‘ದಿ ಆಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌’ ಚಿತ್ರಕ್ಕೆ ನಿರಾಕ್ಷೇಪಣಾ ಪತ್ರ ಪಡೆಯಬೇಕಾದ್ದು ಕಡ್ಡಾಯ: ಪಹ್ಲಜ್‌ ನಿಹಲಾನಿ

7
ಮನಮೋಹನ್‌ ಸಿಂಗ್‌ ಪಾತ್ರದಲ್ಲಿ ಅನುಪಮ್‌ ಖೇರ್‌

‘ದಿ ಆಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌’ ಚಿತ್ರಕ್ಕೆ ನಿರಾಕ್ಷೇಪಣಾ ಪತ್ರ ಪಡೆಯಬೇಕಾದ್ದು ಕಡ್ಡಾಯ: ಪಹ್ಲಜ್‌ ನಿಹಲಾನಿ

Published:
Updated:
‘ದಿ ಆಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌’ ಚಿತ್ರಕ್ಕೆ ನಿರಾಕ್ಷೇಪಣಾ ಪತ್ರ ಪಡೆಯಬೇಕಾದ್ದು ಕಡ್ಡಾಯ: ಪಹ್ಲಜ್‌ ನಿಹಲಾನಿ

ಮುಂಬೈ: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಜೀವನ ಆಧಾರಿತ ಚಿತ್ರ ‘ದಿ ಆಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌’ನಲ್ಲಿ ನಟಿಸುತ್ತಿರುವುದಾಗಿ ಬಾಲಿವುಡ್‌ ನಟ ಅನುಪಮ್‌ ಖೇರ್‌ ಬುಧವಾರ ಟ್ವೀಟ್‌ ಮಾಡಿದ್ದಾರೆ.

ಸಂಜಯ ಬಾರು ರಚಿಸಿರುವ ‘ದಿ ಆಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌’ ಪುಸ್ತಕವನ್ನು ಆಧರಿಸಿ ಈ ಚಿತ್ರ ನಿರ್ಮಿಸಲಾಗುತ್ತಿದೆ. ಚಿತ್ರದ ಮೊದಲ ಪೋಸ್ಟರ್‌ ಬುಧವಾರವಷ್ಟೇ ಬಹಿರಂಗವಾಗಿದೆ.

ಅನುಪಮ್‌ ಖೇರ್‌ ಈ ಚಿತ್ರದಲ್ಲಿ ಮನಮೋಹನ್‌ ಸಿಂಗ್‌ ಅವರ ಪಾತ್ರ ನಿರ್ವಹಿಸುತ್ತಿರುವುದಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಅಧ್ಯಕ್ಷ ಪಹ್ಲಜ್‌ ನಿಹಲಾನಿ ಸಂತಸ ವ್ಯಕ್ತಪಡಿಸಿದ್ದಾರೆ. ಅದರ ಜತೆಯಲ್ಲೇ ಈ ಚಿತ್ರದಲ್ಲಿ ಯಾವೆಲ್ಲಾ ಪಾತ್ರಗಳಿವೆಯೋ ಅವರಿಂದ ನಿರಾಕ್ಷೇಪಣಾ ಪತ್ರ ಪಡೆಯಬೇಕಾದ್ದು ಕಡ್ಡಾಯ ಎಂದು ಹೇಳಿದ್ದಾರೆ.

ಪಹ್ಲಜ್‌ ನಿಹಲಾನಿ

‘ಅನುಪಮ್‌ ಖೇರ್‌ ಉತ್ತಮ ನಟ. ತನ್ನ 28ನೇ ವಯಸ್ಸಿನಲ್ಲೇ ವೃದ್ಧರ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡವರು. ಮನಮೋಹನ್‌ ಸಿಂಗ್‌ ಪಾತ್ರಕ್ಕೆ ಅವರು ನ್ಯಾಯ ಒದಗಿಸುತ್ತಾರೆ ಎಂಬ ವಿಶ್ವಾಸ ನನಗಿದೆ’ ಎಂದಿರುವ ನಿಹಲಾನಿ, ‘ಇದು ಜೀವನಾಧಾರಿತ ಚಿತ್ರವಾಗಿರುವುದರಿಂದ ಈ ಚಿತ್ರದಲ್ಲಿ ಬರುವ ಪಾತ್ರಗಳಾದ ಮನಮೋಹನ್‌ ಸಿಂಗ್‌, ಸೋನಿಯಾ ಗಾಂಧಿ ಮತ್ತಿತರರಿಂದ ನಿರಾಕ್ಷೇಪಣಾ ಪತ್ರ ಪಡೆಯುವುದು ಕಡ್ಡಾಯ’ ಎಂದು ತಿಳಿಸಿದ್ದಾರೆ.

‘ಚಿತ್ರ ನಿರ್ಮಿಸುತ್ತಿರುವ ಸುನಿಲ್‌ ಬೊಹ್ರ ಮತ್ತು ಅಶೋಕ್‌ ಪಂಡಿತ್‌ ಅವರು ಚಿತ್ರದ ಪಾತ್ರಗಳಾಗಿ ಬಳಸಿಕೊಳ್ಳುವ ರಾಜಕೀಯ ಮುಖಂಡರಿಂದ ನಿರಾಕ್ಷೇಪಣಾ ಪತ್ರವನ್ನು ತಪ್ಪದೇ ಪಡೆದುಕೊಳ್ಳಬೇಕು. ಸಿಬಿಎಫ್‌ಸಿ ಅಧ್ಯಕ್ಷನಾಗಿ ನನ್ನ ಅವಧಿ 2018ರ ಜನವರಿಗೆ ಮುಗಿಯಲಿದೆ. ಆ ಬಳಿಕವೇ ಈ ಚಿತ್ರ ಸೆನ್ಸಾರ್‌ಶಿಪ್‌ಗಾಗಿ ಸಿಬಿಎಫ್‌ಸಿಗೆ ಬರುವ ಸಾಧ್ಯತೆ ಇದೆ. ನಾನು ಮಂಡಳಿಯಲ್ಲಿ ಇರಲಿ ಬಿಡಲಿ, ನಿಯಮ ಪಾಲಿಸುವುದು ಕಡ್ಡಾಯ’ ಎಂದು ನಿಹಲಾನಿ ಹೇಳಿದ್ದಾರೆ.

‘ಈ ನಿಯಮದ ಬಗ್ಗೆ ಅನುಪಮ್‌ ಖೇರ್‌ ಅವರಿಗೆ ಅರಿವಿದೆ ಎಂದುಕೊಳ್ಳುತ್ತೇನೆ. ಏಕೆಂದರೆ ಅವರು ಈ ಹಿಂದೆ ಸಿಬಿಎಫ್‌ಸಿ ಅಧ್ಯಕ್ಷರಾಗಿದ್ದವರು. ಇಲ್ಲಿನ ನಿಯಮಗಳನ್ನು ಅವರು ಇಷ್ಟು ಬೇಗ ಮರೆತಿರುವುದಿಲ್ಲ. ಅಲ್ಲದೆ ಚಿತ್ರ ನಿರ್ದೇಶಿಸುತ್ತಿರುವ ಹನ್‌ಸಲ್‌ ಮೆಹ್ತಾ ಅವರಿಗೂ ಈ ನಿಯಮದ ಬಗ್ಗೆ ತಿಳಿದಿರುತ್ತದೆ’ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry