ತೆಲಂಗಾಣ ವ್ಯಕ್ತಿ ಮೇಲೆ ಗುಂಡಿನ ದಾಳಿ: ಗಂಭೀರ

7

ತೆಲಂಗಾಣ ವ್ಯಕ್ತಿ ಮೇಲೆ ಗುಂಡಿನ ದಾಳಿ: ಗಂಭೀರ

Published:
Updated:
ತೆಲಂಗಾಣ ವ್ಯಕ್ತಿ ಮೇಲೆ ಗುಂಡಿನ ದಾಳಿ: ಗಂಭೀರ

ಕ್ಯಾಲಿಫೋರ್ನಿಯಾ: ಅಪರಿಚಿತರ ಗುಂಪೊಂದು ತೆಲಂಗಾಣ ಮೂಲದ ಮುಬೀನ್ ಅಹಮದ್ (26) ಎಂಬುವರ ಮೇಲೆ ಗುಂಡು ಹಾರಿಸಿರುವ ಘಟನೆ ಕ್ಯಾಲಿಫೋರ್ನಿಯಾದಲ್ಲಿ ಜೂನ್‌ 4ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಜೂನ್‌ 4ರ ಸಂಜೆ 6 ಗಂಟೆ ಸುಮಾರಿಗೆ ಮುಬೀನ್‌ ಮೇಳೆ ಗುಂಡು ಹಾರಿಸಿದ್ದು, ಅವರ ಪರಿಸ್ಥಿತಿ ಗಂಭೀರವಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮುಬೀನ್ ಅಹಮದ್ ಅವರು ಎಲೆಕ್ಟ್ರಾನಿಕ್ ಆಂಡ್ ಕಮ್ಯೂನಿಕೇಶನ್‌ನಲ್ಲಿ ಬಿ.ಟೆಕ್ ಪದವಿ ಪಡೆದಿದ್ದರು. ಬಳಿಕ ಇದೇ ವಿಷಯದಲ್ಲಿ ಎಂ.ಟೆಕ್ ವ್ಯಾಸಂಗ ಮಾಡಲು 2015ರ ಫೆಬ್ರುವರಿಯಲ್ಲಿ ಅಮೆರಿಕಕ್ಕೆ ತೆರಳಿದ್ದರು. ಕಳೆದ ಎರಡು ತಿಂಗಳ ಹಿಂದೆ ಅವರ ವಿದ್ಯಾಭ್ಯಾಸ ಮುಗಿದಿತ್ತು. ಬಳಿಕ ಅವರು ಕ್ಯಾಲಿಫೋರ್ನಿಯಾ ಬಳಿಯ ಒಂದು ಡಿಪಾರ್ಟ್‌ಮೆಂಟಲ್‌ ಸ್ಟೋರ್‌ನಲ್ಲಿ ಕೆಲಸ ಮಾಡುತ್ತಿದ್ದರು.

‘ಮುಬೀನ್ ಅವರು ಜೂನ್‌ 4ರಂದು ಸ್ಟೋರ್‌ನಲ್ಲಿ ಕೆಲಸ ಮುಗಿಸಿ ಹೊರಡಲು ಮುಂದಾಗಿದ್ದ ವೇಳೆ ಅಲ್ಲಿಗೆ ಬಂದಿರುವ ದುಷ್ಕರ್ಮಿಗಳ ಗುಂಪು ಹಣ ಮತ್ತು ಮೊಬೈಲ್‌ ಕೊಡುವಂತೆ ಮುಬೀನ್‌ ಅವರನ್ನು ಒತ್ತಾಯಿಸಿದೆ.

ಇದಕ್ಕೆ ಒಪ್ಪದ ಮುಬೀನ್‌ ಆ ಗುಂಪಿನೊಂದಿಗೆ ವಾಗ್ವಾದ ನಡೆಸಿದ್ದಾರೆ. ಆಗ ಗುಂಪಿನಲ್ಲಿದ್ದ ಒಬ್ಬ ದುಷ್ಕರ್ಮಿ ಮುಬೀನ್‌ ಮೇಲೆ ಗುಂಡು ಹಾರಿಸಿದ್ದಾನೆ’ ಎಂದು ಮುಬೀನ್‌ ಸಂಬಂಧಿ ಮುಫ್ತಿ ಅಸ್ಲಾಮ್‌ ಒಸ್ಮಾನ್‌ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry