ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅನೈತಿಕ ಚಟುವಟಿಕೆ ತಾಣವಾದ ಹೆರಿಗೆ ಆಸ್ಪತ್ರೆ’

Last Updated 6 ಜೂನ್ 2017, 19:38 IST
ಅಕ್ಷರ ಗಾತ್ರ

ಬೆಂಗಳೂರು: ಸಿಬ್ಬಂದಿ ಕೊರತೆಯ ಕಾರಣ ನೀಡಿ ಮುಚ್ಚಿರುವ ಹೆಸರಘಟ್ಟ ಹೆರಿಗೆ ಆಸ್ಪತ್ರೆಯು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

‘2005ರಲ್ಲಿ ಈ ಆಸ್ಪತ್ರೆಯನ್ನು ಉದ್ಘಾಟಿಸಲಾಗಿತ್ತು. 15 ದಿನಗಳು ಮಾತ್ರ ಇಲ್ಲಿ ವೈದ್ಯರು ಕೆಲಸ ಮಾಡಿದ್ದರು. ಬಳಿಕ ಸಿಬ್ಬಂದಿ ಕೊರತೆಯಿಂದ ಆಸ್ಪತ್ರೆಗೆ ಬೀಗ ಹಾಕಿದ್ದರು. ಇದರಿಂದ ಹೆರಿಗೆಗಾಗಿ ಖಾಸಗಿ ಆಸ್ಪತ್ರೆಗಳಿಗೆ ಹೋಗಬೇಕಾಗಿದೆ’ ಎಂದು ಸ್ಥಳೀಯರು ದೂರಿದರು.

ಪ್ರಜಾಹಿತ ವೇದಿಕೆಯ ಅಧ್ಯಕ್ಷ ಶಾಂತ ಕುಮಾರ್ ಮಾತನಾಡಿ, ‘ಆಸ್ಪತ್ರೆಯ ಎರಡು ಕೊಠಡಿಗಳಲ್ಲಿ ಈಗ ಅಂಗನವಾಡಿ ನಡೆಸಲಾಗುತ್ತಿದೆ. ಕಟ್ಟಡದ ಕಿಟಕಿಯ ಗಾಜುಗಳು ಒಡೆದು ಹೋಗಿವೆ. ವಿಪರೀತ ಸೊಳ್ಳೆಗಳ ಕಾಟ ಇದೆ’ ಎಂದರು.

‘ಕೆಲವರು ಆಸ್ಪತ್ರೆಯನ್ನು ಅನೈತಿಕ ಚಟುವಟಿಕೆಗಳ ತಾಣವನ್ನಾಗಿ ಮಾಡಿಕೊಂಡಿದ್ದಾರೆ. ಅಲ್ಲದೆ, ಟೈರ್‌ ಶಾಪ್‌ನವರು ಟೈರ್‌ಗಳನ್ನು ಕಟ್ಟಡದೊಳಗೇ ಇಟ್ಟುಕೊಂಡಿದ್ದಾರೆ. ಈ ಆಸ್ಪತ್ರೆಯನ್ನು ಕೂಡಲೇ ಪುನಃ ಅರಂಭಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT