ದೇಶದ ಮೊದಲ ‘ವಾಲ್ವ್‌ ಮೆಟ್ರಿಕ್ ಗೇಟ್‌’ಪರಿಶೀಲನೆ

7
ಬಸವ ಸಾಗರಕ್ಕೆ ಕೇಂದ್ರ ಜಲಸಂಪನ್ಮೂಲ ರಾಜ್ಯ ಸಚಿವ ಸಂಜೀವಕುಮಾರ ಬಲ್ಯಾನ್ ಭೇಟಿ

ದೇಶದ ಮೊದಲ ‘ವಾಲ್ವ್‌ ಮೆಟ್ರಿಕ್ ಗೇಟ್‌’ಪರಿಶೀಲನೆ

Published:
Updated:
ದೇಶದ ಮೊದಲ ‘ವಾಲ್ವ್‌ ಮೆಟ್ರಿಕ್ ಗೇಟ್‌’ಪರಿಶೀಲನೆ

ಹುಣಸಗಿ (ಯಾದಗಿರಿ ಜಿಲ್ಲೆ):  ‘ಜಲಾಶಯಗಳ ಕಾಲುವೆ ನೀರಿನ ಸದ್ಬಳಕೆಗಾಗಿ ಹಾಗೂ ಪ್ರಾಯೋಗಿಕವಾಗಿ ಹುಣಸಗಿ ವಿತರಣಾ ಕಾಲುವೆಗೆ (ಎಚ್‌ಬಿಸಿ) ವಾಲ್ವ್‌ ಮೆಟ್ರಿಕ್ ಗೇಟ್‌ಗಳನ್ನು ಅಳವಡಿಸಲಾಗಿದೆ. ದೇಶದಲ್ಲಿಯೇ ಇದು ಮೊದಲ ಪ್ರಯತ್ನವಾಗಿದ್ದು, ಇದರಿಂದ  ನಿಗದಿತ ಪ್ರಮಾಣದ ನೀರನ್ನು ರೈತರಿಗೆ ಹಂಚಿಕೆ ಮಾಡಲು ಸಹಕಾರಿಯಾಗಲಿದೆ’ ಎಂದು ಕೇಂದ್ರ ಜಲಸಂಪನ್ಮೂಲ ರಾಜ್ಯ ಸಚಿವ ಸಂಜೀವಕುಮಾರ ಬಲ್ಯಾನ್ ತಿಳಿಸಿದರು.

ನಾರಾಯಣಪುರ ಬಸವಸಾಗರ ಅಣೆಕಟ್ಟು ಪುನಃಶ್ಚೇತನಕ್ಕಾಗಿ ಕೇಂದ್ರ ಸರ್ಕಾರವು ವಿಶ್ವಬ್ಯಾಂಕ್ ನೆರವಿನೊಂದಿಗೆ ಡ್ರೀಪ್ ಯೋಜನೆಯಡಿಯಲ್ಲಿ ಕೈಗೆತ್ತಿಕೊಂಡಿರುವ ವಿವಿಧ ನವೀಕರಣ ಕಾಮಗಾರಿಗಳನ್ನು ಮಂಗಳವಾರ ಪರಿಶೀಲಿಸಿದ ನಂತರ ಅವರು, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

‘₹138 ಕೋಟಿ ವೆಚ್ಚದಲ್ಲಿ 350ಕ್ಕೂ ಹೆಚ್ಚು ವಾಲ್ವ್‌ ಮೆಟ್ರಿಕ್ ಗೇಟ್‌ಗಳನ್ನು ಅಳವಡಿಸಲಾಗಿದೆ. ಒಂದೇ ಕೊಠಡಿಯಿಂದ ರಿಮೋಟ್‌ ಮೂಲಕ ಎಲ್ಲಾ ಗೇಟ್‌ಗಳನ್ನು ನಿಯಂತ್ರಿಸಬಹುದಾಗಿದೆ. ಇದರಿಂದಾಗಿ ನೀರಿನ ಸಮರ್ಪಕ ಬಳಕೆ ಸಾಧ್ಯವಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ಬಾಕಿ ಇರುವ ಕಾಲುವೆ ನವೀಕರಣಕ್ಕಾಗಿ ಅಂದಾಜು ₹700 ಕೋಟಿ ಅನುದಾನದ ಕೊರತೆ ಇದೆ. ಈ ಕುರಿತು ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಕೃಷ್ಣಾ ಜಲ ಭಾಗ್ಯ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಮಾಹಿತಿ ನೀಡಿದರು.

ಇಆರ್ಎಂ ಯೋಜನೆಯಡಿಯಲ್ಲಿ ಅಂದಾಜು ₹1,500 ಕೋಟಿ ವೆಚ್ಚದಲ್ಲಿ ನವೀಕರಣ ಮಾಡಿರುವ ಸುಮಾರು 10 ಸಾವಿರ ಕ್ಯುಸೆಕ್ ನೀರು ಹರಿಸುವ ಸಾಮರ್ಥ್ಯದ ಎಡದಂಡೆ ಮುಖ್ಯ ಕಾಲುವೆಯನ್ನೂ  ಸಚಿವರು ವೀಕ್ಷಿಸಿದರು.

ಗೇಟ್‌ ಕಾರ್ಯನಿರ್ವಹಿಸುವ ವಿಧಾನ

ವಾಲ್ವ್‌ ಮೆಟ್ರಿಕ್ ಗೇಟ್‌ಗಳಿಗೆ ನಾರಾಯಣಪುರದಲ್ಲಿ ನಿರ್ವಹಣಾ ಕೇಂದ್ರ ಇದೆ. ನಿರ್ವಹಣಾ ಕೇಂದ್ರದಿಂದ ಉಪಗ್ರಹದ ಮೂಲಕ ಗೇಟ್‌ಗಳಿಗೆ ಸಂದೇಶ ಕಳುಹಿಸುವ ವ್ಯವಸ್ಥೆ ಇದೆ. ಗೇಟ್‌ಗಳಲ್ಲಿ ರಿಸೀವರ್‌ಗಳಿರುತ್ತವೆ.  ಉಪಗ್ರಹ ಕಳುಹಿಸಿದ ಸಂದೇಶಗಳನ್ನು ಸ್ವೀಕರಿಸಿ ಗೇಟ್‌ ಕಾರ್ಯನಿರ್ವಸುತ್ತವೆ. ಎಷ್ಟು ಪ್ರಮಾಣದ ನೀರನ್ನು ಕಾಲುವೆಯಲ್ಲಿ ಹರಿಸಬೇಕು ಎಂದು ನಿರ್ವಹಣಾ ಕೇಂದ್ರದಿಂದ ನಿರ್ಧರಿಸಿ ಸಂದೇಶ ಕಳುಹಿಸಿದರೆ ಅಷ್ಟೇ ಪ್ರಮಾಣದ ನೀರು ಗೇಟ್‌ಗಳಲ್ಲಿ ಹರಿಯುತ್ತದೆ.

ಇದರಿಂದ ರೈತರ ಅಚ್ಚುಕಟ್ಟು ಪ್ರದೇಶದ ಅವಶಕ್ಯತೆ ಅನುಗುಣವಾಗಿ ನೀರಿನ ಪ್ರಮಾಣ ಹರಿಸುವ ಮೂಲಕ ಅಚ್ಚುಕಟ್ಟಿನ ಕೊನೆ ಭಾಗದ ರೈತರಿಗೂ ನೀರು ಕೊಡಲು ಸಾಧ್ಯವಾಗುತ್ತದೆ ಎಂದು ನಿಗಮದ  ಮುಖ್ಯ ಎಂಜಿನಿಯರ್ ಟಾಟಾ ಶಿವನ್ ಅವರು ವಾಲ್ವ್‌ ಮೆಟ್ರಿಕ್ ಗೇಟ್‌ಗಳ ಕಾರ್ಯ ವಿಧಾನವನ್ನು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry