ಕಸ ವಿಲೇವಾರಿಗೆ ವಿರೋಧ ಮುಂದುವರಿದ ಧರಣಿ

7

ಕಸ ವಿಲೇವಾರಿಗೆ ವಿರೋಧ ಮುಂದುವರಿದ ಧರಣಿ

Published:
Updated:
ಕಸ ವಿಲೇವಾರಿಗೆ ವಿರೋಧ ಮುಂದುವರಿದ ಧರಣಿ

ಬೆಂಗಳೂರು: ಕಲ್ಲಿನ ಕ್ವಾರಿಗಳಲ್ಲಿ ಕಸ ವಿಲೇವಾರಿ ಮಾಡುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕ್ರಮ ವಿರೋಧಿಸಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಬುಧವಾರವೂ ಮುಂದುವರಿದಿದೆ.

ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಅವರು ಹೋರಾಟ ಬೆಂಬಲಿಸಿ ಧರಣಿಯಲ್ಲಿ ಪಾಲ್ಗೊಂಡಿದ್ದರು.

‘ಕಸ ವಿಲೇವಾರಿ ಮಾಡುತ್ತಿರುವ ಜಾಗದ ಪಕ್ಕದಲ್ಲಿಯೇ ಶಾಲಾ –ಕಾಲೇಜುಗಳಿವೆ. ಅಲ್ಲದೆ, ದುರ್ವಾಸನೆಯಿಂದ ಜನರು ಸಂಕಷ್ಟ ಪಡುತ್ತಿದ್ದರೂ ಬಿಬಿಎಂಪಿ ಈ ಬಗ್ಗೆ ಚಿಂತಿಸದೆ ಹಣ ಕೊಳ್ಳೆಹೊಡೆಯುವುದರಲ್ಲೇ ತೊಡಗಿದೆ’ ಎಂದು ಆರೋಪಿಸಿದರು.

ಬಿಬಿಎಂಪಿ ಸದಸ್ಯ ಮುನೀಂದ್ರ ಕುಮಾರ್‌, ‘ಕಸ ಹಾಕುವುದನ್ನು ತಕ್ಷಣ ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ಎಲ್ಲರೂ ಮನೆಗಳಿಂದ ಹೊರಗೆ ಬಂದು ಕಸದ ಲಾರಿಗಳನ್ನು ತಡೆದು ಹೋರಾಟ ಮಾಡುತ್ತೇವೆ’ ಎಂದು ಎಚ್ಚರಿಸಿದರು.

ಕರ್ನಾಟಕ ರಕ್ಷಣಾ ವೇದಿಕೆಯ ಬ್ಯಾಟರಾಯನಪುರ ಕ್ಷೇತ್ರದ ಅಧ್ಯಕ್ಷ ಸುರೇಶ್‌, ‘ಪ್ರತಿದಿನ 83 ಲೋಡ್‌ ಪ್ರತ್ಯೇಕಿಸಿದ ಕಸವನ್ನು ಮಾತ್ರ ವಿಲೇವಾರಿ ಮಾಡುತ್ತೇವೆ ಎಂದು ಮಾತ್ರ ಅನುಮತಿ ಪಡೆದಿದ್ದರು. ಆದರೆ, 300ಕ್ಕೂ ಹೆಚ್ಚು ಲೋಡ್‌ ಬೇರ್ಪಡಿಸದ ಕಸವನ್ನು ಅವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry