ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹತ್ವಾಕಾಂಕ್ಷೆ ಗುರಿ ಕೈಬಿಟ್ಟ ಇನ್ಫೊಸಿಸ್‌

Last Updated 8 ಜೂನ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: 2021ರಷ್ಟೊತ್ತಿಗೆ ಸಂಸ್ಥೆಯ ವಾರ್ಷಿಕ ವರಮಾನವನ್ನು ₹1.30 ಲಕ್ಷ ಕೋಟಿಗೆ ಹೆಚ್ಚಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಇನ್ಫೊಸಿಸ್‌ ಕೈಬಿಟ್ಟಿದೆ.

2016–17ನೇ ಹಣಕಾಸು ವರ್ಷದ ವಾರ್ಷಿಕ ವರದಿಯಲ್ಲಿ ಈ ವರಮಾನ ಗುರಿ ಸಾಧಿಸುವ ಪ್ರಸ್ತಾವವನ್ನು ಸದ್ದಿಲ್ಲದೆ ಕೈಬಿಡಲಾಗಿದೆ. ಅದಕ್ಕೂ ಹಿಂದಿನ ವರದಿಗಳಲ್ಲಿ ಇದನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿತ್ತು. ಸದ್ಯಕ್ಕೆ ಸಂಸ್ಥೆಯ ವಾರ್ಷಿಕ ವರಮಾನವು ₹ 66,300 ಕೋಟಿಗಳಷ್ಟಿದೆ.

ದೇಶದ ಎರಡನೆ ಅತಿದೊಡ್ಡ ಸಾಫ್ಟ್‌ವೇರ್‌ ಸೇವಾ ರಫ್ತು ಸಂಸ್ಥೆಯಾಗಿರುವ ಇನ್ಫೊಸಿಸ್‌ನ ಈ ದೀರ್ಘಾವಧಿ ವರಮಾನ ಹೆಚ್ಚಳ ಗುರಿ ಕೈಬಿಡುವ ನಿರ್ಧಾರಕ್ಕೂ ಸಂಸ್ಥೆಯ ಸಿಇಒ ವಿಶಾಲ್‌ ಸಿಕ್ಕಾ ಅವರ ವೇತನವನ್ನೂ ಕಡಿಮೆ ಮಾಡಿರುವುದಕ್ಕೂ ನೇರ ಸಂಬಂಧ ಇದೆಯೇ ಎನ್ನುವುದು ದೃಢಪಟ್ಟಿಲ್ಲ.

ಈ ದೀರ್ಘಾವಧಿಯಲ್ಲಿನ ವರಮಾನ ಗುರಿ ಸಾಧಿಸುವುದಕ್ಕೆ ಸಂಬಂಧಿಸಿದಂತೆ ಸಿಕ್ಕಾ ಅವರಿಗೆ ಈ ಮೊದಲು ವರ್ಷಕ್ಕೆ ₹ 72.15 ಕೋಟಿಗಳಷ್ಟು ವೇತನ ಮತ್ತು ಭತ್ಯೆ ನಿಗದಿ ಮಾಡಲಾಗಿತ್ತು.  ಸದ್ಯಕ್ಕೆ ಅದು ₹ 43.55 ಕೋಟಿಗಳಿಗೆ ಇಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT