ಕೋಳಿ ಅಂಗಡಿ ತ್ಯಾಜ್ಯದಿಂದ ದುರ್ವಾಸನೆ

7

ಕೋಳಿ ಅಂಗಡಿ ತ್ಯಾಜ್ಯದಿಂದ ದುರ್ವಾಸನೆ

Published:
Updated:
ಕೋಳಿ ಅಂಗಡಿ ತ್ಯಾಜ್ಯದಿಂದ ದುರ್ವಾಸನೆ

ಗುಡಿಬಂಡೆ: ತಾಲ್ಲೂಕಿನ ಬೀಚಗಾನಹಳ್ಳಿ ಕ್ರಾಸ್‌ನಲ್ಲಿರುವ ಬೇಕರಿ ಹಿಂದೆಯೇ ರಾಶಿರಾಶಿಯಾಗಿ ಬಿದ್ದಿರುವ ಕೋಳಿ ಅಂಗಡಿ ತ್ಯಾಜ್ಯ ದುರ್ವಾಸನೆ ಬೀರುತ್ತಿದೆ. ಇದರಿಂದಾಗಿ ಜನರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ದೂರುತ್ತಾರೆ.

ಈ ರಸ್ತೆಯು ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಇದ್ದು, ನಿತ್ಯ ವಿವಿಧ ಭಾಗದಿಂದ ಪ್ರಯಾಣಿಕರು ಬರುತ್ತಾರೆ. ಸಮೀಪದಲ್ಲಿಯೇ ಇರುವ ಬೇಕರಿಯಲ್ಲಿ ತಿನ್ನಲು ಬರುವವರಿಗೆ ಕೋಳಿ ತ್ಯಾಜ್ಯದ ವಾಸನೆ ಮೂಗಿಗೆ ರಾಚುವುದರಿಂದ ಬೇಕರಿಗೆ ಬರುವವರ ಸಂಖೆ ಕಡಿಮೆ ಆಗಿದೆ. ಅಲ್ಲದೆ ವಾಯುವಿಹಾರಕ್ಕೆ ಹೋಗುವವರಿಗೆ, ವಾಹನ ಸವಾರರಿಗೆ, ರೈತರಿಗೆ, ಅಂಗಡಿಗಳಿಗೆ ಬರುವ ಜನರಿಗೆ ಈ ತ್ಯಾಜ್ಯದಿಂದಾಗಿ ಕಿರಿಕಿರಿ ಉಂಟಾಗಿದೆ.

ಕೋಳಿ ಅಂಗಡಿಗಳ ತ್ಯಾಜ್ಯದಿಂದಾಗಿ ಜನರಿಗೆ ರೋಗಭೀತಿ ಉಂಟಾಗಿದೆ. ತಕ್ಷಣ ತಿರುಮಣಿ ಗ್ರಾಮ ಪಂಚಾಯಿತಿ ಅಧಿಕಾರಿಗಳು  ಕೋಳಿ ತ್ಯಾಜ್ಯ ವಿಲೇವಾರಿ ಮಾಡಲು ಕ್ರಮ ತಗೆದುಕೊಳ್ಳಬೇಕು ಎಂದು ವೆಂಕಟೇಶ್, ಮಾದೇಶ್, ಪಾಪರೆಡ್ಡಿ ಒತ್ತಾಯಿಸಿದರು.

**

ಇಲ್ಲಿ ಕೋಳಿ ಅಂಗಡಿಗಳ ತ್ಯಾಜ್ಯ ಸುರಿಯುವುದನ್ನು ಮುಂದುವರಿಸಿದರೆ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ. ಅಲ್ಲದೆ ತ್ಯಾಜ್ಯ ವಿಲೇವಾರಿ ಮಾಡದ ಕಾರಣ ನೊಣ, ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ

-ಬಾಲಗಂಗಾಧರ್, ಗುಡಿಬಂಡೆ

ಕೋಳಿ ಅಂಗಡಿ ಮಾಲೀಕರಿಗೆ ಹಲವು ಸಲ ನೋಟಿಸ್‌ ನೀಡಿದ್ದೇವೆ. ಆದರೂ ಅವರು ಎಚ್ಚೆತ್ತುಕೊಂಡಿಲ್ಲ. ಸ್ವಚ್ಛತೆ ದೃಷ್ಟಿಯಿಂದ ಕೂಡಲೇ  ಕ್ರಮ ಕೈಗೊಳ್ಳಲಾಗುವುದು

-ಸುಭಾನ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ತಿರುಮಣಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry