ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಧನಕ್ಕೆ ದಿನಕ್ಕೊಂದು ದರ

ಪ್ರಾಯೋಗಿಕ ಯೋಜನೆ ಯಶಸ್ವಿ
Last Updated 8 ಜೂನ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಇದೇ 16ರ ನಂತರ ದೇಶದಾದ್ಯಂತ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಪ್ರತಿ ದಿನವೂ ಪರಿಷ್ಕರಣೆ ಆಗಲಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ತೈಲ ಬೆಲೆಗೆ ಅನುಗುಣವಾಗಿ ನಿತ್ಯವೂ ಬೆಲೆ ನಿಗದಿಪಡಿಸಲು ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳು ನಿರ್ಧರಿಸಿವೆ. ಶ್ರೀಮಂತ ದೇಶಗಳಲ್ಲಿ ಈ ಮಾದರಿಯನ್ನು ಅನುಸರಿಸಲಾಗುತ್ತಿದೆ.

ಈ ಮಾದರಿಯನ್ನು ಉದಯಪುರ, ಜಮ್‌ಶೆಡ್‌ಪುರ, ಪುದುಚೇರಿ, ಚಂಡೀಗಡ ಮತ್ತು ವಿಶಾಖಪಟ್ಟಣಗಳಲ್ಲಿ ಮೇ 1ರಿಂದ ಪ್ರಾಯೋಗಿಕವಾಗಿ ಜಾರಿ ಮಾಡಲಾಗಿತ್ತು. ಅದು ಯಶಸ್ವಿಯಾಗಿದೆ. ಹಾಗಾಗಿ ಅದನ್ನು ದೇಶದಾದ್ಯಂತ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು  ಭಾರತೀಯ ತೈಲ ನಿಗಮ (ಐಒಸಿ) ಹೇಳಿದೆ.

ಈಗ ಅಂತರರಾಷ್ಟ್ರೀಯ ಬೆಲೆಯ ಸರಾಸರಿ ಆಧಾರದಲ್ಲಿ ತಿಂಗಳಲ್ಲಿ ಎರಡು ಬಾರಿ ಅಂದರೆ, ಪ್ರತಿ 1 ಮತ್ತು 16ನೇ ದಿನಾಂಕದಂದು ತೈಲ ಬೆಲೆ ಪರಿಷ್ಕರಣೆ ಮಾಡಲಾಗುತ್ತಿದೆ. ತೈಲ ಬೆಲೆ ಪರಿಷ್ಕರಣೆ ಮಾಡುವಾಗ ಡಾಲರ್‌ ಎದುರು ರೂಪಾಯಿ ಏರಿಳಿತವನ್ನೂ ಗಣನೆಗೆ  ತೆಗೆದುಕೊಳ್ಳಲಾಗುತ್ತಿದೆ.

ಬೆಲೆ ಮಾಹಿತಿ
* ಗ್ರಾಹಕರಿಗೆ ದಿನವೂ ತೈಲ ಬೆಲೆ ತಿಳಿಸುವ ವಿಧಾನಗಳನ್ನು ತೈಲ ಕಂಪೆನಿಗಳು ರೂಪಿಸಲಿವೆ
ಬೆಲೆ ತಿಳಿಸುವ ಸಂಭಾವ್ಯ ವಿಧಾನಗಳು
* ಪತ್ರಿಕೆಗಳಲ್ಲಿ ಪ್ರಕಟಿಸುವುದು * ಬಂಕ್‌ಗಳಲ್ಲಿ ದೊಡ್ಡದಾಗಿ ಪ್ರದರ್ಶಿಸುವುದು * ಗ್ರಾಹಕರಿಗೆ ಎಸ್ಎಂಎಸ್‌ * ಮೊಬೈಲ್‌ ಆ್ಯಪ್‌ ಅಭಿವೃದ್ಧಿ
ದರ ವ್ಯತ್ಯಾಸ
* ನಗರದಿಂದ ನಗರಕ್ಕೆ ಮಾತ್ರವಲ್ಲದೆ, ಒಂದೇ ನಗರದಲ್ಲಿ ಇರುವ ಬೇರೆ ಬೇರೆ ಕಂಪೆನಿಗಳ  ಬಂಕ್‌ಗಳ ನಡುವೆಯೂ ದರದಲ್ಲಿ ಸ್ವಲ್ಪಮಟ್ಟಿನ ವ್ಯತ್ಯಾಸ ಇರಲಿದೆ.
ರಾಜಕೀಯ ಪ್ರಭಾವ
* 2010ರ ಜೂನ್‌ ನಂತರ ಪೆಟ್ರೋಲ್‌ ಮತ್ತು 2014ರ ಅಕ್ಟೋಬರ್‌ ನಂತರ ಡೀಸೆಲ್‌ ದರವನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಲಾಗಿತ್ತು. ಹಾಗಾಗಿ ತೈಲ ಕಂಪೆನಿಗಳಿಗೆ ಬೆಲೆ ನಿಗದಿ ಮಾಡುವ ಸಂಪೂರ್ಣ ಸ್ವಾತಂತ್ರ್ಯ ಇದೆ. ಹಾಗಿದ್ದರೂ ಬೆಲೆ ನಿಗದಿಯಲ್ಲಿ ರಾಜಕೀಯ ಅಂಶಗಳು ಕೆಲವೊಮ್ಮೆ ಪ್ರಭಾವ ಬೀರುತ್ತವೆ.

ಪ್ರಯೋಜನಗಳು

* ಪ್ರತಿ ದಿನದ ಮಾರುಕಟ್ಟೆ ಪರಿಸ್ಥಿತಿಗೆ ಅನುಗುಣವಾಗಿ ದರ ನಿರ್ಧಾರ

* ಒಮ್ಮೆಲೆ ಭಾರಿ ಏರಿಕೆ ಆಗದು
* ಹೆಚ್ಚು ಪಾರದರ್ಶಕತೆ ಸಾಧ್ಯ
* ಸಂಸ್ಕರಣ ಘಟಕದಿಂದ ಡಿಪೊಗಳಿಗೆ ಮತ್ತು ಅಲ್ಲಿಂದ ಪೆಟ್ರೋಲ್‌ ಬಂಕ್‌ಗಳಿಗೆ ಪೂರೈಕೆ ಸುಲಲಿತವಾಗಲಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT