ್ಲಿ 15 ಮಂದಿಯನ್ನು ಬಂಧಿಸಿ 5.77 ಕೋಟಿ ಮೊತ್ತದ ನೋಟುಗಳನ್ನು ಜಪ್ತಿ ಮಾಡಿದ್ದಾರೆ.

ಗಾಂಧಿ ಬಜಾರ್, ಎಪಿಎಸ್ ಕಾಲೇಜು ಹಾಗೂ ಪುಟ್ಟೇನಹಳ್ಳಿ ಕೆರೆ ರಸ್ತೆಯಲ್ಲಿ ಪ್ರತ್ಯೇಕವಾಗಿ ದಾಳಿಗಳು ನಡೆದಿದ್ದು, ಈ ದಂಧೆ ಕೋರರಲ್ಲಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನೌಕರ, ರಿಯಲ್ ಎಸ್ಟೇಟ್ ಏಜೆಂಟ್‌ಗಳು ಹಾಗೂ ವಿವಿಧ ಬ್ಯಾಂಕ್‌ಗಳ ನೌಕರರೂ ಸೇರಿದ್ದಾರೆ.

ಇವರು ಕಮಿಷನ್ ಆಸೆಗೆ ಅನಿವಾಸಿ ಭಾರತೀಯ ಕೋಟಾದಡಿ ನೋಟು ಬದಲಾವಣೆಗೆ ಯತ್ನಿಸಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry