ಬಿಗ್‌ ಬಿ ‘102 ನಾಟ್‌ ಔಟ್‌’ VS ವಿದ್ಯಾ ಬಾಲನ್‌ ‘ತುಮ್ಹಾರಿ ಸುಲೂ’

7

ಬಿಗ್‌ ಬಿ ‘102 ನಾಟ್‌ ಔಟ್‌’ VS ವಿದ್ಯಾ ಬಾಲನ್‌ ‘ತುಮ್ಹಾರಿ ಸುಲೂ’

Published:
Updated:
ಬಿಗ್‌ ಬಿ ‘102 ನಾಟ್‌ ಔಟ್‌’ VS ವಿದ್ಯಾ ಬಾಲನ್‌ ‘ತುಮ್ಹಾರಿ ಸುಲೂ’

ಮುಂಬೈ: ಬಾಲಿವುಡ್‌ ಬಿಗ್‌ ಬಿ ಅಮಿತಾಬ್‌ ಬಚ್ಚನ್‌ ಮತ್ತು ಹಿರಿಯ ನಟ ರಿಷಿ ಕಪೂರ್‌ ನಟನೆಯ ‘102 ನಾಟ್‌ ಔಟ್‌’ ಮತ್ತು ವಿದ್ಯಾ ಬಾಲನ್‌ ನಟನೆಯ ‘ತುಮ್ಹಾರಿ ಸುಲೂ’ ಚಿತ್ರಗಳು ಒಂದೇ ದಿನ ಬಿಡುಗಡೆಯಾಗಲಿವೆ.

ಡಿಸೆಂಬರ್‌ 1ರಂದು ಈ ಎರಡೂ ಚಿತ್ರಗಳು ತೆರೆ ಮೇಲೆ ಬರಲಿವೆ. ಈ ಬಹುನಿರೀಕ್ಷಿತ ಚಿತ್ರಗಳಲ್ಲಿ ಪ್ರೇಕ್ಷಕನ ಮನಸ್ಸು ಯಾವ ಚಿತ್ರದ ಕಡೆಗೆ ಒಲಿಯುತ್ತದೆ ಎಂದು ಬಾಲಿವುಡ್‌ ಸಿನಿ ತಜ್ಞರು ಲೆಕ್ಕಾಚಾರ ಹಾಕುತ್ತಿದ್ದಾರೆ.

‘102 ನಾಟ್‌ ಔಟ್‌’ ಚಿತ್ರದಲ್ಲಿ ಅಮಿತಾಬ್‌ ಬಚ್ಚನ್‌ 102 ವರ್ಷದ ವೃದ್ಧರ ಪಾತ್ರದಲ್ಲಿ ಹಾಗೂ ರಿಷಿ ಕಪೂರ್‌ 75 ವರ್ಷದ ಅಮಿತಾಬ್‌ ಪುತ್ರನ ಪಾತ್ರದಲ್ಲಿ ನಟಿಸಿದ್ದಾರೆ.ಸೌಮ್ಯ ಜೋಷಿ ರಚನೆಯ ಪ್ರಸಿದ್ಧ ಗುಜರಾತಿ ನಾಟಕ ‌‘102 ನಾಟ್‌ ಔಟ್‌’ ಅನ್ನು ಅದೇ ಹೆಸರಿನಲ್ಲಿ ತೆರೆ ಮೇಲೆ ತರಲಾಗುತ್ತಿದೆ.‌ ವಯಸ್ಸಾದ ತಂದೆ– ಮಗನ ನಡುವಿನ ಸಂಬಂಧದ ಕಥೆ ಇದರಲ್ಲಿದೆ. ಉಮೇಶ್‌ ಶುಕ್ಲಾ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಸುರೇಶ್‌ ತ್ರಿವೇಣಿ ನಿರ್ದೇಶನದ ‘ತುಮ್ಹಾರಿ ಸುಲೂ’ಚಿತ್ರದಲ್ಲಿ ವಿದ್ಯಾ ಬಾಲನ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನೇಹಾ ದೂಪಿಯಾ, ಮಾನವ್‌ ಕೌಲ್‌ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಬಿಗ್‌ ಬಿ, ರಿಷಿ ಕಪೂರ್‌ ಜೋಡಿಯ ‘102’ ಚಿತ್ರದ ಮುಂದೆ ವಿದ್ಯಾ ಬಾಲನ್‌ ಚಿತ್ರ ಗೆಲ್ಲುತ್ತದೆಯೇ ಎಂಬುದು ಸದ್ಯದ ಕುತೂಹಲ. ಡಿಸೆಂಬರ್‌ 1ರಂದು ಈ ಕುತೂಹಲಕ್ಕೆ ತೆರೆ ಬೀಳಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry